ಸಮಯ ವ್ಯರ್ಥ ಮಾಡದೆ ಭವಿಷ್ಯ ರೂಪಿಸಿಕೊಳ್ಳಬೇಕು

ಸಮಯ ವ್ಯರ್ಥ ಮಾಡದೆ ಭವಿಷ್ಯ ರೂಪಿಸಿಕೊಳ್ಳಬೇಕು

ವಿದ್ಯಾರ್ಥಿಗಳಿಗೆ ಕಾಗಿನೆಲೆ ಶ್ರೀ ಕರೆ

ಮಲೇಬೆನ್ನೂರು, ಜೂ. 1- ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ, ಸದುಪಯೋಗಪಡಿಸಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕಾಗಿನೆಲೆ ಕನಕ ಗುರು ಪೀಠದ ಶ್ರೀ  ನಿರಂಜನಾನಂದಪುರಿ ಸ್ವಾಮೀಜಿ ಕರೆ ನೀಡಿದ್ದಾರೆ.

ಅವರು ಗುರುವಾರ ಕಾಗಿನೆಲೆ  ಕನಕ ಗುರುಪೀಠದ ಬೆಳ್ಳೂಡಿ ಶಾಖಾ ಮಠದಲ್ಲಿ ಹಮ್ಮಿಕೊಂಡಿದ್ದ ಚಂದ್ರಗುಪ್ತ ಮೌರ್ಯ ಪಿಯು ಕಾಲೇಜಿನ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದದರು.

ತಂದೆ- ತಾಯಿ ಹಾಗೂ ಗುರುಗಳಿಗೆ ಮತ್ತು ಓದಿದ ಶಾಲೆಗೆ ಹೆಸರು ತರುವಂತಹ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು.  ಕಾಲೇಜಿನವರು ನಿಮ್ಮ ಭವಿಷ್ಯ ರೂಪಿಸಲು ಬತ್ತಿ ಮತ್ತು ಎಣ್ಣೆಯಾಗಿ ಈ ದೀಪದಂತೆ ಉರಿಯುವ ಮೂಲಕ ಶ್ರಮಿಸುತ್ತಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಗುರಿ ಮುಟ್ಟಲು ಗಮನಹರಿಸಬೇಕೆಂದು ಸ್ವಾಮೀಜಿ ಕರೆ ನೀಡಿದರು. 

ಆದಿಕೇಶವ ಅಕಾಡೆಮಿ ಶೈಕ್ಷಣಿಕ ನಿರ್ದೇಶಕ ಡಾ. ಪ್ರಕಾಶ್ ಜೈನ್ ಪ್ರಾಸ್ತಾವಿಕ ಮಾತನಾಡಿದರು. ಚಂದ್ರಗುಪ್ತ ಮೌರ್ಯ ಶೈಕ್ಷಣಿಕ ಸಂಸ್ಥೆ ಕಾರ್ಯದರ್ಶಿ ನಿಂಗಪ್ಪ. ಸಂಸ್ಥೆ ಶೈಕ್ಷಣಿಕ ನಿರ್ದೇಶಕಿ ಶೃತಿ ಇನಾಮ್‌ದಾರ್, ಆದಿಕೇಶವ ಅಕಾಡೆಮಿ ನಿರ್ದೇಶಕರಾದ ಜ್ಯೋತಿ ಕುಮಾರ್, ಗುರುದತ್ತ ಸಾನಾಬಳ್, ಧನರಾಜ್, ಬಿ.ಬಿ. ಮಲ್ಲೇಶ್, ಉಪನ್ಯಾಸಕರಾದ ಜಯಪ್ರಕಾಶ್ ಹಾಗೂ ಬಿ.ಎಸ್. ರವೀಂದ್ರ, ಮಾರುತಿ ಮೈಸೂರು, ಪಾಲಿಕೆ ಸದಸ್ಯರಾದ ರಮೇಶ್, ಶೇಖರ್ ಹಾಗೂ ಶೈಕ್ಷಣಿಕ ಸಂಸ್ಥೆ ಸಿಬ್ಬಂದಿ ಭಾಗವಹಿಸಿದ್ದರು.

error: Content is protected !!