ಗುಣ ಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿ

ಗುಣ ಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿ

ಹರಪನಹಳ್ಳಿಯಲ್ಲಿ ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್

ಹರಪನಹಳ್ಳಿ, ಮೇ 31- ಶೈಕ್ಷಣಿಕ ವರ್ಷವನ್ನು ಗುಣಾತ್ಮಕ ಶೈಕ್ಷಣಿಕ ವರ್ಷ ಎಂದೂ ಸರ್ಕಾರವು ಘೋಷಣೆ ಮಾಡಿರುವುದರಿಂದ ಶಿಕ್ಷಕರು, ಗುಣ ಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಶಾಸಕ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.

ಪಟ್ಟಣದ ಮೇಗಳಪೇಟೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಆಗಮಿಸಿ, ಮಕ್ಕಳಿಗೆ ಹೂ ಮತ್ತು ಚಾಕೋಲೇಟ್ ಹಾಗೂ ಪುಸ್ತಕ ನೀಡುವುದರ ಮೂಲಕ, ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಕಲಿತವರು ಉನ್ನತ ಹುದ್ದೆಯಲ್ಲಿ ಇದ್ದಾರೆ. ಆದ್ದರಿಂದ ಶಿಕ್ಷಕರು ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಿ, ವಿದ್ಯಾರ್ಥಿಗಳನ್ನು ದೇಶದ ಉತ್ತಮ ಪ್ರಜೆ ಆಗುವಂತೆ ಮಾರ್ಗದರ್ಶನ ನೀಡಲು ಶಿಕ್ಷಕರಿಗೆ ಕರೆ ನೀಡಿದರು.  ಶಾಸಕರಾಗಿ ಆಯ್ಕೆಯಾದ ಮೊದಲ ಬಾರಿಗೆ ಭೇಟಿ ನೀಡಿದ್ದು, ಅವರಿಗೆ ಶಾಲಾ ವತಿಯಿಂದ ಸನ್ಮಾನಿಸಲಾಯಿತು. 

ಕ್ಷೇತ್ರ ಶಿಕ್ಷಣಾಧಿಕಾರಿ ಯು.ಬಸವರಾಜಪ್ಪ, ಶಿಕ್ಷಣ ಸಂಯೋಜಕ ಗಿರಜ್ಜಿ ಮಂಜುನಾಥ, ಎಸ್‍ಡಿಎಂಸಿ ಅಧ್ಯಕ್ಷರಾದ ರೇಖಮ್ಮ, ಮುಖ್ಯ ಶಿಕ್ಷಕ ಪಿ.ಅಂಜಿನಪ್ಪ, ಶಿಕ್ಷಕರುಗಳಾದ ಹೆಚ್.ಸಲೀಂ, ಬಸವರಾಜಪ್ಪ, ರತ್ನಮ್ಮ, ಕೊಟ್ರಮ್ಮ ಮುಖಂಡರಾದ ಹೆಚ್.ಎಂ.ಜಗದೀಶ್, ಮಟ್ಟಿ ಮಂಜುನಾಥ್‌, ಶಂಕರ್, ಸಾಸ್ವಿಹಳ್ಳಿ ನಾಗರಾಜ್, ಕವಿತಾ ಸುರೇಶ್‌, ಉಮಾಶಂಕರ್ ಸೇರಿದಂತೆ ಇತರರಿದ್ದರು.

error: Content is protected !!