ರಾಣೇಬೆನ್ನೂರು: ಮಾತಾ ಪಬ್ಲಿಕ್ ಶಾಲೆಯಲ್ಲಿ ಪ್ರಾರಂಭೋತ್ಸವ

ರಾಣೇಬೆನ್ನೂರು: ಮಾತಾ ಪಬ್ಲಿಕ್ ಶಾಲೆಯಲ್ಲಿ ಪ್ರಾರಂಭೋತ್ಸವ

ರಾಣೇಬೆನ್ನೂರು, ಮೇ 31- ಇಲ್ಲಿನ ಜೋಳಮರಡೇಶ್ವರ ನಗರದಲ್ಲಿರುವ ಮಾತಾ ಪಬ್ಲಿಕ್ ಶಾಲೆಯಲ್ಲಿ 2023-24 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವವನ್ನು ವಿದ್ಯಾರ್ಥಿಗಳಿಗೆ ಹೂವು ಮತ್ತು ಸಿಹಿ ನೀಡುವ ಮೂಲಕ ಆಚರಿಸಲಾಯಿತು.

ಶಾಸಕ ಪ್ರಕಾಶ ಕೋಳಿವಾಡ ಮಕ್ಕಳನ್ನು ಸ್ವಾಗತಿಸುವ ಮೂಲಕ ಮಾತನಾಡಿ, ಇಂದಿನ ಮಕ್ಕಳೇ ನಾಡಿನ ಪ್ರಜೆಗಳು. ಇವರ ಭವಿಷ್ಯ ಉಜ್ವಲವಾಗಲೆಂದು ಶುಭ ಹಾರೈಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಹೆಚ್. ಪಾಟೀಲ ಮಾತನಾಡಿ, ಶಾಲೆಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಸಂಸ್ಕೃತಿಯನ್ನು ಕಲಿಸಲು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಬಿ.ಹೆಚ್.ಮಡ್ಲೂರ, ವಿಶ್ವನಾಥ್ ಕಮ್ಮಾರ, ಮಹಮ್ಮದ್ ರಫೀಕ್, ಅಶೋಕ ಪೂಜಾರ್, ಸಿ.ಎಸ್. ಲತಾ, ವ್ಯವಸ್ಥಾಪಕ ಎಸ್. ಚನ್ನಬಸಪ್ಪ, ಸಿಬ್ಬಂದಿಗಳಾದ ಪುಷ್ಪ ಉಜ್ಜೇರ, ಚೈತ್ರಾ, ಆಶಾ, ನಾಗೇಂದ್ರ ಮಡಿವಾಳರ, ಪ್ರವೀಣ ಗುರುಗಳು ಉಪಸ್ಥಿತರಿದ್ದರು.

ಇದೇ ವೇಳೆ ನೂತನ ಶಾಸಕ ಪ್ರಕಾಶ್ ಕೋಳಿವಾಡ ಅವರನ್ನು ಸನ್ಮಾನಿಸಲಾಯಿತು.

error: Content is protected !!