ದಾವಣಗೆರೆ, ಮೇ 30 – ಬೆಂಗಳೂರಿನ ಜ್ಞಾನ ಆಂಜನೇಯ ಸೇವಾ ಟ್ರಸ್ಟ್ ವತಿಯಿಂದ ಕನ್ನಡ ತಾಯಿ ಭುವನೇಶ್ವರಿ ದೇವಿ ಮೂಲ ಜ್ಯೋತಿಯ 108 ದಿನದ ರಥಯಾತ್ರೆ ಇಂದು ದಾವಣಗೆರೆಗೆ ಆಗಮಿಸಿತ್ತು.
ದಾವಣಗೆರೆ ಮಹಾಜನತೆಯ ಪರವಾಗಿ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ ಮತ್ತು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪತ್ನಿ ಶ್ರೀಮತಿ ಪ್ರಭ ಮಲ್ಲಿಕಾರ್ಜುನ್ ಅವರು ದೇವಿಗೆ ಪೂಜೆ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ನ ಪದಾಧಿಕಾರಿಗಳು ಮತ್ತು ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು.