ಶೀಘ್ರ ಗ್ರಾಮೀಣ ಭಾಗಕ್ಕೆ ಭೇಟಿ ನೀಡಿ ಕುಂದು-ಕೊರತೆ ಆಲಿಸುವೆ : ಶಾಸಕಿ ಎಂ.ಪಿ.ಲತಾ

ಶೀಘ್ರ ಗ್ರಾಮೀಣ ಭಾಗಕ್ಕೆ ಭೇಟಿ ನೀಡಿ  ಕುಂದು-ಕೊರತೆ ಆಲಿಸುವೆ : ಶಾಸಕಿ ಎಂ.ಪಿ.ಲತಾ

ಹರಪನಹಳ್ಳಿ, ಮೇ 27- ಶೀಘ್ರ ಗ್ರಾಮೀಣ ಭಾಗಕ್ಕೆ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆ ಆಲಿಸುವುದಾಗಿ ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ ತಿಳಿಸಿದರು.

ತಾಲ್ಲೂಕಿನ ಹುಲಿಕಟ್ಟಿ ಬಳಿ ಅರಣ್ಯ ಪ್ರದೇಶದಲ್ಲಿ  ಇರುವ  ಗುಳೇದಲೆಕ್ಕಮ್ಮ ದೇವಾಲ ಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ನೆರೆದ ಜನರನ್ನುದ್ದೇಶಿಸಿ ಅವರು ಮಾತನಾಡಿದರು.

ಗ್ರಾಮ ಪಂಚಾಯ್ತಿ ಕೇಂದ್ರಗಳಿಗೆ ಭೇಟಿ ನೀಡುತ್ತೇನೆ, ನೀವು ಸಮಸ್ಯೆಗಳ ಪಟ್ಟಿ ಮಾಡಿಕೊಂಡಿರಿ,  ಆದ್ಯತೆ ಮೇರೆಗೆ ಸಮಸ್ಯೆ ಬಗೆಹರಿಸಲು ಮುಂದಾಗುತ್ತೇನೆ ಎಂದರು. ಇದಕ್ಕೂ ಪೂರ್ವದಲ್ಲಿ  ಚಿಗಟೇರಿ ನಾರದಮುನಿ ದೇವಸ್ಥಾನ ಹಾಗೂ ಮೈದೂರು ಊರಮ್ಮ ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆದರು. ನಂತರ ದಿನವಿಡಿ ತಮ್ಮ ಕಾಶಿ ಸಂಗಮೇಶ್ವರ ಬಡಾವಣೆಯ ನಿವಾಸದಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಿ ಸಮಸ್ಯೆ ಆಲಿಸಿದರು.

ಮುಖಂಡರಾದ ಬಿ.ಕೆ.ಪ್ರಕಾಶ, ಎಂ.ವಿ.ಅಂಜಿನಪ್ಪ, ಹುಲಿಕಟ್ಟಿ ಚಂದ್ರಪ್ಪ,  ಗೊಂಗಡಿ ನಾಗರಾಜ, ಎಚ್.ಎಂ.ಕೊಟ್ರೇಶ, ಡಿ.ಕೃಷ್ಣಪ್ಪ, ಟಿ.ಓಮೇಪ್ಪ, ಬಿ.ಜಾತಪ್ಪ, ಕುಂಬಾರ ಬಸವರಾಜ, ಕೆ.ಗುರುಮೂರ್ತಿ, ಟಿ.ರವಿಚಂದ್ರ, ಟಿ.ಮಹಾದೇವಪ್ಪ, ಅಗ್ರಹಾರ ಅಶೋಕ, ಈಡಿಗರ ದುರುಗಪ್ಪ, ಅಲಮರಸಿಕೇರಿ ಎಂ.ಕೋಟೆಪ್ಪ, ಹನುಮಂತಪ್ಪ, ಬಸಪ್ಪ.ಟಿ, ಗೌರಿಹಳ್ಳಿ ನಾಗರಾಜ, ಸಿ.ಮಾರುತಿ, ಮಹೇಶ ನಾಯ್ಕ, ಮತ್ತಿಹಳ್ಳಿ ಪಿ.ರಾಮಣ್ಣ, ಜಾತಪ್ಪ ಮತ್ತಿತರರು  ಇದ್ದರು.

error: Content is protected !!