ಎಸ್ಸೆಸ್, ಎಸ್ಸೆಸ್ಸೆಂಗೆ ಸಚಿವ ಸ್ಥಾನ ನೀಡಬೇಕು

ಎಸ್ಸೆಸ್, ಎಸ್ಸೆಸ್ಸೆಂಗೆ ಸಚಿವ ಸ್ಥಾನ ನೀಡಬೇಕು

ಹರಿಹರದ ಮಾಜಿ ಶಾಸಕ ಎಸ್. ರಾಮಪ್ಪ ಒತ್ತಾಯ

ಹರಿಹರ, ಮೇ 25 – ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆಯನ್ನು ಕೊಟ್ಟಿರುವ ಶಾಸಕರಾದ ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್. ಮಲ್ಲಿಕಾರ್ಜುನ್‌ ಅವರಿಗೆ ಸಚಿವ ಸ್ಥಾನವನ್ನು ಆದಷ್ಟು ಬೇಗನೆ ನೀಡುವಂತೆ ಮಾಜಿ ಶಾಸಕ ಎಸ್. ರಾಮಪ್ಪ ಅವರು ಪಕ್ಷದ ವರಿಷ್ಠರನ್ನು ಒತ್ತಾಯಿಸಿದರು.

ನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಇಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. 

ದಾವಣಗೆರೆ ಜಿಲ್ಲೆಯನ್ನು ಉತ್ತುಂಗದತ್ತ ತೆಗೆದುಕೊಂಡು ಹೋಗುವಲ್ಲಿ  ಶಾಮನೂರು ಶಿವಶಂಕರಪ್ಪ  ಮತ್ತು ಎಸ್.ಎಸ್. ಮಲ್ಲಿಕಾರ್ಜುನ್‌ ಅವರು ಸಾಕಷ್ಟು ಶ್ರಮಿಸಿದ್ದಾರೆ. ಇವರಿಗೆ ಪಕ್ಷದ ಹೈಕಮಾಂಡ್ ಮತ್ತೊಮ್ಮೆ ಸಚಿವ ಸ್ಥಾನ ಕೊಟ್ಟರೆ ಉತ್ತಮ ಆಡಳಿತ ಕೊಡುತ್ತಾರೆ. ಇವರನ್ನು ಸಂಪು ಟಕ್ಕೆ ಸೇರಿಸಿಕೊಳ್ಳುವಂತೆ ಹರಿಹರ ತಾಲ್ಲೂಕು ಕಾಂಗ್ರೆಸ್ ವತಿಯಿಂದ ಒತ್ತಾಯಿಸುವುದಾಗಿ ಅವರು ಹೇಳಿದರು.

ರಾಜೀವ್ ಗಾಂಧಿಯವರ ಪುಣ್ಯ ಸ್ಮರಣೆ ದಿನದಂದು ಕಾಂಗ್ರೆಸ್ ಪಕ್ಷದ ವತಿಯಿಂದ ವಿಜಯೋತ್ಸವ ಆಚರಣೆ ಮಾಡಿದ್ದು ಸರಿಯಲ್ಲ. ನಂದಿಗಾವಿ ಶ್ರೀನಿವಾಸ್ ಅವರು ವಿಜಯೋತ್ಸವ ಮಾಡಬಾರದಾಗಿತ್ತು ಎಂದರು.

ಶಾಸಕ ಬಿ.ಪಿ. ಹರೀಶ್ ಅವರು ದಲಿತರಿಗೆ ನೋವಾಗುವಂತೆ ಮಾತನಾಡಿದ್ದು ಸರಿಯಲ್ಲ. ಅವರು ಅವತ್ತಿನಿಂದ ಕ್ಷೇತ್ರದಲ್ಲಿ ಕಾಣಿಸಿಕೊಂಡಿಲ್ಲ. ದರ್ಗಾ ಮುಂದಿನ ರಸ್ತೆ ಜೊತೆಗೆ ಕ್ಷೇತ್ರದ ಹಲವಾರು
ಅಭಿವೃದ್ಧಿ ಕಾರ್ಯಗಳ ವಿಚಾರಕ್ಕೆ ಸಂಬಂಧಿ ಸಿದಂತೆ ಅವರು ಅಡ್ಡಿಪಡಿಸಿದ್ದರು ಎಂದು ರಾಮಪ್ಪ ಇದೇ ಸಂದರ್ಭದಲ್ಲಿ ಟೀಕಿಸಿದರು.

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಜಿ.ಪಂ. ಮಾಜಿ ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ ಮಾತನಾಡಿ, ಮೊದಲ ಹಂತದ ಸಚಿವ ಸಂಪುಟದಲ್ಲಿ ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಸಚಿವ ಸ್ಥಾನವನ್ನು ಕೊಡಬೇಕಿತ್ತು ಎಂದರು.

ಕೆ.ಪಿ.ಸಿ.ಸಿ. ಸದಸ್ಯ ಬಿ. ರೇವಣಸಿದ್ದಪ್ಪ ಮಾತನಾಡಿ, ವಿಧಾನಸಭೆ ಇತಿಹಾಸದಲ್ಲಿ ಅಲ್ಪಸಂಖ್ಯಾತರು ಸಭಾಧ್ಯಕ್ಷರಾಗಿ ಆಯ್ಕೆಯಾಗಿರಲಿಲ್ಲ. ಈ ಬಾರಿ ಕಾಂಗ್ರೆಸ್ ಪಕ್ಷವು ಯು.ಟಿ. ಖಾದರ್ ಅವರನ್ನು ಆಯ್ಕೆ ಮಾಡಿದ್ದು ರಾಜ್ಯದ ಎಲ್ಲಾ ವರ್ಗದವರಿಗೆ ಸಂತಸವನ್ನು ತರಿಸಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಎಂ. ನಾಗೇಂದ್ರಪ್ಪ ವಕೀಲರು, ಎಪಿಎಂಸಿ ಮಾಜಿ ಅಧ್ಯಕ್ಷ ಮಂಜುನಾಥ್ ಪಾಟೀಲ್, ಮಲೇಬೆನ್ನೂರು, ಜಿಗಳಿ ಆನಂದಪ್ಪ, ಸನಾವುಲ್ಲಾ, ಸಿ.ಎನ್‌ ಹುಲುಗೇಶ್, ಬಾಲರಾಜ್, ಜಿ.ವಿ. ವೀರೇಶ್, ಅರ್ಜುನ ಸಾ ಪವಾರ್, ಅಶೋಕ ಮಾಸ್ಟರ್, ಹಂಚಿನ ನಾಗಪ್ಪ, ಭಾಗ್ಯಮ್ಮ, ನಾಗಮ್ಮ, ಸರಸ್ವತಿ ಇತರರು ಹಾಜರಿದ್ದರು.

error: Content is protected !!