ಖಾದರ್ ಸ್ಪೀಕರ್ : ಮಲೇಬೆನ್ನೂರಿನಲ್ಲಿ ಸಂಭ್ರಮಾಚರಣೆ

ಖಾದರ್ ಸ್ಪೀಕರ್ : ಮಲೇಬೆನ್ನೂರಿನಲ್ಲಿ ಸಂಭ್ರಮಾಚರಣೆ

ಮಲೇಬೆನ್ನೂರು, ಮೇ 24 – ವಿಧಾನ ಸಭೆಯ ನೂತನ ಸ್ಪೀಕರ್ ಆಗಿ ಶಾಸಕ ಯು.ಟಿ. ಖಾದರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿರುವುದಕ್ಕೆ ಮಲೇಬೆನ್ನೂರಿನ ಮುಖ್ಯ ವೃತ್ತದಲ್ಲಿ ಬುಧವಾರ ಸಂಜೆ ಪಟಾಕಿ ಸಿಡಿಸಿ ಸಿಹಿ ವಿತರಣೆ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. 

ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಪುರಸಭೆ ಸದಸ್ಯ ನಯಾಜ್, ಪುರಸಭೆ ಸದಸ್ಯ ಕೆ.ಜಿ ಲೋಕೇಶ್ ಮಾತನಾಡಿದರು.