ಹರಿಹರದಲ್ಲಿ ಕಾಂಗ್ರೆಸ್‌ ವಿಜಯೋತ್ಸವ

ಹರಿಹರದಲ್ಲಿ ಕಾಂಗ್ರೆಸ್‌ ವಿಜಯೋತ್ಸವ

ಹರಿಹರ, ಮೇ 21- ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿರುವ ಮತ್ತು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಹಾಗೂ ಎಂಟು ಶಾಸಕರು ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಬೃಹತ್ ವಿಜಯೋತ್ಸವ ಆಚರಣೆ ಮಾಡಲಾಯಿತು.

ನಗರದ ನೀರಾವರಿ ಇಲಾಖೆಯ ಗಣೇಶ ದೇವಸ್ಥಾನದ ಆವರಣದಿಂದ ಪ್ರಾರಂಭಗೊಂಡ ವಿಜಯೋತ್ಸವ ಮೆರವಣಿಗೆ ಶಿವಮೊಗ್ಗ ರಸ್ತೆ, ರಾಣಿ ಚೆನ್ನಮ್ಮ ಸರ್ಕಲ್, ಮುಖ್ಯರಸ್ತೆಯಲ್ಲಿ ಸಂಚರಿಸಿ ಗಾಂಧಿ ವೃತ್ತದಲ್ಲಿ ಅಂತ್ಯಗೊಂಡಿತು. ಈ ವೇಳೆ ಪಕ್ಷದ ಹಲವಾರು ಮುಖಂಡರು ಮಾತನಾಡಿದರು.

ಮೆರವಣಿಗೆಯಲ್ಲಿ ಡಿ.ಜೆ. ಸೌಂಡ್ ಸಿಸ್ಟಮ್, ಡ್ರಮ್ ಸೆಟ್ ಸೇರಿದಂತೆ, ಹಲವು ಕಲಾ ತಂಡಗಳು ಭಾಗವಹಿಸಿ ಮೆರವಣಿಗೆಗೆ ಮೆರಗನ್ನು ನೀಡಿದವು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಎಂ. ನಾಗೇಂದ್ರಪ್ಪ ವಕೀಲರು, ಟಿ.ಜೆ. ಮುರುಗೇಶಪ್ಪ ಮಂಜುನಾಥ್ ಪಾಟೀಲ್, ಶಂಕರ್ ಖಟಾವ್ಕರ್, ದಾದಾಪೀರ್ ಭಾನುವಳ್ಳಿ, ಎಂ.ಎಸ್. ಬಾಬುಲಾಲ್, ಜಿಗಳಿ ಆನಂದಪ್ಪ, ಸೋಮಶೇಖರ್, ಭೋವಿ ಕುಮಾರ್, ನಸ್ರುಲ್ಲಾ, ಜಫ್ರುಲ್ಲಾ, ಸನಾವುಲ್ಲಾ, ವಾಸು ಕುಂಬಳೂರು, ಹಾಲಿವಾಣ ಪರಮೇಶ್ವರಪ್ಪ, ಬಿ.ಎನ್. ರಮೇಶ್, ರಘುಪತಿ ಮತ್ತಿತರರು ಹಾಜರಿದ್ದರು. 

error: Content is protected !!