ಸಿಇಟಿ: ರಸಾಯನ ಶಾಸ್ತ್ರಕ್ಕೆ 301 ಭೌತಶಾಸ್ತ್ರ ವಿಷಯಕ್ಕೆ 297 ಗೈರು

ಸಿಇಟಿ: ರಸಾಯನ ಶಾಸ್ತ್ರಕ್ಕೆ 301 ಭೌತಶಾಸ್ತ್ರ ವಿಷಯಕ್ಕೆ 297 ಗೈರು

ದಾವಣಗೆರೆ, ಮೇ 21- ವಿವಿಧ ವೃತ್ತಿಪರ ಕೋರ್ಸು ಗಳ ಪ್ರವೇಶಕ್ಕೆ ನಗರದ 20 ಕೇಂದ್ರಗಳಲ್ಲಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ ಸುಸೂತ್ರವಾಗಿ ಮುಕ್ತಾಯಗೊಂಡಿತು.

ಬೆಳಿಗ್ಗೆ 10.30 ರಿಂದ 11.50 ರವರೆಗೆ ನಡೆದ ಭೌತಶಾಸ್ತ್ರ ವಿಷಯದ ಪರೀಕ್ಷೆ ಬರೆಯಲು ನೋಂದಾಯಿಸಿ ಕೊಂಡಿದ್ದ 9944 ವಿದ್ಯಾರ್ಥಿಗಳ ಪೈಕಿ 297 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. 

9647 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಮಧ್ಯಾಹ್ನ 2.30 ರಿಂದ 3.50 ರವರೆಗೆ ರಸಾಯನ ಶಾಸ್ತ್ರ ವಿಷಯಕ್ಕೆ ಪರೀಕ್ಷೆ ನಡೆಯಿತು.  ಈ ಪರೀಕ್ಷೆಯಲ್ಲಿ 301 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ನೋಂದಾಯಿಕೊಂಡಿದ್ದ 9978ರ ಪೈಕಿ, 9677 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

error: Content is protected !!