ಮಲೇಬೆನ್ನೂರು, ಮೇ 21- ನೂತನ ಮುಖ್ಯಮಂತ್ರಿ ಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಮಲೇಬೆನ್ನೂರಿನ ಜಿಗಳಿ ವೃತ್ತದಲ್ಲಿ ಕುರುಬ ಸಮಾಜದ ವತಿಯಿಂದ ಶನಿವಾರ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಿಸಲಾಯಿತು. ಸಮಾಜದ ಹಿರಿಯರಾದ ಪೂಜಾರ್ ನಾಗಪ್ಪ, ಪಿ.ಬಿ. ಬೀರಪ್ಪ, ಪಿ. ಗಂಗೇನಳ್ಯಪ್ಪ, ಪಿ.ಹೆಚ್. ಶಿವಕುಮಾರ್, ಪೂಜಾರ್ ಮಹೇಶ್, ಅಕ್ಬರ್ ಅಲಿ, ಪಿ.ಕೆ. ಹಾಲೇಶ್, ಪೂಜಾರ್ ನಾರಾಯಣಪ್ಪ, ರೋಹಿತ್, ಗಗನ್, ಸಾಬುದ್ದೀನ್ ಸೇರಿದಂತೆ ಇನ್ನೂ ಅನೇಕರು ಈ ವೇಳೆ ಹಾಜರಿದ್ದರು.
ಸಿದ್ದರಾಮಯ್ಯ ಸಿಎಂ : ಮಲೇಬೆನ್ನೂರಿನಲ್ಲಿ ಸಂಭ್ರಮಾಚರಣೆ
