ಹರಿಹರದಲ್ಲಿ ಕುಸ್ತಿ ಪಟುಗಳಿಗೆ ತರಬೇತಿ

ಹರಿಹರದಲ್ಲಿ ಕುಸ್ತಿ ಪಟುಗಳಿಗೆ ತರಬೇತಿ

ಹರಿಹರ, ಮೇ 21 – ರಾಜ್ಯ ಕುಸ್ತಿ ಜೀರ್ಣೋದ್ಧಾರ ಸಂಸ್ಥೆ ಮತ್ತು ಹರಿಹರ ಕುಸ್ತಿ ಜೀರ್ಣೋದ್ಧಾರ ಸಂಸ್ಥೆಗಳ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ಹರಿಯಾಣ ರಾಜ್ಯದ ಸುಮಾರು 50 ಕ್ಕೂ ಹೆಚ್ಚು ಕುಸ್ತಿ ಪಟುಗಳಿಗೆ ತರಬೇತಿ ನೀಡಲಾಗುತ್ತದೆ. ಸ್ಥಳೀಯ ಮತ್ತು ಜಿಲ್ಲೆಯ ವಿವಿಧ ತಾಲ್ಲೂಕಿನ ಕುಸ್ತಿ ಪಟುಗಳು ಈ ತರಬೇತಿ ಪಡೆಯುವುದಕ್ಕೆ ಅವಕಾಶ ಇರುವುದರಿಂದ ಇದರ ಸದುಪಯೋಗ ಪಡಿಸಿಕೊಳ್ಳಲು ಸಮಿತಿಯ ಸದಸ್ಯರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ತರಬೇತುದಾರ ಉರ್ಜಿನ್ ವಾಡಿ ದವೇದರ್ ದಲಾಲ್  ಹರಿಯಾಣ, ಜೆ.ಕೆ. ನಗರದ ಪೈಲ್ವಾನ್‌ರಾದ ರೇವಣಪ್ಪ ದ್ಯಾವನೇಕರ್, ಚೂರಿ ಜಗದೀಶ್, ಪಾಲಾಕ್ಷ, ಸುರೇಶ್ ಚಂದಪೂರ್, ಚಂದ್ರಪ್ಪ ಎಂ.ಹೆಚ್‌.ಬಿ. ಮತ್ತಿತರರು ಹಾಜರಿದ್ದರು.