ಸತೀಶ್‌ ಜಾರಕಿಹೊಳಿ ಡಿಸಿಎಂ ಮಾಡಲು ಒತ್ತಾಯ

ಸತೀಶ್‌ ಜಾರಕಿಹೊಳಿ ಡಿಸಿಎಂ ಮಾಡಲು ಒತ್ತಾಯ

ಹರಪನಹಳ್ಳಿ, ಮೇ 16- ಸತೀಶ್ ಜಾರಕಿಹೊಳಿಯವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ತಾಲ್ಲೂಕು ವಾಲ್ಮೀಕಿ ನಾಯಕ ಸಂಘ, ತಾಲ್ಲೂಕು ವಾಲ್ಮೀಕಿ ನಾಯಕ ಮಹಿಳಾ ಘಟಕ ಹಾಗೂ ಏಕಲವ್ಯ ಸಂಘರ್ಷ ಸಮಿತಿ ಒತ್ತಾಯಿಸಿವೆ.

ಈ ವೇಳೆ ತಾಲ್ಲೂಕು ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಕೆ. ಉಚ್ಚಂಗೆಪ್ಪ ಪತ್ರಿಕಾ ಹೇಳಿಕೆ ನೀಡಿ, ರಾಜ್ಯದಲ್ಲಿ ವಾಲ್ಮೀಕಿ ನಾಯಕ ಸಮಾಜದ 18 ಜನ ಶಾಸಕರು ಜಯಶಾಲಿಗಳಾಗಿದ್ದು, ಅದರಲ್ಲಿ 15 ಜನ ಶಾಸಕರು ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದಾರೆ. ಕಾಂಗ್ರೆಸ್ ಪ್ರಭಾವಿ ಮುಖಂಡರಾದ ಸತೀಶ್ ಜಾರಕಿಹೊಳಿ ಅವರು ಬುದ್ಧ-ಬಸವ-ಅಂಬೇಡ್ಕರ್ ಅವರ ಅನುಯಾಯಿಗಳಾಗಿದ್ದು, ಸಮಾಜದ ಲ್ಲಿರುವ ಮೂಢನಂಬಿಕೆ, ಕಂದಾಚಾರ ತೊಲಗಿ ಸಲು ನಿರಂತರ ಹೋರಾಟ ಮಾಡುತ್ತಿದ್ದಾರೆ.

ವಾಲ್ಮೀಕಿ ಜಾತ್ರಾ ಸಮಿತಿ ತಾಲ್ಲೂಕು ಅಧ್ಯಕ್ಷ ಅರಸೀಕೆರೆ ವೈ.ಡಿ. ಅಣ್ಣಪ್ಪ ಮಾತನಾಡಿ, ಪರಿಶಿಷ್ಟ ಪಂಗಡದ ಪ್ರಭಾವಿ ನಾಯಕರಾದ ಸತೀಶ್ ಜಾರಕಿಹೊಳಿ ಅವರ ಸೇವೆಯನ್ನು ವಿವರಿಸಿದರು.

ತಾಲ್ಲೂಕು ವಾಲ್ಮೀಕಿ ನಾಯಕ ಮಹಿಳಾ ಘಟಕದ ಅಧ್ಯಕ್ಷರಾದ ಕಂಚಿಕೇರಿ ಜಯಲಕ್ಷ್ಮಿ ಹಾಗೂ ಏಕಲವ್ಯ ಸಂಘರ್ಷ ಸಮಿತಿ ಅಧ್ಯಕ್ಷ ರಾಯದುರ್ಗದ ಪ್ರಕಾಶ್ ಮಾತನಾಡಿ, ವಾಲ್ಮೀಕಿ ನಾಯಕ ಜನಾಂಗದ 4 ಜನರಿಗೆ ಸಚಿವ ಸ್ಥಾನ ನೀಡಬೇಕು. ಸತೀಶ್ ಜಾರಕಿಹೊಳಿಯವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

ಉಪಾಧ್ಯಕ್ಷ ಶಿವಾನಂದ, ಪ್ರಧಾನ ಕಾರ್ಯದರ್ಶಿ ಗಿರಜ್ಜಿ ನಾಗರಾಜ, ಸಂಘಟನಾ ಕಾರ್ಯದರ್ಶಿಗಳಾದ ಫಣಿಯಾಪುರ ಲಿಂಗರಾಜ್, ಹಲವಾಗಲು ಎಂ. ನಂದಿಕೇಶವ,  ನೀಲಗುಂದ ತಿಮ್ಮೇಶ,  ತಾ. ಪಂ. ಮಾಜಿ ಅಧ್ಯಕ್ಷ  ಹಳ್ಳಿಕೇರಿ ಎಚ್.ರಾಜಪ್ಪ,  ಕಿತ್ತೂರು ಓಬಪ್ಪ, ಉಪನ್ಯಾಸಕ ಎಂ. ಸುರೇಶ್, ಕೆ.ಇ.ಬಿ. ನಿವೃತ್ತ ಇಂಜಿನಿಯರ್ ಭೀಮಪ್ಪ, ನಿವೃತ್ತ ಮುಖ್ಯ ಶಿಕ್ಷಕ ಆನಂದಪ್ಪ,  ಮುಖಂಡರಾದ ಬಿ. ಅಂಜಿನಪ್ಪ, ತೆಲಗಿ ಉಮಾಕಾಂತ, ಟಿ. ಮಂಜುನಾಥ ತೆಲಗಿ ಕೆ. ಯೋಗೇಶ್, ನೀಲಗುಂದ ಬಿ. ವಾಗೀಶ್, ದುಗ್ಗಾವತಿ ಮಂಜುನಾಥ, ನೀಲಗುಂದ ತಿಮ್ಮೇಶ್, ಮಾರುತಿ ಮೈದೂರು, ಬಾಲೇನಹಳ್ಳಿ ಕೆಂಚನಗೌಡ, ದ್ಯಾಪನಾಯಕನಹಳ್ಳಿ ಜಿ.ಕೆ.ಬಸವರಾಜ, ಮಂಡಕ್ಕಿ ಸುರೇಶ್, ಬಿ. ಚಂದ್ರಕಾಂತ, ಮಹಿಳಾ ಘಟಕದ ನೇತ್ರಾವತಿ, ಮಂಜುಳಾ, ದಾಕ್ಷಾಯಣಿ ಮಂಜುಳಾ, ಪವಿತ್ರ ಇದ್ದರು.