ಸಂಭ್ರಮದ ಹರಿಹರೇಶ್ವರ ರಥೋತ್ಸವ

ಸಂಭ್ರಮದ ಹರಿಹರೇಶ್ವರ ರಥೋತ್ಸವ

ಹರಿಹರ, ಫೆ. 5-  ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಹರಿಹರದಲ್ಲಿ ಶ್ರೀ ಹರಿಹರೇಶ್ವರ ಸ್ವಾಮಿ ಹಾಗೂ ಲಕ್ಷ್ಮಿ ದೇವಿಯ ಬ್ರಹ್ಮ ರಥೋತ್ಸವು ಭಾನುವಾರ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಶ್ರೀ ಹರಿಹರೇಶ್ವರ ಸ್ವಾಮಿ ಹಾಗೂ ಲಕ್ಷ್ಮಿ ದೇವಿಗೆ ಬೆಳಿಗ್ಗೆಯೇ ವಿಶೇಷ ಅಭಿಷೇಕಗಳು ನಡೆದವು. ಅಲಂಕಾರ, ಮಹಾಮಂಗಳಾರತಿ ಸೇರಿದಂತೆ ಪೂಜಾ ಕಾರ್ಯಗಳು ನೆರವೇರಿದ ಬಳಿಕ ಪಲ್ಲಕ್ಕಿಯಲ್ಲಿನ ಉತ್ಸವಮೂರ್ತಿಯನ್ನು ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.

ತಹಶೀಲ್ದಾರ್ ಬಿ.ಅಶ್ವತ್ಥ್‌ ರಥಕ್ಕೆ ಪೂಜೆ ಸಲ್ಲಿಸಿ, ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದರು. ಪಂಡಿತ ನಾರಾಯಣ್ ಜೋಯಿಸರು ಮತ್ತು ಹರಿಶಂಕರ್ ಜೋಯಿಸರು ವಿಶೇಷ ಪೂಜಾ ಕಾರ್ಯಗಳನ್ನು ನಡೆಸಿಕೊಟ್ಟರು.

`ಗೋವಿಂದ..ಗೋವಿಂದ,’ `ಹರ ಹರ ಮಹಾದೇವ’ ಎಂಬ ಭಕ್ತರ ಹರ್ಷೋದ್ಘಾರಗಳ ಮಧ್ಯೆ ರಥ ಮುಂದಕ್ಕೆ ಸಾಗಿತು. ಈ ವೇಳೆ ತೆಂಗಿನಕಾಯಿ, ಬಾಳೆಹಣ್ಣು, ಉತ್ತುತ್ತಿ, ಬಾದಾಮಿಯನ್ನು ಭಕ್ತರು ರಥಕ್ಕೆ ಸಮರ್ಪಿಸಿದರು. ರಥವು  ದೇವಸ್ಥಾನ ರಸ್ತೆಯ ತೇರುಗಡ್ಡೆ ವೃತ್ತದಿಂದ ರಾಣಿ ಚೆನ್ನಮ್ಮ ವೃತ್ತದವರೆಗೆ ಸಂಚರಿಸಿ ಪುನಃ ತೇರುಗಡ್ಡೆ ವೃತ್ತಕ್ಕೆ ಬಂದು ತಲುಪಿತು. 

ಸಾಂಸ್ಕೃತಿಕ ಕಲಾ ತಂಡಗಳು ರಥೋತ್ಸವಕ್ಕೆ ಇಂಬು ನೀಡಿದವು. ನಗರದ ಗಜಾನನ ಯುವಕ ಮತ್ತು ಸಾಂಸ್ಕೃತಿಕ ಕೇಂದ್ರ ಕೋಟೆ ಇವರಿಂದ  ಅನ್ನ ಸಂತರ್ಪಣೆ.  ನಂದಿಗಾವಿ ಶ್ರೀನಿವಾಸ್ ಅಭಿಮಾನಿ ಬಳಗ, ಚಂದ್ರಶೇಖರ್ ಪೂಜಾರ್ ಅಭಿಮಾನಿಗಳ ಬಳಗ,  ಉದ್ಯಮಿ ಶರತ್ ಕೊಣ್ಣೂರು ಕುಟುಂಬದವರು ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ಭಕ್ತರಿಗೆ ಮಜ್ಜಿಗೆ, ಪಾನಕ, ಕೋಸುಂಬರಿ,  ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಶಾಸಕ ಎಸ್. ರಾಮಪ್ಪ, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಹನಗವಾಡಿ ವೀರೇಶ್,   ಕಸಬಾ ಗೌಡ್ರು ಲಿಂಗರಾಜ್ ಪಾಟೀಲ್, ಮಾಜೇನಹಳ್ಳಿ ಗೌಡ್ರು ಚನ್ನಬಸಪ್ಪ, ನಗರಸಭೆ ಸದಸ್ಯರಾದ ಕೆ.ಜಿ. ಸಿದ್ದೇಶ್, ಶಂಕರ್ ಖಟಾವ್‌ಕರ್,  ಗುತ್ತೂರು ಜಂಬಣ್ಣ, ಲಕ್ಷ್ಮಿ ದುರುಗೋಜಿ ಮೋಹನ್, ನಿಂಬಕ್ಕ ಚಂದಪೂರ್, ಪಕ್ಕೀರಮ್ಮ, ಪಿ.ಎನ್. ವಿರುಪಾಕ್ಷಪ್ಪ, ಕವಿತಾ ಮಾರುತಿ, ಮುಖಂಡರಾದ ಚಂದ್ರಶೇಖರ್ ಪೂಜಾರ್, ನಂದಿಗಾವಿ ಶ್ರೀನಿವಾಸ್, ಎಂ. ನಾಗೇಂದ್ರಪ್ಪ, ಟಿ.ಜೆ. ಮುರುಗೇಶಪ್ಪ, ಗಣೇಶ ದುರ್ಗದ, ಶಿವಪ್ರಕಾಶ್ ಶಾಸ್ತ್ರಿ, ರಾಘವೇಂದ್ರ, ಅಜಿತ್ ಸಾವಂತ್, ಶಿವಯೋಗಿ ಸ್ವಾಮಿ ಕತ್ತಲಗೇರಿ, ಕರಿಬಸಪ್ಪ ಕಂಚಿಕೇರಿ, ಹೆಚ್.ಎಸ್. ರಾಘವೇಂದ್ರ, ಆನಂದ ವಕೀಲರು, ಕೆ.ಬಿ. ರಾಜಶೇಖರ್, ಅದ್ವೈತ ಶಾಸ್ತ್ರಿ, ಹೆಚ್. ನಿಜಗುಣ, ಬಸವರಾಜ್ ಪಾಟೀಲ್, ಭೋಜರಾಜ್, ಕೃಷ್ಣ ರಾಜೊಳ್ಳಿ, ದಿನೇಶ್ ಕಣ್ಣೂರು, ಎನ್. ಮಂಜುನಾಥ್, ಸುರೇಶ್ ಚಂದಪೂರ್, ಚಿದಾನಂದ ಕಂಚಿಕೇರಿ, ವಾಸು ಚಂದಪೂರ್, ರಮೇಶ್ ಮಾನೆ, ಗೋವಿಂದ, ಶಿವು, ಚಂದನ್ ಮೂರ್ಕಲ್, ಗಿರೀಶ್ ಗೌಡ, ಅಣ್ಣಪ್ಪ, ಪ್ರಧಾನ ಅರ್ಚಕರು ಶ್ರೀನಿವಾಸಮೂರ್ತಿ, ಗುರುಪ್ರಸಾದ್, ತಾಲ್ಲೂಕು ಆಡಳಿತದ ಆನಂದ್, ಹೇಮಂತ್ ಕುಮಾರ್, ಆರ್. ಐ ಮಂಜುನಾಥ್, ಸಂಗಿತಾ ಜೋಷಿ ಶಾನಭೋಗರು ವಾರಿಜಾ ವೆಂಕಟೇಶ್, ಹರಿಶಂಕರ್, ಚಿದಂಬರ ಜೋಯಿಸರು, ನೀಲಪ್ಪ,  ರಾಘವೇಂದ್ರ ಕಂಚಿಕೇರಿ ಇತರರು ಹಾಜರಿದ್ದರು.  

ಪೊಲೀಸ್ ಇಲಾಖೆಯ ವೃತ್ತ ನಿರೀಕ್ಷಕ ಎಸ್ ದಯಾನಂದ್, ಪಿಎಸ್ಐ ಶಂಕರ್ ಗೌಡ ಪಾಟೀಲ್, ಮಲೇಬೆನ್ನೂರು ಪಿಎಸ್ಐ ಪ್ರಭು ಕೆಳಗಿನಮನೆ, ಗುತ್ತೂರು ಗ್ರಾಮಾಂತರ ಠಾಣೆಯ ಪಿಎಸ್ಐ ಎಂ‌.ರಾಜು ಮತ್ತು ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.

error: Content is protected !!