ದಾವಣಗೆರೆ, ಜು. 20 – ಜಿಲ್ಲೆಯಲ್ಲಿ ಒಂದೇ ದಿನ 73 ಕೊರೊನಾ ಪ್ರಕರಣಗಳು ಕಾಣಿಸಿ ಕೊಂಡಿದ್ದು, 64 ವರ್ಷದ ಮಹಿಳೆಯೊಬ್ಬರು ಮೃತ ಪಟ್ಟಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ 279ಕ್ಕೆ ಏರಿಕೆಯಾಗಿದೆ.
ಒಂದೇ ದಿನ 73 ಪ್ರಕರಣಗಳು ಕಂಡು ಬಂದಿರುವುದು ಜಿಲ್ಲೆಯಲ್ಲಿ ಇದೇ ಮೊದಲು.
ಸೋಮವಾರದಂದು ದಾವಣಗೆರೆ ತಾಲ್ಲೂಕಿನಲ್ಲಿ 34, ಹರಿಹರದಲ್ಲಿ 13, ಜಗಳೂರಿನಲ್ಲಿ 11, ಚನ್ನಗಿರಿಯಲ್ಲಿ 9, ಹೊನ್ನಾಳಿಯಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿವೆ. ಬೇರೆ ಜಿಲ್ಲೆಗಳ ನಾಲ್ಕು ಪ್ರಕರಣಗಳು ಬೆಳಕಿಗೆ ಬಂದಿವೆ.
ದಾವಣಗೆರೆ ನಗರದ ಖಾಸಗಿ ಆಸ್ಪತ್ರೆಯ 46 ವರ್ಷದ ನರ್ಸ್ ಹಾಗೂ 43 ವರ್ಷದ ವೈದ್ಯರೊಬ್ಬರಲ್ಲಿ ಸೋಂಕಿರುವುದು ಕಂಡು ಬಂದಿದೆ. ಹರಿಹರದ ಸರ್ಕಾರಿ ಆಸ್ಪತ್ರೆಯ 32 ವರ್ಷದ ಉದ್ಯೋಗಿ ಮಹಿಳೆಯಲ್ಲಿ ಸೋಂಕು ಬಂದಿದೆ.
ಎಂಸಿಸಿ ಎ ಬ್ಲಾಕ್ನಲ್ಲಿ ಹದಿಮೂರು ಜನರಲ್ಲಿ ಸೋಂಕು ಕಂಡು ಬಂದಿದೆ. ಇಲ್ಲಿನ ನಾಲ್ಕು ಹಾಗೂ 10 ವರ್ಷದ ಬಾಲಕರು, 36, 43 ಹಾಗೂ 45 ವರ್ಷದ ವ್ಯಕ್ತಿಗಳಿಗೆ ಸೋಂಕು ಬಂದಿದೆ. ಇಲ್ಲಿನ 35, 38, 42 ವರ್ಷದ ಮಹಿಳೆಯರು ಹಾಗೂ 62, 70 ಹಾಗೂ 78 ವರ್ಷದ ವೃದ್ಧೆಯರಿಗೆ ಸಂಪರ್ಕದಿಂದ ಸೋಂಕು ಬಂದಿದೆ. ಇದೇ ಬಡಾವಣೆಯ 69 ಹಾಗೂ 93 ವರ್ಷದ ವೃದ್ಧರಿಗೆ ಸಂಪರ್ಕದಿಂದ ಸೋಂಕು ಬಂದಿದೆ.
ದಾವಣಗೆರೆ ನಗರದ ಎಂಸಿಸಿ ಬಿ ಬ್ಲಾಕ್ನಲ್ಲಿ 42 ವರ್ಷದ ವ್ಯಕ್ತಿ, ರಜಾವುಲ್ಲಾ ಮುಸ್ತಫಾ ನಗರದಲ್ಲಿ 85 ವರ್ಷದ ವೃದ್ಧಗೆ ಸಂಪರ್ಕದಿಂದ ಸೋಂಕು ಬಂದಿದೆ. ಇಜಾರ್ದಾರ್ ಗಲ್ಲಿಯಲ್ಲಿ 56 ವರ್ಷದ ಫ್ಲುದಿಂದ ಬಳಲುತ್ತಿದ್ದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ನಿಜಲಿಂಗಪ್ಪ ಬಡಾವಣೆಯ 65 ವರ್ಷದ ವೃದ್ಧನಲ್ಲಿ ಸೋಂಕು ಕಂಡು ಬಂದಿದೆ. ಆರ್.ವಿ.ಕೆ. ಶಾಲೆಯ ಬಳಿ ಪ್ರಯಾಣದ ಹಿನ್ನೆಲೆಯ 35 ವರ್ಷದ ವ್ಯಕ್ತಿ, ಡಿಸಿಎಂ ಟೌನ್ಶಿಪ್ನಲ್ಲಿ ಸಂಪರ್ಕದಿಂದ 72 ವರ್ಷದ ವೃದ್ಧನಲ್ಲಿ ಸೋಂಕು ಕಂಡು ಬಂದಿದೆ.
ಫ್ಲುದಿಂದ ಬಳಲುತ್ತಿದ್ದ ಆವರಗೆರೆಯ 44 ವರ್ಷದ ಮಹಿಳೆಯಲ್ಲಿ ಸೋಂಕು ಕಂಡು ಬಂದಿದೆ. ಎಂಸಿಸಿ ಬಿ ಬ್ಲಾಕ್ನ 55 ವರ್ಷದ ಮಹಿಳೆಗೆ ಸಂಪರ್ಕದಿಂದ ಸೋಂಕು ಬಂದಿದೆ. ಎಸ್.ಎಸ್. ಲೇಔಟ್ನಲ್ಲಿ ಫ್ಲುದಿಂದ ಬಳಲುತ್ತಿದ್ದ 65 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಂಡು ಬಂದಿದೆ.
ಬಸಾಪುರದ 38 ವರ್ಷದ ಮಹಿಳೆಗೆ ಸಂಪರ್ಕದಿಂದ ಸೋಂಕು ಬಂದಿದೆ.
ಆಂಜನೇಯ ಬಡಾವಣೆಯ 56 ವರ್ಷದ ಮಹಿಳೆಗೆ ಸಂಪರ್ಕದಿಂದ ಸೋಂಕು ಬಂದಿದೆ.
ಪೊಲೀಸ್ ಕ್ವಾರ್ಟರ್ಸ್ನ 43 ವರ್ಷದ ಮಹಿಳೆಯಲ್ಲಿ ಸೋಂಕು ಕಂಡು ಬಂದಿದೆ. ಆಜಾದ್ ನಗರದ 38 ವರ್ಷದ ವ್ಯಕ್ತಿಗೆ ಸಂಪರ್ಕದಿಂದ ಸೋಂಕು ಬಂದಿದೆ.
ಇದೇ ಮೊದಲ ಬಾರಿ ಅತಿ ಹೆಚ್ಚು ಪ್ರಕರಣ, ಸಕ್ರಿಯ ಸೋಂಕಿತರ ಸಂಖ್ಯೆ 279ಕ್ಕೆ ಏರಿಕೆ
ಹರಿಹರ ತಾಲ್ಲೂಕಿನಲ್ಲಿ ಮೂವರಿಗೆ ಸೋಂಕು : ನಗರದಲ್ಲಿ ಇಂದು ಎರಡು ಮತ್ತು ಗ್ರಾಮೀಣ ಪ್ರದೇಶದ ಮಲೆಬೆನ್ನೂರು ಗ್ರಾಮದಲ್ಲಿ ಒಂದು ಸೇರಿದಂತೆ ಒಟ್ಟು ಮೂರು ಕೊರೊನಾ ಪ್ರಕರಣಗಳು ದೃಢಪಟ್ಟಿವೆ ಎಂದು ತಹಶೀಲ್ದಾರ್ ಕೆ. ಬಿ. ರಾಮಚಂದ್ರಪ್ಪ ತಿಳಿಸಿದ್ದಾರೆ.
ನಗರದ ಜೆ.ಸಿ. ಬಡಾವಣೆಯ 1ನೇ ಮುಖ್ಯರಸ್ತೆಯ 63 ವರ್ಷದ ಮಹಿಳೆ, ಹಳ್ಳದಕೇರಿ ಬಡಾವಣೆಯ 63 ವರ್ಷದ ಪುರುಷ, ಮಲೆಬೆನ್ನೂರು ಗ್ರಾಮದ 35 ವರ್ಷದ ಮಹಿಳೆ ಸೇರಿದಂತೆ ಒಟ್ಟು ಮೂವರಿಗೆ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಹರಿಹರ ತಾಲ್ಲೂಕಿನಲ್ಲಿ ಇಲ್ಲಿಯವರೆಗೆ 140 ವ್ಯಕ್ತಿಗಳಿಗೆ ಕೊರೊನಾ ರೋಗವು ಹರಡಿಕೊಂಡಿದೆ. ಇಂದು 58 ವ್ಯಕ್ತಿಗಳ ಗಂಟಲು ದ್ರವ ಪರೀಕ್ಷೆ ಮಾಡಲಾಗಿದೆ ಎಂದರು.
ನಗರದ ಕೊರೊನಾ ಸೋಂಕಿನ ವ್ಯಕ್ತಿಗಳ ಮನೆಗೆ ಆರೋಗ್ಯಾಧಿಕಾರಿ ಡಾ|| ಚಂದ್ರಮೋಹನ್, ನಗರಸಭೆ, ತಾಲ್ಲೂಕು ಆಡಳಿತದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭೇಟಿ ಕೊಟ್ಟು, ಮುಂದಿನ ಕ್ರಮಗಳನ್ನು ಕೈಗೊಂಡಿದ್ದಾರೆ.
ಹರಪನಹಳ್ಳಿಯಲ್ಲಿ ಮತ್ತೆ 6 ಜನಕ್ಕೆ ಸೋಂಕು : ಕೋವಿಡ್ -19 ಸಾಂಕ್ರಾಮಿಕ ರೋಗ ಸೋಮವಾರ ತಾಲ್ಲೂಕಿನಲ್ಲಿ ಇಬ್ಬರು ಯುವತಿಯರು ನಾಲ್ಕು ಜನ ಪುರುಷರು ಸೇರಿ ಒಟ್ಟು 6 ಜನರಿಗೆ ಸೋಂಕು ದೃಢ ಪಟ್ಟಿದೆ.
ಆರು ಜನ ಸೋಂಕಿತರಲ್ಲಿ ಅಳಗಂಚಿಕೇರಿ ಗ್ರಾಮದಲ್ಲಿಯೇ 5 ಜನರಿಗೆ ಸೊಂಕು ಕಾಣಿಸಿಕೊಂಡಿದೆ, 16 ವರ್ಷದ ಹತ್ತನೇ ತರಗತಿ ವಿದ್ಯಾರ್ಥಿನಿ, 13 ವರ್ಷದ ಬಾಲಕಿ, 38 ವರ್ಷದ ವ್ಯಕ್ತಿ, 14 ವರ್ಷದ ಬಾಲಕ, 18 ವರ್ಷದ ಯುವಕ ಹಾಗೂ ಗುಂಡಗತ್ತಿ ಗ್ರಾಮದ 20 ವರ್ಷದ ಯುವಕ ಹೀಗೆ ಸೋಂಕು ಪತ್ತೆಯಾಗಿದೆ.
ಅಳಗಂಚಿಕೇರಿ ಗೆ ಜೂನ್ 27ಕ್ಕೆ ಅಣ್ಣನ ವಿವಾಹಕ್ಕೆಂದು ಬೆಂಗಳೂರಿನಿಂದ ಆಗಮಿಸಿದ್ದ ಮಹಿಳಾ ಪೊಲೀಸ್ ಪೇದೆಯಿಂದ ಇವರಿಗೆ ಸೋಂಕು ತಗುಲಿದೆ ಎಂದು ಮೂಲಗಳು ತಿಳಿಸಿವೆ. ಅಳಗಂಚಿಕೇರಿಯಲ್ಲಿ 14 ಪ್ರಾಥಮಿಕ ಸಂಪರ್ಕ ವ್ಯಕ್ತಿಗಳನ್ನು ಶಿಕ್ಷಣ ಇಲಾಖೆಯವರು ಗುರುತಿಸಿದ್ದಾರೆ. ಗುಂಡಗತ್ತಿ ಗ್ರಾಮದ ಸೋಂಕಿತ ಯುವಕ ದಾವಣಗೆರೆಯ ಪ್ರಸಿದ್ದ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದನು ಎಂದು ಹೇಳಲಾಗಿದೆ.
ಈತನಿಗೆ ಸೋಂಕು ದೃಢವಾಗಿ ಪ್ರಥಮ ಸಂಪರ್ಕಿತರನ್ನು ಗುರುತಿಸಲು ಈತನ ಮೊಬೈಲ್ ಗೆ ಶಿಕ್ಷಣ ಇಲಾಖೆಯವರು ಕರೆ ಮಾಡಿದಾಗ ಅಮವಾಸ್ಯೆಯಾದ್ದರಿಂದ ಕೊಟ್ಟೂರಿಗೆ ಕೊಟ್ಟೂರೇಶ್ವರ ದೇವರ ದರ್ಶನಕ್ಕೆ ಬಂದಿದ್ದೇನೆ ಎಂದು ಉತ್ತರಿಸಿದ್ದಾನೆ ಎನ್ನಲಾಗಿದೆ.
ಆಗ ಮಾಸ್ಕ್ ತೆಗೆಯಬೇಡ, ದೇವಸ್ಥಾನದ ಒಳಗಡೆ ಹೋಗಬೇಡ ಎಂದು ಅಧಿಕಾರಿಗಳು ಆತನಿಗೆ ಸೂಚಿಸಿ ಕೂಡಲೇ ಹೊರಟು ಬಾ ಎಂದು ಹೇಳಿ ಕರೆಸಿಕೊಂಡಿದ್ದಾರೆ.
ಸೋಂಕಿತ ಈತನಿಗೆ 5 ಪ್ರಾಥಮಿಕ ಹಾಗೂ 21 ದ್ವಿತೀಯ ಒಟ್ಟು 26 ಸಂಪರ್ಕಿತರನ್ನು ಗುರುತಿಸಲಾಗಿದೆ. ಆಶಾ ಕಾರ್ಯಕರ್ತರು ತಮ್ಮ ಬೇಡಿಕೆಗಳಿಗಾಗಿ ಸೇವೆ ಸ್ಥಗಿತಗೊಳಿಸಿದ ಕಾರಣ ಶಿಕ್ಷಕರೇ ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ರಾಣೇಬೆನ್ನೂರು : ಮೂರು ಕೊರೊನಾ ಪ್ರಕರಣಗಳು ಪತ್ತೆ : ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ವೈರಸ್ ವೇಗವಾಗಿ ಹರಡುತ್ತಿದ್ದು, ನಗರದಲ್ಲಿ ಒಟ್ಟು ಮೂರು ಪ್ರಕರಣಗಳು ದಾಖಲಾಗಿವೆ. ರಾಣೇಬೆನ್ನೂರು ನಗರದ ಪಿ-19929ರ ಸಂಪರ್ಕಿತ ಪಟ್ಟಣ ಶೆಟ್ಟಿ ಓಣಿಯ 27 ವರ್ಷದ ಮಹಿಳೆ (ಪಿ-69268), ವಿದ್ಯಾನಗರದ ಕಂಟೈನ್ ಮೆಂಟ್ ಜೋನ್ ಸಂಪರ್ಕದ ರಾಣೇಬೆನ್ನೂರು ತಹಶೀಲ್ದಾರ್ರಾಗಿ ಕರ್ತವ್ಯ ನಿರ್ವಹಿಸುತ್ತಿರುವ 33 ವರ್ಷದ ಪುರುಷ (ಪಿ-69159) ಹಾಗೂ ಬೀರೇಶ್ವರ ನಗರದ 62 ವರ್ಷದ ಪುರುಷ (ಪಿ-59916)ನಿಗೆ ಸೋಂಕು ದೃಢಪಟ್ಟಿದೆ.
ಗಾಂಧಿನಗರದ 35 ವರ್ಷದ ಮಹಿಳೆಗೆ ಸಂಪರ್ಕದಿಂದ ಸೋಂಕು ಬಂದಿದೆ. ಕುಂಬಾರಪೇಟೆಯ 51 ವರ್ಷದ ವ್ಯಕ್ತಿ ಹಾಗೂ ಕೆ.ಬಿ. ಬಡಾವಣೆಯ 46 ವರ್ಷದ ವ್ಯಕ್ತಿಗಳಲ್ಲಿ ಸೋಂಕು ಕಂಡು ಬಂದಿದೆ. ವಿನೋಬನಗರದ 65 ವರ್ಷದ ಪ್ರಯಾಣದ ಹಿನ್ನೆಲೆಯ ವ್ಯಕ್ತಿಯಲ್ಲಿ ಸೋಂಕು ಕಂಡು ಬಂದಿದೆ.
ದಾವಣಗೆರೆ ತಾಲ್ಲೂಕಿನ ದೊಡ್ಡಬಾತಿಯಲ್ಲಿ 40 ವರ್ಷದ ಪ್ರಯಾಣದ ಹಿನ್ನೆಲೆಯ ವ್ಯಕ್ತಿಗೆ ಸೋಂಕು ಬಂದಿದೆ.
ಹರಿಹರದ 20 ಹಾಗೂ 60 ವರ್ಷದ ವ್ಯಕ್ತಿಗಳಿಗೆ ಸೋಂಕು ಬಂದಿದೆ. 29 ವರ್ಷದ ವ್ಯಕ್ತಿಗೆ ಸಂಪರ್ಕದಿಂದ ಸೋಂಕು ಬಂದಿದೆ. ಇಲ್ಲಿನ ಬೆಂಕಿ ನಗರದ 40 ವರ್ಷದ ವ್ಯಕ್ತಿಗೆ ಸಂಪರ್ಕದಿಂದ ಸೋಂಕು ಬಂದಿದೆ. ಹರ್ಲಾಪುರದಲ್ಲಿ 10 ವರ್ಷದ ಬಾಲಕಿ ಹಾಗೂ 48 ವರ್ಷದ ಮಹಿಳೆಗೆ ಸಂಪರ್ಕದಿಂದ ಸೋಂಕು ಬಂದಿದೆ.
ಹರಿಹರದ ಇಂದಿರಾನಗರದ 23 ವರ್ಷದ ವ್ಯಕ್ತಿಗೆ ಸಂಪರ್ಕದಿಂದ ಸೋಂಕು ಬಂದಿದೆ. ಜೆ.ಸಿ. ಬಡಾವಣೆಯ 43 ವರ್ಷದ ಮಹಿಳೆಗೆ ಸಂಪರ್ಕದಿಂದ ಸೋಂಕು ಬಂದಿದೆ. ಹರಿಹರ ತಾಲ್ಲೂಕಿನ ಹನಗವಾಡಿಯ 65 ವರ್ಷದ ವೃದ್ಧನಲ್ಲಿ ಸೋಂಕು ಬಂದಿದೆ.
ಜಗಳೂರು ತಾಲ್ಲೂಕಿನ ತೋರಣಗಟ್ಟೆಯಲ್ಲಿ 21 ವರ್ಷದ ವ್ಯಕ್ತಿ, 75 ವರ್ಷದ ವೃದ್ದೆಗೆ ಸಂಪರ್ಕದಿಂದ ಸೋಂಕು ಬಂದಿದೆ. ಅಲ್ಲದೇ, ಒಂದು ವರ್ಷದ ಗಂಡು ಮಗು, 70 ಹಾಗೂ 75 ವರ್ಷದ ವೃದ್ಧೆಯರಿಗೆ ಸಂಪರ್ಕದಿಂದ ಸೋಂಕು ಬಂದಿದೆ. ಬಿಳಿಚೋಡಿನಲ್ಲಿ ಪ್ರಯಾಣದ ಹಿನ್ನೆಲೆಯ ಮೂರು ವರ್ಷದ ಗಂಡು ಮಗುವಿಗೆ ಸೋಂಕು ಬಂದಿದೆ. ತಾಲ್ಲೂಕಿನ ಹೊರಕೆರೆಯ 14 ವರ್ಷದ ಬಾಲಕಿಗೆ ಸಂಪರ್ಕದಿಂದ ಸೋಂಕು ಬಂದಿದೆ.
ಹೊನ್ನಾಳಿ ತಾಲ್ಲೂಕಿನ ದುರ್ಗಿಗುಡಿಯಲ್ಲಿ ಸಂಪರ್ಕದಿಂದಾಗಿ 57 ವರ್ಷದ ವ್ಯಕ್ತಿಗೆ ಸೋಂಕು ಬಂದಿದೆ. ದೊಡ್ಡಮಲ್ಲಾಪುರದಲ್ಲಿ ಪ್ರಯಾಣದ ಹಿನ್ನೆಲೆಯ 25 ವರ್ಷದ ವ್ಯಕ್ತಿಗೆ ಸೋಂಕು ಬಂದಿದೆ.
ಚನ್ನಗಿರಿ ತಾಲ್ಲೂಕಿನ ತಣಿಗೆರೆಯಲ್ಲಿ ಸಂಪರ್ಕದಿಂದ 17, 19, 21, 22 ವರ್ಷದ ವ್ಯಕ್ತಿಗಳು ಹಾಗೂ 22, 38 50 ವರ್ಷದ ಮಹಿಳೆಯರು ಹಾಗೂ 76 ವರ್ಷದ ವೃದ್ಧೆಯಲ್ಲಿ ಸೋಂಕು ಕಂಡು ಬಂದಿದೆ. ನಲ್ಲೂರಿನ 45 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಂಡು ಬಂದಿದೆ. ಕೊಂಡದಹಳ್ಳಿಯಲ್ಲಿ 38 ವರ್ಷದ ಮಹಿಳೆಗೆ ಸೋಂಕು ಬಂದಿದೆ. ಬಿಳಿಚೋಡಿನಲ್ಲಿ ಪ್ರಯಾಣದ ಹಿನ್ನೆಲೆಯ 14 ವರ್ಷದ ಬಾಲಕನಲ್ಲಿ ಸೋಂಕು ಕಂಡು ಬಂದಿದೆ.
ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಕಡತಿಯಲ್ಲಿ ಫ್ಲುದಿಂದ ಬಳಲುತ್ತಿದ್ದ 65 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಕೊಟ್ಟೂರಿನ 22 ವರ್ಷದ ವ್ಯಕ್ತಿಗೆ ಸಂಪರ್ಕದಿಂದ ಸೋಂಕು ಬಂದಿದೆ.
ಹುಬ್ಬಳ್ಳಿಯ 41 ವರ್ಷದ ಫ್ಲುದಿಂದ ಬಳಲುತ್ತಿದ್ದ ವ್ಯಕ್ತಿಯಲ್ಲಿ ಸೋಂಕು ಕಂಡು ಬಂದಿದೆ. ರಾಣೇಬೆನ್ನೂರು ತಾಲ್ಲೂಕಿನ ಕಂಡೆರಾಯನಹಳ್ಳಿಯ 30 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಂಡು ಬಂದಿದೆ.