ಪತ್ರಿಕಾ ವರದಿಗೆ ಸ್ಪಂದನೆ: ಗುಂಡಿ ತೋಡಿ ನೀರುಣಿಸಿದ ಪಾಲಿಕೆ

ದಾವಣಗೆರೆ, ಮಾ. 27- ಹದಡಿ ರಸ್ತೆಯಲ್ಲಿನ ಮಧ್ಯಭಾಗದ ಗಿಡಗಳ ಸುತ್ತ ಗುಂಡಿ ತೋಡಿ ಮಹಾನಗರ ಪಾಲಿಕೆಯಿಂದ ನೀರುಣಿಸಲಾಗಿದೆ. 

ಮೊನ್ನೆ ನೀರು ನಿಲ್ಲದ ಸ್ಥಳದಲ್ಲಿಯೇ ನೀರು ಚೆಲ್ಲುತ್ತಾ ಹೋಗಿದ್ದ ಕ್ರಮಕ್ಕೆ ಹದಡಿ ರಸ್ತೆಯ ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಸುದ್ದಿ `ಜನತಾವಾಣಿ’ ಪತ್ರಿಕೆಯಲ್ಲೂ ಪ್ರಕಟಗೊಂಡಿತ್ತು. ಇದೀಗ ಎಚ್ಚೆತ್ತುಕೊಂಡ ಪಾಲಿಕೆ, ಗಿಡಗಳ ಬೇರುಗಳ ಬಳಿ ಚಿಕ್ಕ ಗುಂಡಿ ತೆಗೆದು, ಅಲ್ಲಿ ನೀರುಹಾಕುವ ಕಾರ್ಯಕ್ಕೆ ಮುಂದಾಗಿತ್ತು. ಪಾಲಿಕೆಯ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

error: Content is protected !!