ರಾಜಕಾಲುವೆ ಕಾಮಗಾರಿ ವೀಕ್ಷಿಸಿದ ಮೇಯರ್

ದಾವಣಗೆರೆ, ಮಾ. 7- ನಗರದ ಗಡಿಯಾರ ಕಂಬದ‌ ಹತ್ತಿರ ನಡೆಯುತ್ತಿರುವ  ರಾಜ ಕಾಲುವೆ ನಿರ್ಮಾಣ  ಕಾಮಗಾರಿಯನ್ನು ಮಹಾಪೌರರಾದ ಜಯಮ್ಮ ಗೋಪಿ ನಾಯ್ಕ ಅವರು ಇಂದು ವೀಕ್ಷಿಸಿದರು.

ನಗರ ದೇವತೆ ದುರ್ಗಾಂಬಿಕಾ‌ ದೇವಿ ಜಾತ್ರೆ ಸಮೀಪದಲ್ಲಿ ಇರುವುದರಿಂದ ಈ ಸಂದರ್ಭದಲ್ಲಿ ಭಕ್ತಾದಿಗಳು ಮತ್ತು ಜನ ಸಾಮಾನ್ಯರಿಗೆ ತೊಂದರೆಯಾಗದಂತೆ  ತ್ವರಿತವಾಗಿ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು, 

ಈ ಸಂದರ್ಭದಲ್ಲಿ ಪಾಲಿಕೆ ಮಾಜಿ  ಸದಸ್ಯ ಶಿವನಗೌಡ ಟಿ. ಪಾಟೀಲ್, ಸ್ಮಾರ್ಟ್ ಸಿಟಿ ನಿರ್ದೇಶಕ ಎಸ್.ಬಾಬು, ಕೆ.ಎಸ್. ಮೋಹನ್, ಎಚ್.ಓ. ದುಗ್ಗಪ್ಪ, ಪಾಲಿಕೆ ಇಂಜಿನಿಯರ್ ಸತೀಶ್ ನಾಯ್ಕ, ಸ್ಮಾರ್ಟ್ ಸಿಟಿ  ಎ.ಇ. ವೀರೇಶ್ ಉಪಸ್ಥಿತರಿದ್ದರು.

error: Content is protected !!