ಕಾಂಗ್ರೆಸ್‌ ಪಕ್ಷದ ಬಲವರ್ಧನೆಗೆ ವಿಶ್ರಾಂತ ಬದುಕು ಮೀಸಲು

ಹರಪನಹಳ್ಳಿ, ಫೆ.11- ತಾಲ್ಲೂಕಿನಲ್ಲಿ ಕಾಂಗ್ರೆಸ್ ಸಂಘಟನೆಯ ಬಲವರ್ಧನೆಗೆ ವಿಶ್ರಾಂತ ಜೀವನ ವಿನಿಯೋಗಿಸುವುದಾಗಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ (ಕ್ರೈಸ್) ಸೇವಾ ನಿವೃತ್ತಿ ಹೊಂದಿದ ಕಾರ್ಯಪಾಲಕ ಅಭಿಯಂತರ ಎಚ್.ಎಂ. ಮಲ್ಲಿಕಾರ್ಜುನ್ ಹೇಳಿದರು.

ಸೇವಾ ನಿವೃತ್ತಿಯ ಹಿನ್ನೆಲೆಯಲ್ಲಿ ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಎಂ.ಪಿ. ಪ್ರಕಾಶ್ ಹಾಗೂ ಎಂ.ಪಿ. ರವೀಂದ್ರ ಅಭಿಮಾನಿಗಳು ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.

ಕೆಪಿಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಯಾಗಿ ಪಕ್ಷದ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿ ಕೊಂಡಿರುವ ಪತ್ನಿ ಎಂ.ಪಿ. ಲತಾ ಅವರ ಸಮಾಜಮುಖಿ ಹಾಗೂ ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಿಗೆ ಪ್ರೋತ್ಸಾಹಿ ಸುವ ಹಾಗೂ ಅದರಲ್ಲಿ ತಾವೂ ಭಾಗಿಯಾಗುವ ಮೂಲಕ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ, ಸಂಘಟನೆಯ ಬಲವರ್ಧನೆಗೆ ಸೇವೆ ಸಲ್ಲಿಸುತ್ತೇನೆ ಎಂದರು.

ಪುರಸಭಾ ಸದಸ್ಯ ಎಂ.ವಿ. ಅಂಜಿನಪ್ಪ ಮಾತನಾಡಿ, ಮಲ್ಲಿಕಾರ್ಜುನ ಅವರ ರಾಜಕೀಯ ಜೀವನ ಪ್ರಕಾಶಮಾನವಾಗಿ ಬೆಳಗಲಿ ಎಂದು ಆಶಯ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯರುಗಳಾದ ಹುಲಿಕಟ್ಟೆ ಚಂದ್ರಪ್ಪ, ಕಂಚಿಕೆರೆ ಜಯಲಕ್ಷ್ಮಿ, ಪುರಸಭಾ ಸದಸ್ಯರಾದ ಗೊಂಗಡಿ ನಾಗರಾಜ, ಉದ್ದಾರ ಗಣೇಶ, ಲಾಟಿ ದಾದಾಪೀರ್, ಮುಖಂಡರಾದ ಎಲ್. ಮಂಜ್ಯಾನಾಯ್ಕ್, ಬಾಣದ ಅಂಜಿನಪ್ಪ, ವಸಂತಪ್ಪ, ಕಂಚಿಕೆರೆ ಅಂಜಿನಪ್ಪ, ಕನಕಬಸಾಪುರ ಮಂಜುನಾಥ,  ಉದಯಶಂಕರ್, ಶಮೀವುಲ್ಲಾ, ಕುಂಚೂರು ಇಬ್ರಾಹಿಂ, ಟಿ.ಎಚ್.ಎಂ. ಮಂಜುನಾಥ, ನವರಂಗ, ನರೇಶ್, ಈಶ್ವರನಾಯ್ಕ್, ಎ.ಜಾವೀದ್,  ಯುವ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಮತ್ತೂರು ಬಸವರಾಜ ಹಾಗು ಇತರರು ಇದ್ದರು.

error: Content is protected !!