ದಾವಣಗೆರೆ, ಫೆ.26- ಮಹಾಶಿವರಾತ್ರಿ ಪ್ರಯುಕ್ತ ಅಂತರರಾಷ್ಟ್ರೀಯ ಅಧ್ಯಾತ್ಮಿಕ ಸೇವಾ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ವಿಶ್ವ ಸದ್ಭಾವನಾ ಶಾಂತಿಯಾತ್ರೆಯನ್ನು ಇಂದು ನಗರದಲ್ಲಿ ನಡೆಸಲಾಯಿತು.
ಆಕರ್ಷಕ ಶಿವಲಿಂಗಗಳೊಂದಿಗೆ ಶಾಂತಿ ಯಾತ್ರೆಯು ಮೋತಿ ವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಿಂದ ಆರಂಭ ಗೊಂಡು, ರಾಜಬೀದಿಗಳಲ್ಲಿ ಸಂಚರಿಸಿತು.
ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕ ರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ನೇತೃತ್ವದಲ್ಲಿ ಏರ್ಪಾಡಾಗಿದ್ದ ಶಾಂತಿ ಯಾತ್ರೆಯಲ್ಲಿ, ಆಕರ್ಷಕ ಜ್ಯೋತಿರ್ಲಿಂಗಗಳು ಸಾರ್ವಜನಿಕರನ್ನು ಹಿಡಿದಿಟ್ಟುಕೊಂಡಿದ್ದವು. ಶಾಂತಿಯಾತ್ರೆ ಮುಂಭಾಗದಲ್ಲಿ ಹೆಜ್ಜೆ ಹಾಕು ತ್ತಿದ್ದ ಕುದುರೆ ಮತ್ತು ಆನೆ ಗಮನ ಸೆಳೆದವು.
ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಹಿರಿಯ ವೈದ್ಯರೂ ಆದ ಜಿಲ್ಲಾ ಲಯನ್ಸ್ ಮಾಜಿ ರಾಜ್ಯಪಾಲ ಡಾ. ಬಿ.ಎಸ್. ನಾಗಪ್ರಕಾಶ್, ದಾವಣಗೆರೆ ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಜಿ. ಉಳುವಯ್ಯ, ವೀರಶೈವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಅಜ್ಜಂಪುರ ಶೆಟ್ರು ಮೃತ್ಯುಂಜಯ, ಮೋತಿ ವೀರಪ್ಪ ಕಾಲೇಜಿನ ಪ್ರಾಂಶುಪಾಲ ಪಂಚಾಕ್ಷರಪ್ಪ ಸೇರಿದಂತೆ, ಗಣ್ಯರು ಶಾಂತಿಯಾತ್ರೆಗೆ ಚಾಲನೆ ನೀಡಿದರು.
ರಾಜಯೋಗ ಶಿಕ್ಷಕರುಗಳಾದ ಬ್ರಹ್ಮಾಕುಮಾರಿ ಶೋಭಾಜಿ, ಬ್ರಹ್ಮಾಕುಮಾರಿ ಶಾಂತಾಜಿ, ಬ್ರಹ್ಮಾಕುಮಾರಿ ಅರುಣಾಜಿ, ಬ್ರಹ್ಮಾಕುಮಾರಿ ಚೆನ್ನಮ್ಮ, ಬ್ರಹ್ಮಾಕುಮಾರಿ ಸುಧಾ ಮತ್ತಿತರರು ವಹಿಸಿದ್ದರು.
ಮಕ್ಕಳ ತಜ್ಞ ವೈದ್ಯರುಗಳಾದ ಡಾ. ಮಧು ಪೂಜಾರ್, ಡಾ. ಸ್ನೇಹ ಪೂಜಾರ್ ದಂಪತಿ, ಅಸ್ತಮ ತಜ್ಞ ವೈದ್ಯ
ಡಾ. ಎನ್. ಹೆಚ್. ಕೃಷ್ಣ, ಇಂಜಿನಿಯರ್ ನಾಗೇಂದ್ರಪ್ಪ ಪಿಸೆ, ಲೆಕ್ಕ ಪರಿಶೋಧಕ ಪ್ರಭುದೇವ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ, ಸೀತಮ್ಮ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿಂದಿ ಶಿಕ್ಷಕ ರಾಜಣ್ಣ, ನಿವೃತ್ತ ಇಂಜಿನಿಯರ್ ಕಲ್ಲಪ್ಪ, ಉದ್ಯಮಿ ಬಸವನಗೌಡ್ರು, ಇಂಜಿನಿಯರ್ ಮಂಜುನಾಥ್, ಸಮಾಜ ಸೇವಕರಾದ ಶ್ರೀಮತಿ ರತ್ನ ಪೂಜಾರ್, ವರ್ತಕ ಸಂತೋಷ್ ವರ್ಣೇಕರ್, ನಿವೃತ್ತ ಪ್ರಾಂಶುಪಾಲ ಟಿ.ಹೆಚ್. ಗುಡ್ಡಪ್ಪ, ಕೃಷಿಕರಾದ ಮರಳಿ ಸಿದ್ದಪ್ಪ, ಬಾತಿ ರೇವಣಸಿದ್ದಪ್ಪ, ಬಸಾಪುರದ ಉಮಾಪತಿ, ನಂದಿ ಸಿದ್ದಮ್ಮ, ಮೋಟಿವೇಷನಲ್ ಸ್ಪೀಕರ್ ವಿನಾಯಕ ಮತ್ತಿತರರು ರಾಲಿಯಲ್ಲಿ ಭಾಗವಹಿಸಿದ್ದರು.
ಶಾಂತಿಯಾತ್ರೆಯು ಶ್ರೀ ಡಿ. ದೇವರಾಜ ಅರಸು ಬಡಾವಣೆ `ಬಿ’ ಬ್ಲಾಕ್‌ನಲ್ಲಿರುವ ಬ್ರಹ್ಮಾಕುಮಾರೀಸ್ ಸಂಸ್ಥೆಯ ಶಿವಧ್ಯಾನ ಮಂದಿರವನ್ನು ತಲುಪಿತು. ನಂತರ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಶಿವ ಧ್ವಜಾರೋಹಣವನ್ನು ನೆರವೇರಿಸಿದ ಬಳಿಕ ಶಿವಧ್ಯಾನ ಕಾರ್ಯಕ್ರಮಗಳು ಜರುಗಿದವು.
ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ : ಶ್ರೀ ಡಿ. ದೇವರಾಜ ಅರಸು ಬಡಾವಣೆ `ಬಿ’ ಬ್ಲಾಕ್‌ನಲ್ಲಿರುವ ಶಿವಧ್ಯಾನ ಮಂದಿರದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ ಕಾರ್ಯಕ್ರಮವನ್ನು ಈಗಾಗಲೇ ಆರಂಭಿಸಲಾಗಿದ್ದು, ನಾಡಿದ್ದು ದಿನಾಂಕ 28 ರವರೆಗೆ ಪ್ರತಿದಿನ ಬೆಳಿಗ್ಗೆ 10 ರಿಂದ ರಾತ್ರಿ 8 ರವರೆಗೆ ಸಾರ್ವಜನಿಕರು ಉಚಿತವಾಗಿ ವೀಕ್ಷಿಸಬಹುದು.
ರಾಜಯೋಗ ಶಿಬಿರ : ಶಿವರಾತ್ರಿ ಪ್ರಯುಕ್ತ ನಾಳೆ ದಿನಾಂಕ 27 ರಿಂದ ಮಾರ್ಚ್ 1ರವರೆಗೆ ಮೂರು ದಿನಗಳ ಕಾಲ ರಾಜಯೋಗ ಶಿಬಿರವನ್ನು ಆಯೋಜಿಸ ಲಾಗಿದ್ದು, ಶಿವಧ್ಯಾನ ಮಂದಿರ ಮತ್ತು ಪಿ.ಜೆ. ಬಡಾವಣೆ 8ನೇ ಮುಖ್ಯರಸ್ತೆ – ಬ್ರಹ್ಮಾ ಕುಮಾರೀಸ್ ರಸ್ತೆಯಲ್ಲಿರುವ ಬ್ರಹ್ಮಾಕುಮಾ ರೀಸ್ ಸಂಸ್ಥೆಯಲ್ಲಿ ಪ್ರತಿದಿನ ಬೆಳಿಗ್ಗೆ 7.30 ರಿಂದ 8.30, ಸಂಜೆ 7 ರಿಂದ 8ರವರೆಗೆ ಒಂದು ಗಂಟೆ ಕಾಲ ಶಿಬಿರ ನಡೆಯಲಿದೆ.