ದಾವಣಗೆರೆ, ಡಿ.6- ನಗರದ ಶಿವಪ್ಪಯ್ಯ ವೃತ್ತದಿಂದ – ಡಾಂಗೆ ಪಾರ್ಕ್ ಮುಖಾಂತರ ನಿಟ್ಟುವಳ್ಳಿ ಮುಖ್ಯರಸ್ತೆ ಅಗಲೀಕರಣದ ನೆಪದಲ್ಲಿ, ಒಳ್ಳೆಯ ರಸ್ತೆಯನ್ನು ಒಡೆದು, ಹೊಸ ರಸ್ತೆ ನಿರ್ಮಾಣ ಮಾಡುತ್ತಿರುವುದನ್ನ ವಿರೋದಿಸುತ್ತೇವೆ.
ಹಾಲಿ ಇರುವ ರಸ್ತೆಯನ್ನು ಹೊಡೆದು ಹೊಸ ರಸ್ತೆ ನಿರ್ಮಾಣ ಮಾಡಲು ಸಾರ್ವಜನಿಕರ ವಿರೋಧವೂ ಇದೆ, ವಿಷಯವನ್ನು ತಿಳಿದ ವಿಪಕ್ಷ ನಾಯಕ ಪ್ರಸನ್ನ ಕುಮಾರ್ ನೇತೃತ್ವದ ಬಿಜೆಪಿ ಪಾಲಿಕೆ ಸದಸ್ಯರ ತಂಡ ರಸ್ತೆ ಕಾಮಗಾರಿ ನಡೆಯುವ ಸ್ಥಳ ಪರಿಶೀಲಿಸಿ ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸಲಾಯಿತು.
ಸಾರ್ವಜನಿಕ ಮನವಿಗೆ ಸ್ಪಂದಿಸಿದರು, ಹಾಲಿ ರಸ್ತೆ ಉತ್ತಮವಾಗಿದ್ದು, ನಗರದಲ್ಲಿ ಅನೇಕ ರಸ್ತೆಗಳಲ್ಲಿ ಬಿದ್ದಿರುವ ಗುಂಡಿ ಮುಚ್ಚಲೂ ಸಾಧ್ಯವಾಗದ ಪಾಲಿಕೆ, ಸಾರ್ವಜನಿಕರ ತೆರಿಗೆ ಹಣವನ್ನೂ ಪೋಲು ಮಾಡುತ್ತಿದೆ.
ನಗರದಲ್ಲಿ ಇನ್ನೂ ಅನೇಕ ರಸ್ತೆಗಳು ಸಾರ್ವ ಜನಿಕರು ಓಡಾಡಲು ಸಾಹಸಪಡುವ ರೀತಿ ಇವೆ. ಆ ರಸ್ತೆಗಳನ್ನು ಅಭಿವೃದ್ಫಿ ಪಡಿಸಲಿ, ಹಾಲಿ ರಸ್ತೆ ಒಡೆದು ಹೊಸ ರಸ್ತೆ ಮಾಡುವ ಬದಲು, ಇದೇ ರಸ್ತೆಯನ್ನು ಅಗಲೀಕರಣ ಮಾಡಿ, ಫುಟ್‌ಪಾತ್, ಚರಂಡಿ ನಿರ್ಮಾಣ ಮಾಡಲಿ ಎಂದು ಆಯುಕ್ತರಿಗೆ ಆಗ್ರಹಿಸಿ, ಮನವಿ ಮಾಡಲಾಯಿತು.
ಪಾಲಿಕೆ ಸದಸ್ಯರಾದ ಆರ್. ಶಿವಾನಂದ್, ವೀರೇಶ್ ಕೆ.ಎಂ., ವೀರೇಶ್ ಎಸ್.ಟಿ., ಬಿಜೆಪಿ ಮುಖಂಡರಾದ ಜಯಪ್ರಕಾಶ್, ಸುರೇಶ್, ಯೋಗೀಶ್, ಲಕ್ಷ್ಮಣ ಇದ್ದರೂ.