ದಾವಣಗೆರೆ ವಿ.ವಿ. ನೂತನ ಸಿಂಡಿಕೇಟ್ ಸದಸ್ಯರುಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಮನವಿ
ದಾವಣಗೆರೆ, ನ.28- ದಾವಣಗೆರೆ ವಿಶ್ವವಿದ್ಯಾನಿಲಯಕ್ಕೆ ನೂತನ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡಿರುವ ಡಾ. ಜಿ.ಕೆ. ಪ್ರೇಮ, ದ್ಯಾಮಪ್ಪ, ಶಬೀರ್ ಅಲಿಖಾನ್, ಆರ್.ಟಿ. ಪ್ರಶಾಂತ್, ಡಾ. ಸಿ. ಎನ್. ಪ್ರಶಾಂತ ಅವರುಗಳನ್ನು ನಗರದ ಬಿಐಇಟಿ ಕಾಲೇಜಿನ ಸಭಾ ಕೊಠಡಿಯಲ್ಲಿ ದಾವಣಗೆರೆ ಖಾಸಗಿ ಪದವಿ ಕಾಲೇಜು ಆಡಳಿತ ಮಂಡಳಿಗಳ ಮುಖ್ಯಸ್ಥರುಗಳು ಹಾಗೂ ಪ್ರಾಂಶುಪಾಲರುಗಳು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಈ ವೇಳೆ ಬಿಐಇಟಿ ಪ್ರಾಂಶುಪಾಲ ಡಾ. ಎಚ್.ಬಿ. ಅರವಿಂದ್ ಮಾತನಾಡಿ, ನೂತನ ಸಿಂಡಿಕೇಟ್ ಸದಸ್ಯರು ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿರುವ ನ್ಯೂನತೆ ಸರಿಪಡಿಸಿ, ವಿವಿಗೆ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್)ಯಿಂದ ಎ+ ಗ್ರೇಡ್ ಕೊಡಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ದಾವಣಗೆರೆ ವಿ.ವಿ.ಯ ಮಾಜಿ ಸಿಂಡಿಕೇಟ್ ಸದಸ್ಯ ಪ್ರೊ. ಸಿ.ಎಚ್. ಮುರುಗೇಂದ್ರಪ್ಪ ಮಾತನಾಡಿ, ಸಿರಿಗೆರೆ ಸ್ವಾಮೀಜಿ ಅವರ ಆಶೀರ್ವಾದ ಹಾಗೂ ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್. ಮಲ್ಲಿಕಾರ್ಜುನ್ ಅವರ ಸಹಕಾರದೊಂದಿಗೆ ದಾವಣಗೆರೆ ವಿಶ್ವವಿದ್ಯಾನಿಲಯ ಆರಂಭವಾಯಿತು.
ಕಳೆದ 10 ವರ್ಷಗಳ ಈ ವಿವಿಯಲ್ಲಿ ಕುವೆಂಪು ವಿವಿಗಿಂತಲೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿರುವುದು ಹೆಮ್ಮೆಯ ಸಂಗತಿ. ನೂತನ ಸಿಂಡಿಕೇಟ್ ಸದಸ್ಯರು ಪರಸ್ಪರ ಚರ್ಚಿಸಿ, ದಾವಣಗೆರೆ ವಿವಿಯನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಕಿವಿಮಾತು ಹೇಳಿದರು.
ಖಾಸಗಿ ಪದವಿ ಕಾಲೇಜುಗಳ ಆಡಳಿತ ಮಂಡಳಿಯ ವೀರೇಶ್ ಪಟೇಲ್ ಮಾತನಾಡಿ, ನೂತನ ಸಿಂಡಿಕೇಟ್ ಸದಸ್ಯರು ಖಾಸಗಿ ಕಾಲೇಜುಗಳ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ, ಅವುಗಳಿಗೆ ಪರಿಹಾರ ಕೊಡಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆಡಳಿತ ಮಂಡಳಿ ಸದಸ್ಯರು ಹಾಗೂ ಪ್ರಾಚಾರ್ಯರು : ಬಿಐಇಟಿ ಕಾಲೇಜಿನ ಪ್ರೊ. ವೈ ವೃಷಭೇಂದ್ರಪ್ಪ, ಎಸ್‌ಬಿಸಿ ಕಾಲೇಜಿನ ಡಾ. ಷಣ್ಮುಖ ಕೆ., ಡಿಆರ್‌ಎಂ ಕಾಲೇಜಿನ ಡಾ. ರೂಪಶ್ರೀ, ಬಿ. ಎಂ., ಎವಿಕೆ ಕಾಲೇಜಿನ ಪ್ರೊ. ಕಮಲ ಸೊಪ್ಪಿನ್, ಎಂಎಸ್‌ಬಿ ಕಾಲೇಜಿನ ಡಾ. ನೀಲಾಂಬಿಕೆ. ಜಿ. ಸಿ., ಜಾಕೀರ್ ಹುಸೇನ್ ಕಾಲೇಜಿನ ಪ್ರೊ. ಕೌಶತ್ರಿ ಬೇಗಂ, ಎಆರ್‌ಜೆ ಕಾಲೇಜಿನ ಡಾ. ಬೋರಯ್ಯ, ಜಿ. ಬಿ., ಬಿಐಹೆಚ್‌ಇ ಕಾಲೇಜಿನ ಡಾ. ವೀರಪ್ಪ ಬಿ., ಬಾಪೂಜಿ ಎಂಬಿಎ ಕಾಲೇಜಿನ ಡಾ. ಸ್ವಾಮಿ ತ್ರಿಭುವಾನಂದ ಹೆಚ್. ವಿ., ಎಜಿಬಿ ಕಾಲೇಜಿನ ಡಾ. ಬಿ. ಪಿ. ಕುಮಾರ್, ಭದ್ರಾ ಕಾಲೇಜಿನ ಸಂಕೇತ್ ಎಮ್., ಪ್ರೊ. ಮುರುಗೇಶ್ ಟಿ., ಕಿರ್ಲೋಸ್ಕರ್ ಕಾಲೇಜಿನ ಪ್ರೊ ಗಿರೀಶ್, ಪಿಎಸ್ಎಸ್‌ಎಸ್‌ಹೆಚ್ಇ ಕಾಲೇಜಿನ ಡಾ. ಪ್ರಸಾದ್, ಜೆ.ಹೆಚ್. ಪಟೇಲ್ ಕಾಲೇಜಿನ ಮುಸ್ತಫಾ, ಇಂಟರ್ ಫೇಸ್ ಕಾಲೇಜಿನ ರಘು ಗುರುಮೂರ್ತಿ , ದವನ್ ಮತ್ತು ನೂತನ ಕಾಲೇಜಿನಿಂದ ಹರ್ಷರಾಜ್. ಎ. ಗುಜ್ಜರ್, ಚಾಣಕ್ಯ ಕಾಲೇಜಿನ ನಾಗರಾಜ್ ಶೆಟ್ರು, ಜೈನ್ ಟ್ರಿನಿಟಿ ಕಾಲೇಜಿನ ಮೋಕ್ಷ, ಮುದೇಗೌಡರ ಕಾಲೇಜಿನ ಮುನವಳ್ಳಿ ಮಠ ಕೆ. ಎಸ್., ಚೈತನ್ಯ ಕಾಲೇಜಿನ ಅಭಿಷೇಕ್ ಬೇತೂರ್, ಪ್ರಾಚಾರ್ಯರು ಎಸ್‌ಜೆವಿಪಿ ಕಾಲೇಜು, ಸಿವಿ ರಾಮನ್ ಕಾಲೇಜಿನ ಅರುಣ್ ಕುಮಾರ್ ಎಸ್. ಎಸ್., ಬಿಐಇಟಿ ಕಾಲೇಜಿನ ಪ್ರೊ ವಿನಯ್ ಎಂ. ಟಿ., ದವನ್ ಕಾಲೇಜಿನ ಮಧುಕರ್ ಎ. ಈ., ಸಿವಿ ರಾಮನ್ ಕಾಲೇಜಿನ ಗಂಗಾಧರಯ್ಯ ಡಿ. ಎಸ್ ಉಪಸ್ಥಿತರಿದ್ದರು.