ಪರಿಸರ ಸ್ವಚ್ಚತೆ ಪ್ರತಿ ನಾಗರಿಕನ ಜವಾಬ್ದಾರಿ

ಪರಿಸರ ಸ್ವಚ್ಚತೆ ಪ್ರತಿ ನಾಗರಿಕನ ಜವಾಬ್ದಾರಿ

ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ನ್ಯಾ. ಮಹಾವೀರ ಮ. ಕರೆಣ್ಣನವರ್

ದಾವಣಗೆರೆ, ಸೆ.26- ಪರಿಸರ ಸ್ವಚ್ಛತೆ ಕೇವಲ ಪೌರ ಕಾರ್ಮಿಕರದ್ದಷ್ಟೇ ಅಲ್ಲ, ಪ್ರತಿ ನಾಗರಿಕನೂ ಪರಿಸರ ಸ್ವಚ್ಛತೆಯ ಜವಾಬ್ದಾರಿ ಹೊರಬೇಕು ಎಂದು ನ್ಯಾಯಾಧೀಶ ಮಹಾವೀರ ಮ. ಕರೆಣ್ಣನವರ್ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ನಗರದ ರಿಂಗ್‌ ರಸ್ತೆಯ ನಿಜಲಿಂಗಪ್ಪ ಬಡಾವಣೆಯ ಉದ್ಯಾನ ವನದಲ್ಲಿ ಸ್ವಭಾವ ಸ್ವಚ್ಛತಾ-ಸಂಸ್ಕಾರ ಸ್ವಚ್ಛತಾ ಅಭಿಯಾನದಡಿ ಗುರು ವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾವು ವಾಸಿಸುವ ಜಾಗ ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಚವಾಗಿರುವಂತೆ ನೋಡಿಕೊಂಡರೆ, ಉತ್ತಮ ಗಾಳಿ, ಬೆಳಕಿನೊಂದಿಗೆ ಸಮಾಜದಲ್ಲಿ ಎಲ್ಲರೂ ಸ್ವಾಸ್ಥ್ಯವಾಗಿ ಬದುಕಬ ಹುದು ಎಂದು ಹೇಳಿದರು.

ಸರ್ಕಾರಿ ಕಚೇರಿಗಳು, ಉದ್ಯಾನವನಗಳು ಹಾಗೂ ನಗ ರದ ಪ್ರತಿ ಬೀದಿಗಳನ್ನು ಸ್ವಚ್ಛವಾಗಿ ರಿಸುವ ಜತೆಗೆ, ಪರಿಸರ ಜಾಗೃತಿ ಮೂಡಿಸುವುದು ಕಾರ್ಯ ಕ್ರಮದ ಉದ್ದೇಶವಾಗಿದೆ ಎಂದರು.

ನ್ಯಾಯಾಧೀಶೆ ರಾಜೇಶ್ವರಿ ಎನ್‌. ಹೆಗಡೆ ಮಾತನಾಡಿ, ಸ್ವಚ್ಛತೆ ಯಿಂದ ಇದ್ದರೆ ಪ್ರಸ್ತುತ ದಿ ನಮಾನಗಳಲ್ಲಿ ಮಾರಕವಾಗಿರುವ ಡೆಂಗ್ಯೂ, ಚಿಕನ್‌ ಗುನ್ಯ, ಟೈಫಾಯಿಡ್‌ ಸೇರಿದಂತೆ ಅನೇಕ ರೋಗಗಳಿಂದ ದೂರ ಇರಬಹುದು ಎಂದರು.

ಪ್ಲಾಸ್ಟಿಕ್‌ ಮುಕ್ತ ಪರಿಸರ ನಿರ್ಮಾಣಕ್ಕಾಗಿ ಪ್ಲಾಸ್ಟಿಕ್‌ ಕವರ್‌ ಬಳಸದೇ ಬಟ್ಟೆ ಬ್ಯಾಗ್‌ ಬಳಸಬೇಕು ಎಂದ ಅವರು, ಹಸಿ-ಕಸ, ಒಣ-ಕಸವನ್ನು ಕಟ್ಟುನಿಟ್ಟಾಗಿ ಬೇರ್ಪಡಿಸುವಂತೆ ಮನವಿ ಮಾಡಿದರು.

ಈ ವೇಳೆ ನ್ಯಾಯಾಧೀಶರಾದ ಪ್ರವೀಣ್‌, ಜೆ.ಸಿ. ಪ್ರಶಾಂತ್‌, ಮಲ್ಲಿಕಾರ್ಜುನ್‌, ಎನ್.ಕೆ. ಸಿದ್ದರಾಜು, ಸಿ. ನಾಗೇಶ್‌, ಶ್ರೀನಿವಾಸ್‌, ಪಾಲಿಕೆ ಆಯುಕ್ತೆ ರೇಣುಕಾ, ಪರಿಸರ ನಿಯಂತ್ರಣ ಮಂಡಳಿಯ ಪುಂಡಲೀಕ ಮತ್ತು ಪಾಲಿಕೆ ಹಾಗೂ ನ್ಯಾಯಾಲಯದ ಸಿಬ್ಬಂದಿ ಇದ್ದರು.

error: Content is protected !!