ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಮರು ಸ್ಪರ್ಧಿಸಿ, ಕಾಂಗ್ರೆಸ್ಸಿಗೆ ಮುಖಭಂಗವಾಗುವಂತೆ ಗೆದ್ದು ಬನ್ನಿ

ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಮರು ಸ್ಪರ್ಧಿಸಿ,  ಕಾಂಗ್ರೆಸ್ಸಿಗೆ ಮುಖಭಂಗವಾಗುವಂತೆ ಗೆದ್ದು ಬನ್ನಿ

ದಾವಣಗೆರೆ, ಆ.12- ಕಾಂಗ್ರೆಸ್‌ ಪಕ್ಷದ ಭಿಕ್ಷೆಯಿಂದ ಬಿಜೆಪಿ ರಾಜ್ಯಾಧ್ಯಕ್ಷರು ಶಾಸಕರಾಗಿ ರುವುದು ಪಕ್ಷಕ್ಕೆ ಅವಶ್ಯವಿಲ್ಲ. ಆದ್ದರಿಂದ ರಾಜೀ ನಾಮೆ ಕೊಟ್ಟು ಮರು ಸ್ಪರ್ಧಿಸಿ ಕಾಂಗ್ರೆಸ್ಸಿಗೆ ಮುಖ ಭಂಗವಾಗುವಂತೆ ಗೆದ್ದು ಬನ್ನಿ ಎಂದು ಶಾಸಕ ಬಿ.ಪಿ. ಹರೀಶ್‌ ಕರೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ರಾಜಕೀಯದಲ್ಲಿ ಮ್ಯಾಚ್‌ ಪಿಕ್ಸಿಂಗ್‌ ಬಗ್ಗೆ ಧ್ವನಿ ಎತ್ತುತ್ತಲೇ ಬಂದಿದ್ದೇನೆ, ನಾಗರಾಜಗೌಡ ಅವರಿಗೆ ಕಾಂಗ್ರೆಸ್‌ ಅವಕಾಶ ಕೊಟ್ಟಿದ್ದರೆ ವಿಜಯೇಂದ್ರ ಗೆಲ್ಲುತ್ತಿರಲಿಲ್ಲ ಎಂಬ ಡಿ.ಕೆ. ಶಿವಕುಮಾರ್‌ ಹೇಳಿಕೆಯಲ್ಲಿ ಫಿಕ್ಸಿಂಗ್‌ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷರೇ ಒಪ್ಪಿರುವುದು ಕಾಣುತ್ತಿದೆ ಎಂದು ಹೇಳಿದರು. ಕಾಂಗ್ರೆಸ್ಸಿನ ಅನ್ಯಾಯ-ಅಕ್ರಮವನ್ನು ಬಿಜೆಪಿ ಮುಚ್ಚಿ ಹಾಕುವುದು, ಬಿಜೆಪಿಯ ಸೀಟ್‌ ಗೆಲುವಿಗೆ ಕಾಂಗ್ರೆಸ್‌ನವರು ಫಿಕ್ಸಿಂಗ್‌ ಆಗುವಂತಹ ಹೊಂದಾಣಿಕೆ ರಾಜಕೀಯದ ಬೆಳವಣಿಗೆ ರಾಜ್ಯದಲ್ಲಿ ಹೆಚ್ಚಾಗಿದೆ ಎಂದು ದೂರಿದರು. 

ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರ ಜಿಂಕೆ ಪ್ರಕರಣ ಮುಚ್ಚಿ ಹಾಕಲು ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರೇ ಕಾರಣ ಎಂದು ತಿಳಿಸಿದರು.

ವಾಲ್ಮೀಕಿ ಮತ್ತು ಮುಡಾ ಹಗರಣದ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದಾಗ `ನೀವು ಮಾಡಿಲ್ವಾ’ ಎಂಬ ಉತ್ತರ ಬರುತ್ತವೆಯೇ ಹೊರತು ಅಕ್ರಮ ನಡೆದಿಲ್ಲ ಎಂದು ಹೇಳುತ್ತಿಲ್ಲ. ಇಂತಹ ಬೆಳವಣಿಗೆ ಅಸಹ್ಯಕರ ವಾಗಿದೆ ಎಂದರು. ರಾಜಕೀಯ ನಾಯಕರು ಒಬ್ಬರಿಗೊಬ್ಬರು ಕಚ್ಚಾಡಿಕೊಂಡು ಹೊಂದಾಣಿಕೆ ರಾಜಕೀಯ ಮಾಡಿದ್ದೇವೆ ಎಂದು ತೋರಿಸುತ್ತಿದ್ದಾರೆ. ಆದ್ದರಿಂದ ಅನ್ಯಾಯ, ಭ್ರಷ್ಟಾಚಾರ ಮಾಡಿದ ಯಾವ ಪಕ್ಷದ ನಾಯಕರಾದರೂ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.

error: Content is protected !!