ರಾಜನಹಳ್ಳಿ ಮಠದಲ್ಲಿ ಶ್ರೀಗಳ ಆಶೀರ್ವಾದ ಪಡೆದ ಡಾ. ಪ್ರಭಾ ಮಲ್ಲಿಕಾರ್ಜುನ್ ಭರವಸೆ
ಮಲೇಬೆನ್ನೂರು, ಜೂ. 19- ರಾಜನಹಳ್ಳಿಯ ವಾಲ್ಮೀಕಿ ಗುರುಪೀಠಕ್ಕೆ ಮಂಗಳವಾರ ಸಾಯಂಕಾಲ ದಾವಣಗೆರೆ ಲೋಕಸಭಾ ಕ್ಷೇತ್ರದ ನೂತನ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಆಗಮಿಸಿ, ಶ್ರೀ ವಾಲ್ಮೀಕಿ ಪ್ರಸನ್ನಾನಂದ ಶ್ರೀಗಳಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಅವರ ಆಶೀರ್ವಾದ ಪಡೆದರು.
ಈ ವೇಳೆ ನೂತನ ಸಂಸದರನ್ನು ಶ್ರೀಗಳು ಸನ್ಮಾನಿಸಿ, ಅಭಿನಂದಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು, ಶ್ರೀಗಳ ಹುಟ್ಟುಹಬ್ಬದ ಈ ಶುಭ ಸಂದರ್ಭಕ್ಕೆ ಸಾಕ್ಷಿಯಾಗಿರುವುದು ಖುಷಿ ತಂದಿದೆ. ಚುನಾವಣೆಯಲ್ಲಿ ಎಲ್ಲಾ ಜನಾಂಗದವರೂ ಈ ಬಾರಿ ನನ್ನನ್ನು ಬೆಂಬಲಿಸಿದ್ದರಿಂದ ಗೆಲುವು ಸುಲಭವಾಯಿತು.
26 ವರ್ಷಗಳ ನಂತರ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಬಾವುಟವನ್ನು ಹಾರಿಸಿದ್ದೇವೆ. ಕ್ಷೇತ್ರದಲ್ಲಿ ಆಗಬೇಕಾಗಿರುವ ಯೋಜನೆಗಳ ಬಗ್ಗೆ ನನಗೆ ಅರಿವಿದೆ. ಈ ಬಗ್ಗೆ ಎಲ್ಲರ ಸಹಕಾರ ಪಡೆದು, ಯೋಜನೆಗಳ ಜಾರಿಗೆ ಪ್ರಾಮಾಣಿಕ ಹೋರಾಟ ಮಾಡುತ್ತೇನೆಂದು ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಶ್ರೀಗಳಿಗೆ ಹೇಳಿದರು.
ಜಗಳೂರು ಶಾಸಕ ದೇವೇಂದ್ರಪ್ಪ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಕೆ.ಪಿ. ಪಾಲಯ್ಯ, ಬಿ.ಎಂ. ವಾಗೀಶ್ ಸ್ವಾಮಿ, ಕುಕ್ಕುವಾಡ ಮಂಜುನಾಥ್, ಜಿ. ಮಂಜುನಾಥ್ ಪಟೇಲ್, ಜಿಗಳಿ ಆನಂದಪ್ಪ, ಕುರುಬರಹಳ್ಳಿ ಭರಮಣ್ಣ, ಕೆ.ಬಿ. ಮಂಜುನಾಥ್, ದೇವರಬೆಳಕೆರೆ ಮಹೇಶ್ವರಪ್ಪ, ಗುತ್ತೂರು ಹಾಲೇಶ್ಗೌಡ, ಕೊಕ್ಕನೂರು ಸೋಮಣ್ಣ, ತಿಮ್ಮೇನಹಳ್ಳಿ ರಾಜಣ್ಣ, ಮಲೇಬೆನ್ನೂರಿನ ಬಿ. ವೀರೇಶ್, ಸಿರಿಗೆರೆ ಪರಶುರಾಮ್, ಹರಳಹಳ್ಳಿ ಮಂಜು, ಮುದೇನೂರು ಭರತ್, ಪಾರ್ವತಿ ಬೋರಯ್ಯ, ಗೌರಮ್ಮ ಮಂಜುನಾಥ್, ರಾಜನಹಳ್ಳಿಯ ಸುಭಾಷ್ ಚಂದ್ರ ಬೋಸ್, ಎ.ಕೆ. ನಾಗೇಂದ್ರಪ್ಪ, ಭೀಮಣ್ಣ, ಮಾರುತಿ ದಾಸರ್, ಯಲವಟ್ಟಿ ಕೊಟ್ರೇಶ್ ನಾಯ್ಕ, ಕೊಂಡಜ್ಜಿ ತಿಪ್ಪಣ್ಣ, ಹನಗವಾಡಿ ಸಾರಥಿ ಉಮೇಶ್, ಟಿ. ಹನುಮಂತಪ್ಪ, ಉಕ್ಕಡಗಾತ್ರಿ ಪ್ರಕಾಶ್, ನಂದಿಗುಡಿ ಶ್ರೀಕಾಂತ್ ಸೇರಿದಂತೆ ಇನ್ನೂ ಅನೇಕರು ಈ ವೇಳೆ ಹಾಜರಿದ್ದು, ಶ್ರೀಗಳ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದರು.
ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯೆ ಶ್ರೀಮತಿ ಸವಿತಾ ಮತ್ತು ಗಣೇಶ್ ಹುಲ್ಲುಮನೆ ದಂಪತಿಯ ಈ ಸಂದರ್ಭದಲ್ಲಿ ಶ್ರೀಗಳು ಸನ್ಮಾನಿಸಿ, ಗೌರವಿಸಿದರು.