ದಾವಣಗೆರೆ, ಜೂ.16- ನಗರದ ನಿಜಲಿಂಗಪ್ಪ ಬಡಾವಣೆಯ ಶ್ರೀ ಸದ್ಗುರು ಬ್ರಹ್ಮ ಚೈತನ್ಯ ಮಹಾರಾಜರ ಮಂದಿರದಲ್ಲಿ ಭಾನುವಾರ ಪಂ. ಲಿಂಗರಾಜ್ ಬುವಾ ಯರಗುಪ್ಪಿ ಹಾಗೂ ದಿವಂಗತ ರಾಮಪ್ಪ ವೈ. ಹುಗ್ಗಣ್ಣನವರ ಸ್ಮರಣಾರ್ಥ ‘ನಾದ ಸಮ್ಮಾನ’ ಕಾರ್ಯಕ್ರಮ ನಡೆಯಿತು. ಮಾಜಿ ಕಾರ್ಪೊರೇಟರ್ ಮಹಾಬಲಿ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಕಲಾವಿದರಾದ ಶಿವಣ್ಣ, ಎಂ.ಎಸ್. ಕುಲಕರ್ಣಿ, ಮಾಲತೇಶ್ ಜೋಷಿ, ಗೋಪಿನಾಥ್, ಡಾ. ಅಶೋಕ್ ಹುಗ್ಗಣ್ಣನವರ್, ಗೌರಿ ಎಂ. ಜೋಷಿ, ಅನಿರುದ್ಧ, ವಿಶ್ವೇಶ್ವರ ಭಟ್ ಸೇರಿದಂತೆ ಇತರರಿದ್ದರು.
December 24, 2024