28ರಂದು ಚಿಗಟೇರಿ ಶಿವನಾರದಮುನಿ ತೇರು

28ರಂದು ಚಿಗಟೇರಿ ಶಿವನಾರದಮುನಿ ತೇರು

ಜಾತ್ರೆಯನ್ನು ವಿಜೃಂಭಣೆಯಿಂದ ನಡೆಸಲು ನಿರ್ಧಾರ.

– ಅಣಬೇರು ರಾಜಣ್ಣ ಅಧ್ಯಕ್ಷರು, ಶ್ರೀ ನಾರದಮುನಿ ಸ್ವಾಮಿ ಸೇವಾ ಟ್ರಸ್ಟ್‍

ಚಿಗಟೇರಿ, ಏ. 19 –  ಹರಪನಹಳ್ಳಿ ತಾಲ್ಲೂಕಿನ ಚಿಗಟೇರಿ ಗ್ರಾಮದ ಶ್ರೀ ಶಿವನಾರದಮುನಿ ರಥೋತ್ಸವವು ಇದೇ ದಿನಾಂಕ 28ರಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಜಾತ್ರೆಯನ್ನು ವಿಜೃಂ ಭಣೆಯಿದ ನಡೆಸುವ ಸಂಬಂಧ  ಪೂರ್ವಭಾವಿ ಸಭೆಯನ್ನು ಚಿಗ ಟೇರಿ ದೇವಸ್ಥಾನದ ಆವರಣದಲ್ಲಿ ಇಂದು ನಡೆಸಲಾಯಿತು. 

ದಿನಾಂಕ 28ರ ಭಾನುವಾರ ಸಂಜೆ 5 ರಿಂದ 6 ರವರೆಗೆ ಸಲ್ಲುವ ಮೂಲಾ ನಕ್ಷತ್ರದಲ್ಲಿ ರಥೋತ್ಸವವನ್ನು ಅದ್ಧೂರಿಯಾಗಿ ಜರುಗಿಸಲಾಗುವುದು ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಹೋಟೆಲ್ ಉದ್ಯಮಿಯೂ ಆಗಿರುವ ಶ್ರೀ ನಾರದಮುನಿ ಸ್ವಾಮಿ ಸೇವಾ ಟ್ರಸ್ಟ್‍ನ ಅಧ್ಯಕ್ಷ  ಶ್ರೀ ಅಣಬೇರು ರಾಜಣ್ಣ ತಿಳಿಸಿದರು.ದಿನಾಂಕ 29ರ ಸೋಮವಾರ ಸಂಜೆ 5.30ಕ್ಕೆ ಓಕಳಿ ಕಾರ್ಯಕ್ರಮ ಜರುಗಲಿದೆ ಎಂದು ಹೇಳಿದರು.

ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಜಿ.ವಿ.ಆರ್.ಪ್ರಸಾದ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ತಾಲ್ಲೂಕು ಆರೋಗ್ಯಾಧಿಕಾರಿಗಳು, ದೇವಸ್ಥಾನ ಸಮಿತಿ ಸದಸ್ಯ ವಡ್ಡಿನಹಳ್ಳಿ ಷಡಕಣ್ಣ, ಶಾಮನೂರು ಬಸಣ್ಣ, ಕಲಪನಹಳ್ಳಿ ಬಸವಲಿಂಗಪ್ಪ, ಹೊಳಲ್ಕೆರೆ ವೇದಮೂರ್ತಿ, ಹುಣಸಿಹಳ್ಳಿ ಜಾತಪ್ಪ, ಇಂಜಿನಿಯರ್ ಸುರೇಶ್, ಪಲ್ಲಾಗಟ್ಟೆ ನಾಗರಾಜ್, ಅಸಗೋಡು ಅಶೋಕ್, ವಡ್ಡಿನಹಳ್ಳಿ ಮರುಳಸಿದ್ದಪ್ಪ ಮತ್ತು ಸ್ಥಳೀಯ ಮುಖಂಡರಾದ ದ್ಯಾಮನಗೌಡ್ರು, ರಾಜಣ್ಣ, ಹಾಲಪ್ಪ, ಬಸವನಗೌಡ್ರು, ಜಯ್ಯನಗೌಡ್ರು ಮತ್ತು ದೇವಸ್ಥಾನದ ಅರ್ಚಕರು ಸೇರಿದಂತೆ ಅನೇಕ ಜನ ಭಕ್ತಾಧಿಗಳು, ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.

ಸದರಿ ದೇವಸ್ಥಾನದ ಎಲ್ಲಾ ಭಕ್ತಾದಿಗಳು ರಥೋತ್ಸವ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ರಥೋತ್ಸವವನ್ನು ಅದ್ಧೂರಿಯಾಗಿ ಯಶಸ್ವಿಗೊಳಿಸಬೇಕೆಂದು ಟ್ರಸ್ಟ್‍ನ ಅಧ್ಯಕ್ಷ  ಅಣಬೇರು ರಾಜಣ್ಣ ತಿಳಿಸಿದ್ದಾರೆ.

error: Content is protected !!