ಮಕ್ಕಳಲ್ಲಿ ಸುಂದರ ಬದುಕು ಕಟ್ಟಿಕೊಳ್ಳುವ ಗುಣ ಬೆಳೆಸಬೇಕು

ಮಕ್ಕಳಲ್ಲಿ ಸುಂದರ ಬದುಕು ಕಟ್ಟಿಕೊಳ್ಳುವ ಗುಣ ಬೆಳೆಸಬೇಕು

ಈಶ್ವರಮ್ಮ ಶಾಲೆಯ ಕಾರ್ಯಕ್ರಮದಲ್ಲಿ ಕರ್ನಾಟಕ ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳೀಕಟ್ಟೆ ಕಿವಿಮಾತು

ದಾವಣಗೆರೆ, ಜ.7 – ಚಿಕ್ಕ ವಯಸ್ಸಿನಲ್ಲಿಯೇ ಮಗುವಿಗೆ ಸುಂದರ ಬದುಕು ಕಟ್ಟಿಕೊಳ್ಳುವ ಗುಣಗಳನ್ನು ಪೋಷಕರು ಮತ್ತು ಶಿಕ್ಷಕರು ಮಕ್ಕಳಲ್ಲಿ ತುಂಬಬೇಕೆಂದು ಶಿಕ್ಷಣ ತಜ್ಞರು, ಕರ್ನಾಟಕ ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳೀಕಟ್ಟೆ ಕಿವಿಮಾತು ಹೇಳಿದರು.

ನಗರದ ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ  ಶಾಲಾ ವಾರ್ಷಿಕೋತ್ಸವ ಸಂಭ್ರಮದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಲ್ಲಿ ಸಂಸ್ಕೃತಿ, ಉತ್ತಮ ಸಂಸ್ಕಾರದ ಜೊತೆಗೆ ಶಿಸ್ತು, ಸಂಯಮ, ನ್ಯಾಯ ಪರವಾದ ಚಿಂತನೆಗಳು, ಮೌಲ್ಯಯುತವಾದ ಬದುಕು ಕಟ್ಟಿಕೊಳ್ಳುವ ಮಾರ್ಗದರ್ಶನ ನೀಡುತ್ತಿರುವ ಈಶ್ವರಮ್ಮ ಶಾಲೆಯ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸನ್ಮಾನ ಸ್ವೀಕರಿಸಿ ಶಾಲೆಯ 2008ರ ಹಿರಿಯ ವಿದ್ಯಾರ್ಥಿ ಡಾ.ಜಿ.ಕೆ.ಮಧುಕರ್ ಮಾತನಾಡಿ,  ಯಾವುದೇ ವಿಷಯಗಳು ಕಲಿಯಲು ಕಷ್ಟವಲ್ಲ. ಮನಸ್ಸು ಮಾಡಿ ಗುರಿಯಿಟ್ಟು ಓದಿದರೆ ಎಲ್ಲಾ ವಿಷಯಗಳು ಸುಲಭವಾಗುತ್ತವೆ ಎಂದು ಪ್ರತಿಪಾದಿಸಿದರು.

ಇದೇ ಸಂದರ್ಭದಲ್ಲಿ 2022-23ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಜೆ.ಪಿ.ಭೂಮಿಕಗೆ ಡಾ.ಸಿ.ನಾಗಮ್ಮ ಕೇಶವಮೂರ್ತಿ ಸ್ವರ್ಣ ಪದಕ, ಎ.ಎಚ್.ಪ್ರಿಯಾಗೆ ಕಾಸಲ್ ಅನಂತ ಸ್ಮರಣಾರ್ಥ ಸ್ವರ್ಣ ಪದಕ, ಎಸ್.ಎಸ್.ಹರ್ಷಿತಾಗೆ ಎ.ಬಸವಂತಾಚಾರ್ ಸ್ಮರಣಾರ್ಥ ರಜತ ಪದಕ, ಅಮೂಲ್ಯ ಎಂ.ಕಂಠಿಗೆ ಬಿ.ಆರ್.ಶಾಂತಕುಮಾರಿ ಮತ್ತು ಬಿ.ಆರ್.ರಾಧಾಮಣಿ ಸ್ಮರಣಾರ್ಥ ರಜತ ಪದಕ, ಅನನ್ಯ ಜಿ.ಶೇಟ್ ಗೆ ಎನ್.ಶಂಭುಲಿಂಗಪ್ಪ ಸ್ಮರಣಾರ್ಥ ರಜತ ಪದಕ, ಸಿ.ಎಚ್.ತರುಣ್ ಗೆ ಕಾಸಲ್ ಪ್ರಭಾಮಣಿ ಸ್ಮರಣಾರ್ಥ ರಜತ ಪದಕ, ಎ.ಎಸ್.ಶಿವಾನಿಗೆ ಗೋಪಾಲಯ್ಯ ಶೆಟ್ಟಿ ಸ್ಮರಣಾರ್ಥ ರಜತ ಪದಕ, ಎಂ.ಪ್ರಜ್ವಲ್‌ಗೆ ಡಾ.ಕೆ.ಆರ್.ಕೆ.ಶೆಟ್ಟಿ ಸ್ಮರಣಾರ್ಥ ರಜತ ಪದಕ, ಎಚ್.ಆರ್.ಶ್ರೇಯಾಗೆ ಸದಾನಂದ ಕುರ್ಡೇಕರ್ ಸ್ಮರಣಾರ್ಥ ರಜತ ಪದಕ, ಎಚ್.ಎಸ್.ಯಶಸ್ವಿನಿಗೆ ಕೆ.ಆರ್.ಮಂಜುನಾಥ್ ಸ್ಮರಣಾರ್ಥ ರಜತ ಪದಕ,  ಎಚ್‌. ಎಂ.ಪ್ರತೀಕ್ಷಾಗೆ ಎಂ.ವೀರಭದ್ರ ರಾವ್ ಸ್ಮರಣಾರ್ಥ ರಜತ ಪದಕ ವಿತರಿಸಲಾಯಿತು.  

ಈಶ್ವರಮ್ಮ ಶಾಲಾಡಳಿತ ಮಂಡಳಿ ಅಧ್ಯಕ್ಷೆ ಕೆ.ಆರ್.ಸುಜಾತಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಈಶ್ವರಮ್ಮ ಟ್ರಸ್ಟ್‌ ಅಧ್ಯಕ್ಷೆ ಉಷಾ ರಂಗನಾಥ್, ಈಶ್ವರಮ್ಮ ಶಾಲಾಡಳಿತ ಮಂಡಳಿ ಸದಸ್ಯ ಕಾಸಲ್ ರತ್ನಮ್ಮ, ಕೆ.ವಿ.ಸುಜಾತ,  ಪ್ರಾಂಶುಪಾಲ ಕೆ..ಎಸ್.ಪ್ರಭುಕುಮಾರ್, ಉಪ ಪ್ರಂಶುಪಾಲರಾದ ಶಶಿರೇಖಾ, ದೈಹಿಕ ಶಿಕ್ಷಕರಾದ ಕೆ.ರವಿ, ನಾಗರಾಜ್ ಉತ್ತಂಗಿ, ಎಂ.ಪ್ರಸನ್ನ, ಶಿಕ್ಷಕರಾದ ಶ್ರೀದೇವಿ, ರಾಜೇಶ್ವರಿ, ಸಬೀನಾ ಬಾನು ಸೇರಿದಂತೆ ಇನ್ನಿತರರಿದ್ದರು. 

error: Content is protected !!