ಉಜ್ಜಿನಿ ಮರುಳಸಿದ್ದೇಶ್ವರ ರಥೋತ್ಸವ

ಉಜ್ಜಿನಿ ಮರುಳಸಿದ್ದೇಶ್ವರ ರಥೋತ್ಸವ

ಕೊಟ್ಟೂರು, ಏ. 25 – ಪಂಚಪೀಠಗಳಲ್ಲಿ ಒಂದಾಗಿರುವ ನಾಡಿನ ಪ್ರಸಿದ್ದ ಉಜ್ಜಿನಿ ಜಗದ್ಗುರು ಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವ ಮಂಗಳವಾರ ಸಂಜೆ ಅದ್ಧೂರಿಯಾಗಿ ನಡೆಯಿತು.

ಶ್ರೀ ನಾಡಿನ ಮೂಲೆ ಮೂಲೆಗಳಿಂದ ಬಂದಿದ್ದ ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿ ಧನ್ಯತೆ ಪಡೆದರು.

ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ರಥೋತ್ಸವದ ಕಾರ್ಯಕ್ರಮದಲ್ಲಿ ಮೊದಲು ಸ್ವಾಮಿಯ ಉತ್ಸವ ಮೂರ್ತಿಯನ್ನು ಕರೆತಂದು ರಥಕ್ಕೆ ಪ್ರದಕ್ಷಿಣೆ ಹಾಕಿಸಿ ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.

ಸಮಾಳ, ನಂದಿಕೋಲು ಸೇರಿದಂತೆ, ವಿವಿಧ ವಾದ್ಯಗಳೊಂದಿಗೆ ನೆರೆದಿದ್ದ ಲಕ್ಷಾಂತರ ಭಕ್ತರು ಜಯಘೋಷಣೆ ಕೂಗುತ್ತಾ ರಥವನ್ನು ಮುಂದೆ ಎಳೆದುಕೊಂಡು ಹೋದರು. ನಂತರ ಪಾದಗಟ್ಟೆ ಮುಟ್ಟಿ ಶ್ರೀ ಸ್ವಾಮಿಗೆ ಪೂಜೆ ಸಲ್ಲಿಸಿ ಮತ್ತೆ ಮರಳಿ ಬಂದು ನೆಲೆ ನಿಲ್ಲಿಸಲಾಯಿತು.

ಇಂದು ತೈಲಾಭಿಷೇಕ : ನಾಳೆ ಬುಧವಾರ ಶ್ರೀ ಸ್ವಾಮಿಯ ಶಿಖರದ ತೈಲಾಭಿಷೇಕ ನಡೆಯಲಿದ್ದು, ನಾಡಿದ್ದು ಗುರುವಾರ ಬ್ರಾಹ್ಮೀ ಮುಹೂರ್ತದಲ್ಲಿ ಮಹೇಶ್ವರ ಶಿವದೀಕ್ಷಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

error: Content is protected !!