ಹರಿಹರ ತಾಲ್ಲೂಕಿನ ಜಿ.ಬೇವಿನಹಳ್ಳಿ ಗ್ರಾಮದ ಹಿರಿಯರು, ನೊಳಂಬ ವೀರಶೈವ ಸಮಾಜದ ಮುಖಂಡರೂ, ವಕೀಲರೂ, ಹರಿಹರ ತಾ. ಪಂ. ಮಾಜಿ ಸದಸ್ಯರೂ ಆದ ಶ್ರೀ ಪಿ. ಲಿಂಗನಗೌಡ್ರು ಅವರು ದಿನಾಂಕ 04.03.2025ರ ಮಂಗಳವಾರ ರಾತ್ರಿ 10 ಗಂಟೆಗೆ ದಾವಣಗೆರೆಯ ಬಾಪೂಜಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದಾಗಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 91 ವರ್ಷ ವಯಸ್ಸಾಗಿತ್ತು. ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು, ಅಳಿಯಂದಿರು, ಸೊಸೆ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 05.03.2025ರ ಬುಧವಾರ ಮಧ್ಯಾಹ್ನ 3 ಗಂಟೆಗೆ ಜಿ. ಬೇವಿನಹಳ್ಳಿ ಗ್ರಾಮದ ಮೃತರ ಸ್ವಂತ ಜಮೀನಿನಲ್ಲಿ ನೆರವೇರಿಸಲಾಗುವುದು. ವಿ. ಸೂ. : ದಾವಣಗೆರೆ ನಗರದ ಎಸ್.ಎಸ್. ಬಡಾವಣೆಯ `ಎ’ ಬ್ಲಾಕ್, ಒಳಾಂಗಣ ಕ್ರೀಡಾಂಗಣದ ಹತ್ತಿರ, ಕುಂದುವಾಡ ಕೆರೆ ರಸ್ತೆಯಲ್ಲಿರುವ `ಅನುದೀಪ’ ನಿವಾಸದಲ್ಲಿ ಬುಧವಾರ ಬೆಳಿಗ್ಗೆ 10 ಗಂಟೆಯವರೆಗೆ ಮೃತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ನಂತರ ಹರಿಹರ ತಾಲ್ಲೂಕು ಜಿ. ಬೇವಿನಹಳ್ಳಿ ಗ್ರಾಮಕ್ಕೆ ತರಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಪಿ. ಲಿಂಗನಗೌಡ್ರು
