ದಾವಣಗೆರೆ ಎಂ.ಜಿ. ರಸ್ತೆಯಲ್ಲಿರುವ ತೆಲಗಿ ವೀರಪ್ಪ ಅಂಡ್ ಸನ್ಸ್ ಮಾಲೀಕರಾದ ಶ್ರೀ ತೆಲಗಿ ಮಂಜುನಾಥ್ ಅವರು ದಿನಾಂಕ 01.03.2025ರ ಶನಿವಾರ ತಡರಾತ್ರಿ 2.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 82 ವರ್ಷ ವಯಸ್ಸಾಗಿತ್ತು. ಓರ್ವ ಪುತ್ರ, ಓರ್ವ ಪುತ್ರಿ, ಸೊಸೆ, ಅಳಿಯ, ಮೊಮ್ಮಕ್ಕಳನ್ನು ಅವರು ಅಗಲಿದ್ದಾರೆ. ದಿವಂಗತರ ಪಾರ್ಥಿವ ಶರೀರವನ್ನು ಹಗೇದಿಬ್ಬ ವೃತ್ತದ ಬಳಿಯ ಕುಂಬಾರ ಪೇಟೆಯಲ್ಲಿರುವ ಅವರ ನಿವಾಸದಲ್ಲಿಡಲಾಗಿದ್ದು, ದಿನಾಂಕ 02.03.2025ರ ಭಾನುವಾರ ಮಧ್ಯಾಹ್ನ 2.30ಕ್ಕೆ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ತೆಲಗಿ ಮಂಜುನಾಥ್
