ಡಾ. ಟಿ.ಹೆಚ್. ನರೇಂದ್ರ ನಾಯಕ್ ಸೇವಾ ನಿವೃತ್ತಿ

ಡಾ. ಟಿ.ಹೆಚ್. ನರೇಂದ್ರ ನಾಯಕ್ ಸೇವಾ ನಿವೃತ್ತಿ

ದಾವಣಗೆರೆ, ಮೇ 19- ಶಿವಮೊಗ್ಗದ ಕಮಲಾ ನೆಹರೂ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕ ಡಾ. ಟಿ.ಹೆಚ್. ನರೇಂದ್ರ ನಾಯಕ್ ಅವರು ಸೇವೆಯಿಂದ ನಿವೃತ್ತರಾಗಿದ್ದಾರೆ.

ಕಾಲೇಜಿನ ಸಭಾಂಗಣದಲ್ಲಿ ನರೇಂದ್ರ ನಾಯಕ್ ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.

ನರೇಂದ್ರ ನಾಯಕ್ ಅವರ ಕುರಿತು ಗೌರವ ನುಡಿಗಳನ್ನಾಡಿದ ಪ್ರಥಮ ಬಿಎ ವಿದ್ಯಾರ್ಥಿನಿ ಕು. ಈಶ್ವರಿ, ನರೇಂದ್ರ ನಾಯಕ್ ಅವರು ವಿದ್ಯಾರ್ಥಿಗಳ ಮೇಲಿಟ್ಟಿರುವ ಪ್ರೀತಿ, ವಿಶ್ವಾಸ, ಕಾಳಜಿ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಶ್ಲ್ಯಾಘಿಸಿದರು. ಅವರ ವೃತ್ತಿ ಜೀವನದಲ್ಲಿ ವಿದ್ಯಾ ತೋಟವನ್ನು ಬೆಳೆಸಿದ್ದಾರೆ. ಪ್ರೀತಿ, ಜ್ಞಾನ, ಮಾರ್ಗದರ್ಶನವನ್ನು ನಮ್ಮಂತಹ ವಿದ್ಯಾರ್ಥಿಗಳಿಗೆ ಧಾರೆ ಎರೆದು ಹೆಮ್ಮರವಾಗಿ ಬೆಳೆಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ನರೇಂದ್ರ ನಾಯಕ್ ಅವರು ರಚಿಸಿ, ಸುವ್ವಿ ಪ್ರಕಾಶನ ಹೊರ ತಂದಿರುವ `ಅರಿವು -60′  ಕೃತಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಡಾ. ನರೇಂದ್ರ ನಾಯಕ್ ದಂಪತಿಯನ್ನು ಸಮಾರಂಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.

ಡಾ. ನರೇಂದ್ರ ನಾಯಕ್ ಅವರು ದಾವಣಗೆರೆ ಎಆರ್‌ಜಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಸಮಾಜಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.

ಪ್ರಾಚಾರ್ಯರಾದ ಡಾ. ಹೆಚ್.ಎಸ್. ನಾಗಭೂಷಣ, ಡಾ. ಜೆ.ಎಲ್. ಪದ್ಮನಾಭ್, ಪ್ರೊ. ಸತ್ಯನಾರಾಯಣ, ಪ್ರೊ. ಕಿರಣ್ ದೇಸಾಯಿ, ಪ್ರೊ. ಓಂಕಾರಪ್ಪ, ಡಾ. ಆರ್.ಎಂ. ಜಗದೀಶ್, ಪ್ರೊ. ಶೇಖರ್, ಡಾ. ಶಂಕರ್, ಡಾ. ಕೆ.ಟಿ. ಪಾರ್ವತಮ್ಮ ಮತ್ತಿತರರು ಬೀಳ್ಕೊಡುಗೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.

error: Content is protected !!