ಡಾ. ಅತ್ತಿಗುಟ್ಟಿ ರಾಮಶೆಟ್ಟಿ ಪ್ರಭಾಕರ್ ಅವರಿಗೆ ವಿದೇಶದ ಅತ್ಯುನ್ನತ ಗೌರವ

ಡಾ. ಅತ್ತಿಗುಟ್ಟಿ ರಾಮಶೆಟ್ಟಿ ಪ್ರಭಾಕರ್ ಅವರಿಗೆ ವಿದೇಶದ ಅತ್ಯುನ್ನತ ಗೌರವ

ದಾವಣಗೆರೆ, ಮೇ 15- ನಗರದ ಬಾಪೂಜಿ ದಂತ ವೈದ್ಯಕೀಯ ಮತ್ತು ಆಸ್ಪತ್ರೆಯ ನಿವೃತ್ತ ಪ್ರಾಂಶುಪಾಲರೂ, ಪ್ರಾಧ್ಯಾಪಕರೂ, ಮಕ್ಕಳ ದಂತ ವೈದ್ಯಕೀಯ ವಿಭಾಗದ ಮುಖ್ಯಸ್ಥರೂ ಆದ ಡಾ. ಅತ್ತಿಗುಪ್ಪೆ ರಾಮಶೆಟ್ಟಿ ಪ್ರಭಾಕರ್‌ ಅವರು ಯು.ಕೆ.ಯ ಸ್ಕಾಟ್ಲೆಂಡ್‌ನ ಎಡ್ವಿನ್‌ಬರ್ಗ್‌ ರಾಯಲ್‌ ಕಾಲೇಜ್‌ ಆಫ್‌ ಸರ್ಜನ್ಸ್‌ ದಂತ ವೈದ್ಯಕೀಯ ವಿಭಾಗದ ಡೀನ್‌ ಡಾ. ಪಿಲಿಪ್‌ ಟೇಲರ್‌ ಅವರಿಂದ ತಮ್ಮ ಎಫ್‌ಡಿಎಸ್‌ಆರ್‌ಸಿಎಸ್‌ ಫೆಲೋಶಿಪ್‌ ಮಾನ್ಯತೆಯನ್ನು ಸ್ವೀಕರಿಸಿದರು.  ಪ್ರಭಾಕರ್ ಅವರು 2021 ರಲ್ಲಿ ಅವರು ಸ್ಕಾಟ್ಲೆಂಡ್‌ ಗ್ಲ್ಯಾಸ್ಗೋದ ರಾಯಲ್‌ ಕಾಲೇಜ್‌ ಆಫ್‌ ಫಿಸಿಷಿಯನ್ಸ್‌ ಅಂಡ್‌ ಸರ್ಜನ್‌ನಿಂದ ಫೆಲೋಶಿಪ್‌ ಪಡೆದಿದ್ದರು.

error: Content is protected !!