ಚಿತ್ರದುರ್ಗ : ಶಿವರಾತ್ರಿ ಮಹೋತ್ಸವಕ್ಕೆ ಚಾಲನೆ

ಚಿತ್ರದುರ್ಗ : ಶಿವರಾತ್ರಿ ಮಹೋತ್ಸವಕ್ಕೆ ಚಾಲನೆ

ಚಿತ್ರದುರ್ಗ, ಫೆ. 16- ಇಲ್ಲಿನ ಶ್ರೀ ಸದ್ಗುರು ಕಬೀರಾನಂದ ಸ್ವಾಮಿ ಆಶ್ರಮದಲ್ಲಿ ಐದು ದಿನಗಳ ಕಾಲ ಜರುಗುವ 93ನೇ ಮಹಾಶಿವರಾತ್ರಿ ಮಹೋತ್ಸವವನ್ನು  ಮಂಗಳವಾರ ಸಂಜೆ ಆದಿಚುಂಚನಗಿರಿ ಮಠದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ದೀಪ ಬೆಳಗಿಸಿ, ಉದ್ಘಾಟಿಸಿದರು.

ಬೀದರ್‌ನ ಚಿದಂಬರ ಆಶ್ರಮದ ಶ್ರೀ ಡಾ. ಶಿವಕುಮಾರ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಕಾಗಿನೆಲೆ ಕನಕ ಗುರುಪೀಠದ ಕೆ.ಆರ್. ನಗರ ಶಾಖಾಮಠದ ಶ್ರೀ ಶಿವಾನಂದ ಪುರಿ ಸ್ವಾಮೀಜಿ, ಆದಿಚುಂಚನಗಿರಿ ಮಠದ ಕುಂಬಳಗೋಡು ಶಾಖಾ ಮಠದ ಶ್ರೀ ಡಾ. ಪ್ರಕಾಶನಾಥ ಸ್ವಾಮೀಜಿ, ಉತ್ಸವ ಸಮಿತಿ ಅಧ್ಯಕ್ಷ ಜಿ.ಎಸ್. ಅನಿತ್ ಕುಮಾರ್, ಓಂಕಾರಮೂರ್ತಿ, ದಾಸೋಹಿ ದ್ಯಾಮೇಗೌಡ್ರು ಮತ್ತಿತರರು ಈ ವೇಳೆ ಹಾಜರಿದ್ದರು.

ಆಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಮಹೋತ್ಸವದ ನೇತೃತ್ವ ವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ನೂತನ ಗುರುಸದನ ಹಾಗೂ ಸಭಾ ಮಂಟಪವನ್ನು ಉದ್ಘಾಟಿಸಲಾಯಿತು.

ಈ ವೇಳೆ ಆದಿಚುಂಚನಗಿರಿ ಗೋಶಾಲೆಗೆ ಹುಲ್ಲು ದಾನಿಗಳಾದ ನಿಟ್ಟೂರಿನ ಕೆ. ಸಂಜೀವಮೂರ್ತಿ, ಅಬ್ಬಾರಾವ್, ಎಸ್.ಜಿ. ಪ್ರಭುದೇವ್, ಜಿಗಳಿಯ ಜಿ. ಆನಂದಪ್ಪ, ಪತ್ರಕರ್ತ ಪ್ರಕಾಶ್, ನಂದಿತಾವರೆಯ ಬಿ.ಪಿ. ಸಂತೋಷ್ ಅವರನ್ನು ಶ್ರೀಗಳು ಸನ್ಮಾನಿಸಿ, ಗೌರವಿಸಿದರು.

error: Content is protected !!