Category: ಸುದ್ದಿ ವೈವಿಧ್ಯ

Home ಸುದ್ದಿ ವೈವಿಧ್ಯ

ರಾಗಿ ಖರೀದಿ ಕೇಂದ್ರ ತೆರೆಯಲು ರೈತ ಸಂಘ ಪ್ರತಿಭಟನೆ

ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಸಮಿತಿ ವತಿಯಿಂದ ರಾಗಿ ಖರೀದಿ ಕೇಂದ್ರ ತೆರೆಯಲು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾ ಯಿಸಿ ನಗರದ ಗಾಂಧೀ ವೃತ್ತದಿಂದ ಜಿಲ್ಲಾಧಿ ಕಾರಿ ಕಚೇರಿವರೆಗೆ ಕಾಲ್ನಡಿಗೆ ಮುಖಾಂತರ ಬಹಿರಂಗ ಪ್ರತಿಭಟನೆ ನಡೆಸಿ, ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ರಾಣೇಬೆನ್ನೂರು : ಮಾಗೋಡಿನಲ್ಲಿ ದೊಡ್ಡ ಕೆರೆಯ ಹಸ್ತಾಂತರ

ರಾಣೇಬೆನ್ನೂರು : ತಾಲ್ಲೂಕಿನ ಮಾಗೋಡ ಗ್ರಾಮದ ದೊಡ್ಡಕೆರೆಯ ಪುನಃಶ್ಚೇತನ ಕಾಮಗಾರಿಗೆ ಚಾಲನೆ ಹಾಗೂ ಕೆರೆಯ ಹಸ್ತಾಂತರ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಹೆದ್ದಾರಿ ಅಗಲೀಕರಣಕ್ಕೆ ಶಾಸಕ ರಾಮಪ್ಪ ಚಾಲನೆ

ಮಲೇಬೆನ್ನೂರು : ಕೊಮಾರನಹಳ್ಳಿ ಸಮೀಪ ಕಣಿವೆ ಪ್ರದೇಶದಲ್ಲಿ ರಾಜ್ಯ ಹೆದ್ದಾರಿಯ ತಿರುವುಗಳಲ್ಲಿ (ಎಸ್‌.ಹೆಚ್‌ ರಸ್ತೆ) ಎರಡು ಕಡೆ 1 ಮೀಟರ್‌ ರಸ್ತೆ ಅಗಲೀಕರಣ ಮಾಡುವ ಕಾಮಗಾರಿಗೆ ಶಾಸಕ ಎಸ್‌. ರಾಮಪ್ಪ  ಮಂಗಳವಾರ  ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಅಸಹಾಯಕರಿಗೆ `ವಾತ್ಸಲ್ಯ’ ಕಿಟ್‌

ಮಲೇಬೆನ್ನೂರು : ಜಿಗಳಿ ಗ್ರಾಮದ ಮೂವರು ಅಸಹಾಯಕ ಮಹಿಳೆೆಯರಿಗೆ ಸೋಮವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ `ವಾತ್ಸಲ್ಯ’ ಕಿಟ್‌ಗಳನ್ನು ಯೋಜನೆಯ ಜಿಲ್ಲಾ ನಿರ್ದೇಶಕ ವಿ.ವಿಜಯಕುಮಾರ್‌ ನಾಗನಾಳ್‌ ವಿತರಿಸಿದರು. 

ಪೋಷಕರು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಹರಿಹರ : ದೇವರಬೆಳಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗುರುವಂದನಾ ಕಾರ್ಯಕ್ರಮ ನಡೆಸಲಾಯಿತು.  ಸಾಮೂಹಿಕವಾಗಿ ಶಾರದಾ ಪೂಜೆ ಕಾರ್ಯಕ್ರಮ ಹಾಗೂ ಇದೇ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ, ಬಡ್ತಿ ಹಾಗೂ ವರ್ಗಾವಣೆ ಹೊಂದಿರುವ ಶಿಕ್ಷಕರುಗಳನ್ನು ಗೌರವಿಸಲಾಯಿತು.

ಬಿಜೆಪಿ ಯುವ ಮೋರ್ಚಾದಿಂದ ಬೈಕ್ ರ್‍ಯಾಲಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಇದೇ ದಿನಾಂಕ 25 ರಂದು ನಗರಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ವತಿಯಿಂದ ಸೋಮವಾರ ನಗರದ ವೆಂಕಟೇಶ್ವರ ವೃತ್ತದಿಂದ ಸಮಾವೇಶ ನಡೆಯಲಿರುವ ಜಿಎಂಐಟಿ ಕಾಲೇಜಿನ ಬಳಿ ಇರುವ ಮೈದಾನದವರೆಗೆ ಬೈಕ್ ರ್‍ಯಾಲಿ ಹಮ್ಮಿಕೊಳ್ಳಲಾಗಿತ್ತು.

ಪುಟ್ಟರಾಜರ ಜನ್ಮದಿನವನ್ನು `ಕಲಾ ವಿಕಾಸ ದಿನ’ವನ್ನಾಗಿಸಿ

ಮುಂಡರಗಿ : ಪಂಡಿತ  ಪುಟ್ಟ ರಾಜರ ಜನ್ಮ ದಿನ ಮಾರ್ಚ್ 3ರಂದು, `ಕಲಾ ವಿಕಾಸ’ ದಿನವನ್ನಾಗಿ   ಸರ್ಕಾರ  ಆಚರಿಸಬೇಕು ಎಂದು ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ  ವೇ. ಚನ್ನವೀರಸ್ವಾಮಿ ಹಿರೇಮಠ (ಕಡಣಿ)  ಒತ್ತಾಯಿಸಿದರು. 

ಹಳೇ ಕುಂದುವಾಡ : ಕಾಮಗಾರಿಗಳ ಉದ್ಘಾಟನೆ

ಹಳೇ ಕುಂದುವಾಡದಲ್ಲಿ ಸ್ಮಾರ್ಟ್ ಸಿಟಿ, ಶಾಸಕರ ಅನುದಾನದಡಿ ನಿರ್ಮಾಣವಾಗಿರುವ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಪಿಯು ಕಾಲೇಜ್ ನ ನೂತನ ಕಟ್ಟಡಗಳು, ಕಾಂಪೌಂಡ್, ಸಿಸಿ ರಸ್ತೆಗಳನ್ನು ಶಾಸಕ ಎಸ್.ಎ. ರವೀಂದ್ರನಾಥ್ ಅವರು ಇಂದು ಉದ್ಘಾಟಿಸಿದರು.

ಕೆರೆ, ಕಟ್ಟೆಗಳಿಂದ ಹಳ್ಳಿಗಳಲ್ಲಿ ಬಾಂಧವ್ಯ ಬೆಸುಗೆ

ಮಲೇಬೆನ್ನೂರು : ಹಳ್ಳಿಗಳಲ್ಲಿರುವ ಕೆರೆ, ಕಟ್ಟೆಗಳು ಬಾಂಧವ್ಯದ ಜೊತೆಗೆ ಸಾಮರಸ್ಯ ಬೆಸೆಯುತ್ತವೆ ಎಂದು ಹರಿಹರದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಸ್ವಾಮಿ ಶಾರದೇಶಾನಂದಜೀ ಮಹಾರಾಜ್‌ ಹೇಳಿದರು. 

ಬೆಲೆ ಏರಿಕೆ ಖಂಡಿಸಿ ಎಸ್‌ಓಜಿ ಕಾಲೋನಿ ನಿವಾಸಿಗಳ ಪ್ರತಿಭಟನೆ

ನಗರದ ಎಸ್.ಓ.ಜಿ ಕಾಲೋನಿಯ ನಿವಾಸಿಗಳು ನಾಗರಿಕ ಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಸೋಮವಾರ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ನಂತರ ಮಹಾನಗರ ಪಾಲಿಕೆ ಹಾಗೂ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.