ಮೇಷ (ಅಶ್ವಿನಿ, ಭರಣಿ, ಕೃತ್ತಿಕಾ)
(ಚೂ.ಚೇ.ಚೋ.ಲ.ಲಿ.ಉ.ಲೇ.ಲೊ.ಅ.)
ಯಾವುದಕ್ಕೋ ವಿನಿಯೋಗವಾಗಬೇಕಾಗಿದ್ದ ಹಣವು ಮತ್ತಿನ್ಯಾವುದಕ್ಕೋ ವಿನಿಯೋಗವಾಗುವುದರಿಂದ ಹಣಕಾಸಿನ ಮುಗ್ಗಟ್ಟು ಹಾಗೆಯೇ ಮುಂದುವರೆಯಲಿದೆ. ಸರ್ಕಾರಿ ಅಧಿಕಾರಿಗಳಿಗೆ ವಿಶೇಷ ಸವಲತ್ತುಗಳು ಸಿಗಲಿವೆ. ವ್ಯವಹಾರದಲ್ಲಿ ಆತಂಕ ತಪ್ಪಿದ್ದಲ್ಲ. ಪೂರ್ವಯೋಜಿತ ಆಸ್ತಿ ಖರೀದಿ ವಿಚಾರ ಮುಂದೆ ಹೋಗಲಿದೆ. ವಿದ್ಯಾರ್ಥಿಗಳಿಗೆ ಉನ್ನತಾಧ್ಯಯನಕ್ಕೆ ಸಾಮಾಜಿಕ ನೆರವು ದೊರೆಯಲಿದೆ. ವಿದ್ಯುದುಪಕರಣಗಳ ತಯಾರಕರಿಗೆ ಹಾಗೂ ಮಾರಾಟಗಾರರಿಗೆ ವ್ಯಾಪಾರದಲ್ಲಿ ತುಸು ಹೆಚ್ಚೇ ಎನ್ನಬಹುದಾದ ಹಿನ್ನಡೆಯಾಗಲಿದೆ. ಗೋ ಸೇವೆ ಮಾಡಿ. ಭಾನು-ಮಂಗಳ-ಬುಧ-ಶುಭ ದಿನಗಳು.
ವೃಷಭ (ಕೃತ್ತಿಕಾ, 2,3,4, ರೋಹಿಣಿ, ಮೃಗ 1,2)
(ಇ.ಉ.ಎ.ಒ.ವ.ವಿ.ವು.ವೆ.ವೋ)
ಹಣದ ಹರಿವನ್ನು ಹೆಚ್ಚಿಸಲು ನೀವು ಎಷ್ಟೇ ಪ್ರಯತ್ನಿಸಿದರೂ ಅದು ಮಂದಗತಿಯಲ್ಲೇ ಮುಂದುವರೆಯಲಿದೆ. ಯುವಜನರು ತಮ್ಮ ಚುರುಕುತನದ ಚಟುವಟಿಕೆಯಿಂದಾಗಿ ಎಲ್ಲರ ಗಮನ ಸೆಳೆಯುವರು. ದೈಹಿಕ ಉಷ್ಣತೆ ಹೆಚ್ಚಾಗಿ, ಬಾಯಿ ಹುಣ್ಣು ಮೊದಲಾದ ಆರೋಗ್ಯ ಸಮಸ್ಯೆ ಕಾಡಬಹುದು. ಕೃಷಿ ಭೂಮಿ ಕೊಳ್ಳುವ ವಿಚಾರದಲ್ಲಿ ಯಶಸ್ವಿಯಾಗುವಿರಿ. ಹೊಸ ಪಾಲುದಾರರನ್ನು ವ್ಯವಹಾರದಲ್ಲಿ ಸೇರಿಸಿಕೊಳ್ಳುವ ಮೊದಲು ಅವರ ಪೂರ್ವಾ ಪರ ಪರಿಚಯ ಚೆನ್ನಾಗಿರುವುದು ಮೇಲು. ಪುಸ್ತಕ ಖರೀದಿ ಜೋರಾಗಿಯೇ ನಡೆಯಲಿದೆ. ಗುರು ದರ್ಶನ ಪಡೆಯುವಿರಿ. ಮಂಗಳ-ಶುಕ್ರ-ಶನಿ-ಶುಭ ದಿನಗಳು.
ಮಿಥುನ (3,4, ಆರಿದ್ರಾ, ಪುನರ್ವಸು 1,2,3
(ಕ.ಕಿ.ಕು.ಘ, ಔ, ಚ.ಕೆ.ಕೋ.ಹ.)
ಬದಲಾದ ನಿಮ್ಮ ನಡಾವಳಿ ಹಿರಿಯರ ಮೆಚ್ಚುಗೆ ಪಡೆಯಲಿದೆ. ಭಿನ್ನಾಭಿಪ್ರಾಯ ಮೂಡಿದ್ದ ನವದಂಪತಿಗಳಲ್ಲಿ ಸಾಮರಸ್ಯ ಮೂಡಲಿದೆ, ಆದಾಯದ ಹರಿವು ಅವಶ್ಯಕತೆಗೆ ತಕ್ಕಂತೆ ಇರುವುದರಿಂದ ದೈನಂದಿನ ಜೀವನಕ್ಕೇನೂ ಕೊರತೆಯಿಲ್ಲ, ವಿದೇಶದಲ್ಲಿರುವವರು ಆಸ್ತಿ ಖರೀದಿ ವಿಚಾರದಲ್ಲಿ ಮಧ್ಯವರ್ತಿಗಳಿಂದ ಮೋಸ ಹೋಗುವ ಸಂಭವವಿದೆ, ಸಾಕಷ್ಟು ಎಚ್ಚರದಿಂದಿರುವುದು ಮೇಲು, ಮಗಳ ಮದುವೆ ಮಾತುಕತೆಗೆ ಮತ್ತೆ ಮರು ಚಾಲನೆ ದೊರೆಯಲಿದೆ. ಸಂಗಾತಿಯಿಂದ ದೊರೆಯಬಹುದಾದ ನೆರವನ್ನು ನಿಸ್ಸಂಕೋಚವಾಗಿ ತೆಗೆದುಕೊಳ್ಳಿ. ಸೋಮ-ಬುಧ-ಗುರು-ಶುಭ ದಿನಗಳು.
ಕರ್ಕಾಟಕ (ಪುನ 4, ಪುಷ್ಯ, ಆಶ್ಲೇಷ)
(ಹಿ.ಹು.ಹೆ.ಹೂ.ಡ.ಡಿ.ಡು.ಡೆ.ಡೋ)
ಈ ಹಿಂದೆ ಬಹಳ ಉತ್ಸಾಹದಿಂದ ಆರಂಭಿಸಿದ್ದ ಉದ್ಯಮದಲ್ಲಿ ಆಲಸ್ಯತನ ತೋರುವಿರಿ, ಇದರಿಂದಾಗಬಹುದಾದ ನಷ್ಟ ನಿಮಗೇ ಎಂಬುದು ನೆನಪಿರಲಿ. ಹಣಕಾಸಿನ ಸ್ಥಿತಿಗತಿ ನಿಮ್ಮ ಅವಶ್ಯಕತೆಯನ್ನು ಪೂರೈಸಲಿದೆ. ಕೈಗಾರಿಕೋದ್ಯಮಿಗಳಿಗೆ ಕಾರ್ಮಿಕರ ಸಮಸ್ಯೆ ಎದುರಾಗಲಿದೆ. ಆಸ್ತಿ ವಿಭಾಗದ ವಿಚಾರದಲ್ಲಿ ಮನೆತನದ ಹಿರಿಯರಿಂದ ಹೆಚ್ಚಿನ ನೆರವು ದೊರೆಯಲಿದೆ. ಮಕ್ಕಳ ಏಳಿಗೆ ಬಗ್ಗೆ ಹೆಚ್ಚಿನ ಕಾಳಜಿ ತೋರುವಿರಿ. ಅನಿರೀಕ್ಷಿತವಾಗಿ ಕಣ್ಣಿನ ತೊಂದರೆ ಕಾಣಿಸಿಕೊಳ್ಳಬಹುದು. ವಾಹನಗಳನ್ನು ಎಚ್ಚರದಿಂದ ಚಾಲಿಸಿರಿ. ಭಾನು-ಸೋಮ-ಗುರು-ಶುಭ ದಿನಗಳು.
ಸಿಂಹ ( ಮಘ, ಪುಬ್ಬ, ಉತ್ತರ 1)
(ಮ.ಮಿ.ಮು.ಮೋ.ವೆ.ಟ.ಟಿ.ಟು.ಟೆ)
ಪೂರ್ವಿಕರ ನಡಾವಳಿಯನ್ನೇ ಮುಂದುವರೆಸಿಕೊಂಡು ಹೋಗುವಲ್ಲಿ ವಿಫಲರಾಗುವಿರಿ, ಆದಾಯದ ಮೂಲದಲ್ಲಿ ಸಾಕಷ್ಟು ಹೆಚ್ಚಳ ಕಂಡುಬರಲಿದೆ.ನಂಬಿದವರಿಂದ ಆಗಬೇಕಾಗಿರುವ ಕೆಲಸಗಳಿಗೆ ವಿಘ್ನಗಳುಂಟಾಗಲಿವೆ. ಅಂತಹವರ ವಿಚಾರದಲ್ಲಿ ಎಚ್ಚರದಿಂದಿರುವುದು ಮೇಲು, ರಾಜಕಾರಣಿಗಳ ರಾಜಕೀಯ ಭವಿಷ್ಯ ಉತ್ತಮಗೊಳ್ಳಲಿದೆ. ಕಳೆದು ಹೋಗಿದ್ದ ಅಮೂಲ್ಯ ವಸ್ತುವೊಂದು ಮರಳಿ ದೊರಕಿ ಆತಂಕ ದೂರವಾಗಲಿದೆ, ಸಾಧ್ಯವಾದಷ್ಟು ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮೇಲು. ಭಾನು-ಗುರು-ಶುಕ್ರ-ಶುಭ ದಿನಗಳು.
ಕನ್ಯಾ (ಉತ್ತರಾ 2,3,4, ಹಸ್ತಾ, ಚಿತ್ತಾ 1,2)
(ಟೋ.ಪ.ಪಿ.ಪು.ಷ.ಣ.ಠ.ಪೆ.ಪೋ)
ನಿಮ್ಮ ನಡಾವಳಿಯಲ್ಲಿ ಕಂಡುಬರಲಿರುವ ಬದಲಾವಣೆ ಬಂಧುಗಳಿಗೆ ಇಷ್ಟವಾಗದೇ ಹೋಗಬಹುದು. ಮಾನಸಿಕ ದ್ವಂದ್ವಗಳಿಂದ ಹೊರಬರಲು ಯತ್ನಿಸಿ ವಿಫಲರಾಗುವಿರಿ. ಅಗತ್ಯಗಳಿಗೆ ತಕ್ಕಂತೆ ಆದಾಯವಿರುವುದರಿಂದ ದೈನಂದಿನ ಬದುಕಿಗೇನೂ ತೊಂದರೆಯಿಲ್ಲ, ಸೋದರಿಯ ಗಂಡನ ಅನಾರೋಗ್ಯ ಸಮಸ್ಯೆಗೆ ತುಸು ಆರ್ಥಿಕ ನೆರವು ನೀಡುವಿರಿ, ಮಕ್ಕಳ ನಡಾವಳಿಯಲ್ಲಿ ಕಂಡುಬರುತ್ತಿರುವ ವ್ಯತ್ಯಾಸದಿಂದ ಮಾನಸಿಕ ಖಿನ್ನತೆಗೆ ಒಳಗಾಗುವಿರಿ. ಆಪ್ತರೊಬ್ಬರ ಅಗಲಿಕೆ ಅನಿವಾರ್ಯವಾಗಲಿದೆ. ಮಂಗಳ-ಬುಧ-ಗುರು-ಶುಭ ದಿನಗಳು.
ತುಲಾ (ಚಿತ್ತಾ 3,4, ಸ್ವಾತಿ, ವಿಶಾಖ 1,2,3)
(ರ.ರಿ.ರು.ರೆ.ರೊ.ತ.ತಿ.ತು.ತೆ.)
ಧನಾದಾಯವು ನಿರೀಕ್ಷೆ ಮೀರಿರುವುದರಿಂದ ಮಕ್ಕಳ ಮುಂದಿನ ಭವಿಷ್ಯದ ದೃಷ್ಟಿಯಿಂದ ಸ್ವಲ್ಪ ಉಳಿತಾಯದ ಬಗ್ಗೆ ಆಲೋಚಿಸಬಹುದು. ತರುಣರು ವ್ಯವಹಾರದಲ್ಲಿ ತೊಡಗುವ ಮುನ್ನ ತುಸು ತರಬೇತಿ ಪಡೆಯುವುದು ಮೇಲು ಸ್ಥಿರಾಸ್ತಿ ವಿಲೇವಾರಿ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಲಿವೆ, ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ನಿರೀಕ್ಷಿತ ಯಶಸ್ಸು ಸಿಗದೇ ಹೋಗಬಹುದು, ಗರ್ಭಿಣಿ ಸ್ತ್ರೀಯರು ತುಸು ಎಚ್ಚರದಿಂದಿರುವುದು ಮೇಲು. ಮೂಳೆ ಸಂಬಂಧಿ ಅನಾರೋಗ್ಯ ಸಮಸ್ಯೆ ಕಾಡಲಿದೆ. ಗೋ ಸೇವೆ ಮಾಡಿ. ಭಾನು-ಶುಕ್ರ-ಶನಿ-ಶುಭ ದಿನಗಳು.
ವೃಶ್ಚಿಕ (ವಿಶಾಖ 4, ಅನೂ, ಜೇಷ್ಠ)
(ತೊ.ನ.ನಿ.ನು.ನೆ.ನೋ.ಯ.ಯಿ.ಯು.)
ಧನಾದಾಯವು ನಿರೀಕ್ಷೆ ಮೀರಿರುವುದರಿಂದ ಮಕ್ಕಳ ಮುಂದಿನ ಭವಿಷ್ಯದ ದೃಷ್ಟಿಯಿಂದ ಸ್ವಲ್ಪ ಉಳಿತಾಯದ ಬಗ್ಗೆ ಆಲೋಚಿಸಬಹುದು. ತರುಣರು ವ್ಯವಹಾರದಲ್ಲಿ ತೊಡಗುವ ಮುನ್ನ ತುಸು ತರಬೇತಿ ಪಡೆಯುವುದು ಮೇಲು ಸ್ಥಿರಾಸ್ತಿ ವಿಲೇವಾರಿ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಲಿವೆ, ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ನಿರೀಕ್ಷಿತ ಯಶಸ್ಸು ಸಿಗದೇ ಹೋಗಬಹುದು, ಗರ್ಭಿಣಿ ಸ್ತ್ರೀಯರು ತುಸು ಎಚ್ಚರದಿಂದಿರುವುದು ಮೇಲು. ಮೂಳೆ ಸಂಬಂಧಿ ಅನಾರೋಗ್ಯ ಸಮಸ್ಯೆ ಕಾಡಲಿದೆ. ಗೋ ಸೇವೆ ಮಾಡಿ. ಭಾನು-ಶುಕ್ರ-ಶನಿ-ಶುಭ ದಿನಗಳು.
ಧನಸ್ಸು (ಮೂಲ, ಪೂರ್ವಾಷಾಢ, ಉತ್ತರಾಷಾಢ)
(ಯೆ.ಯೋ. ಬ.ಬಿ.ಬು.ಧ.ಫ.ಡ.ಬೆ.)
ಕೌಟುಂಬಿಕ ವಿಚಾರದಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ವಿಫಲರಾಗುವಿರಿ. ತೀರ್ಥಯಾತ್ರೆಗೆ ಹೊರಡಲಿರುವ ನೀವು ಪೂರ್ವ ಸಿದ್ಧತೆಯನ್ನು ಚೆನ್ನಾಗಿ ಮಾಡಿಕೊಳ್ಳಿ, ಹಣಕಾಸಿನ ಹರಿವು ಮಂದಗತಿಯಲ್ಲಿ ಸಾಗಲಿದೆ. ಯಾವುದೇ ಹೊಸ ಯೋಜನೆಗಳನ್ನು ಸದ್ಯದ ಪರಿಸ್ಥಿತಿಯಲ್ಲಿ ಕಾರ್ಯರೂಪಕ್ಕೆ ತರಲು ಹೋಗಬೇಡಿ, ಸಂಗಾತಿಯ ಬೆಂಬಲ ನಿಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸಲಿದೆ. ಅತಿಯಾದ ಮೋಜು ಅಥವಾ ಭೋಜನ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಬಹುದು, ಗುರು ಸೇವೆ ಮಾಡಿ. ಮಂಗಳ-ಗುರು-ಶುಕ್ರ-ಶುಭ ದಿನಗಳು.
ಮಕರ (ಉತ್ತರಾಷಾಢ 2,3,4, ಶ್ರವಣ, ಧನಿಷ್ಠಾ 1,2)
(ಜೊ.ಜ.ಜಿ.ಜೆ.ಶಿ.ಶು.ಶೇ.ಶೋ.ಗ.ಗಿ)
ಅವ್ಯವಸ್ಥಿತ ಚಿತ್ತ ವೃತ್ತಿಯಿಂದಾಗಿ ಆಗಬೇಕಾಗಿರುವ ಕೆಲಸಗಳು ಕಾಲಾ ವಧಿಯಲ್ಲಿ ಆಗದೇ ಹೋಗಬಹುದು, ಹೊಸ ಕಾರ್ಯಗಳಿಗೆ ಬಂಧು-ಮಿತ್ರರ ನೆರವು ಸಾಕಷ್ಟು ಪ್ರಮಾಣದಲ್ಲಿ ದೊರೆಯಲಿದೆ. ಆದರೆ ಅದು ಸದುಪಯೋಗ ವಾಗಬೇಕಷ್ಟೇ, ವ್ಯವಹಾರದಲ್ಲಿ ಹೆಚ್ಚಿನ ಬಂಡವಾಳವನ್ನು ಹೂಡುವ ಸಾಹಸಕ್ಕೆ ಕೈಹಾಕಬೇಡಿ, ಆಸ್ತಿ ವಿಭಾಗದಲ್ಲಿ ತ್ವರಿತ ನಿರ್ಧಾರ ತೆಗೆದುಕೊಳ್ಳಲು ಇದು ಸಕಾಲವಾಗಿದೆ. ವಿದ್ಯಾರ್ಥಿಗಳು ತಮ್ಮ ಪರಿಶ್ರಮಕ್ಕೆ ತಕ್ಕಂತೆ ಫಲಿತಾಂಶ ಪಡೆವರು, ಕುದೇವತಾರಾಧನೆಯಿಂದ ಕಾರ್ಯಸಿದ್ಧಿ ಯಾಗಲಿದೆ. ಸೋಮ-ಬುಧ-ಶನಿ-ಶುಭದಿನಗಳು.
ಕುಂಭ (ಧನಿಷ್ಠಾ, ಶತಭಿಷಾ, ಪೂರ್ವಾಭಾದ್ರ 1,2,3)
(ಗು.ಗೆ.ಗೊ.ಸ.ಸಿ.ಸು.ಸೆ.ಸೋ.ದ)
ಮನೆಯ ಸದಸ್ಯರು ಎಷ್ಟೇ ಅಸಹಕಾರ ತೋರಿದರೂ ಹಿರಿಯರಾದವರು ಅಷ್ಟೇ ತಾಳ್ಮೆಯಿಂದ ಇರುವುದು ಮೇಲು. ಆಸ್ತಿ ಖರೀದಿಗೆ ಬೇಕಾಗಿರುವ ಆರ್ಥಿಕ ನೆರವು ಹಣಕಾಸು ಸಂಸ್ಥೆಗಳಿಂದ ಸಿಗಲಿದೆ, ಬಂಧುಗಳೊಂದಿಗೆ ವಿನಾಕಾರಣ ವೈಮನಸ್ಸು ಬೇಡ, ಅವಿವಾಹಿತರಿಗೆ ಕಂಕಣ ಭಾಗ್ಯ ಇಷ್ಟರಲ್ಲೇ ಕೂಡಿಬರಲಿದೆ. ಸಂಶೋಧನಾ ರಂಗದಲ್ಲಿರುವವರಿಗೆ ಸರ್ಕಾರದಿಂದ ಬರಬೇಕಾಗಿರುವ ನೆರವು ತಡವಾಗಿಬರಬಹುದು, ವ್ಯಾಪಾರ ವ್ಯವಹಾರದಲ್ಲಿ ಸಾಕಷ್ಟು ಎಚ್ಚರದಿಂದಿರಿ. ಸೋಮ-ಗುರು-ಶನಿ ಶುಭ ದಿನಗಳು.
ಮೀನ (ಪೂರ್ವಾಭಾದ್ರ 4, ಉತ್ತರಾಭಾದ್ರ, ರೇವತಿ)
(ದಿ.ದು.ಖ.ಝ.ಥ.ದೆ.ದೋ.ಖ.ಚ.ಚಿ.)
ವಿದ್ಯಾರ್ಥಿಗಳು ಬರೀ ಮೋಜು, ಮಸ್ತಿಯಲ್ಲಿ ಕಾಲ ಕಳೆಯುವರು, ಇದರಿಂದ ಅವರ ಭವಿಷ್ಯಕ್ಕೆ ಮಾರಕವಾಗಲಿದೆ ಎಂಬುದರಲ್ಲಿ ಸಂಶಯವೇ ಬೇಡ. ಹಣಕಾಸಿನ ಹರಿವಿನಲ್ಲಿ ಹೆಚ್ಚಳ, ಕೆಲವು ವಿಷಯಗಳಲ್ಲಿ ಹಿರಿಯರ ಸಲಹೆ ಸೂಚನೆಗಳನ್ನು ಪಡೆಯುವುದರಿಂದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು, ಮಹಿಳಾ ನೌಕರರಿಗೆ ವೇತನದಲ್ಲಿ ಹೆಚ್ಚಳ ಕಂಡುಬರಲಿದೆ. ಅನಾವಶ್ಯಕವಾಗಿ ಮತ್ತೊಬ್ಬರ ಮನ ನೋಯಿಸಬೇಡಿ, ಶಸ್ತ್ರಚಿಕಿತ್ಸಕರಿಗೆ ಬೇಡಿಕೆ ಹೆಚ್ಚಲಿದೆ. ಗುರು ಚರಿತ್ರೆಯನ್ನು ಪಠಿಸಿ. ಭಾನು-ಸೋಮ-ಗುರು-ಶುಭ ದಿನಗಳು.
ಜಯತೀರ್ಥಾಚಾರ್ ವಡೇರ್
ದಾವಣಗೆರೆ.
[email protected]