ಬರ್ಮಿಂಗ್‌ಹ್ಯಾಮ್‌ನಲ್ಲಿ ಅಪರೂಪದ ಬಯಲು ಕಲಾ ಪ್ರದರ್ಶನ

ಬರ್ಮಿಂಗ್‌ಹ್ಯಾಮ್‌ನಲ್ಲಿ ಅಪರೂಪದ ಬಯಲು ಕಲಾ ಪ್ರದರ್ಶನ


ಬರ್ಮಿಂಗ್‌ಹ್ಯಾಮ್‌ನಲ್ಲಿ ಅಪರೂಪದ ಬಯಲು ಕಲಾ ಪ್ರದರ್ಶನ - Janathavaniಇಂಗ್ಲೆಂಡ್‌ನಲ್ಲಿ ಕಲೆ, ಕಲಾವಿದರು, ಕಲಾಪ್ರದರ್ಶನಗಳು, ಕಲಾ ಗ್ಯಾಲರಿಗಳು ವಿಶ್ವ ವಿಖ್ಯಾತ ಪ್ರವಾಸಿಗರಾಗಿ ನಮಗೆ ಇರುವ ಅವಕಾಶಗಳಲ್ಲಿ ಹೊಸತನವನ್ನು ಕಂಡೊಡನೆ ಆಸಕ್ತಿಯನ್ನು ಮೂಡಿಸುತ್ತವೆ.

ಕಲಾ ಪ್ರದರ್ಶನಗಳನ್ನು ಗ್ಯಾಲರಿಯಲ್ಲಿ, ಮ್ಯೂಸಿಯಂಗಳಲ್ಲಿ ದೊಡ್ಡದಾದ ಹೋಟೆಲ್ ಮಹಲ್‌ಗಳಲ್ಲಿ ಮತ್ತು ಚಿತ್ರ ಸಂತೆಗಳಲ್ಲಿ ಸಾಧಾರಣವಾಗಿ 2×3, 3×4 ಅಥವಾ ಹೆಚ್ಚೆಂದರೆ ಮ್ಯೂರಲ್‌ ಪೇಟಿಂಗ್ ಫೋಟ, ಶಿಲ್ಪಗಳು ಇನ್‌ಸ್ಟಾಲೇಷನ್‌ಗಳನ್ನು ನೋಡಬಹುದು. ಆದರೆ ಈ ಪ್ರದರ್ಶನದಲ್ಲಿ ಕಾಣುವ ಚಿತ್ರಗಳು ಕ್ಯಾಬಿನ್‌ನಲ್ಲಿ ದೊಡ್ಡದಾದ ಅಳತೆಗಳಲ್ಲಿ ಪ್ರದರ್ಶನವನ್ನು ಆಯೋಜಿಸಿದ್ದಾರೆ.

ಇಂಗ್ಲೆಂಡ್‌ ಹಿಂದಿನ ರಾಜಧಾನಿ ಬರ್ಮಿಂಗ್‌ಹ್ಯಾಮ್‌ ಕಲೆ, ಗ್ಯಾಲರಿಗಳು ವಾಸ್ತು ಶಿಲ್ಪಗಳಿಗೆ ಮತ್ತು ವಸ್ತು ಸಂಗ್ರಹಾಲಯಗಳಿಗೆ ಖ್ಯಾತ ದೇಶವಾಗಿದೆ. ಇಲ್ಲಿ ನಡೆಯುವ ಕಾರ್ಯಕ್ರಮಗಳೂ ವಿಶೇಷವಾಗಿರುತ್ತವೆ. ಅವುಗಳಲ್ಲಿ ಒಂದು ಬ್ರಿಟನ್‌ ಫ್ಲೇಮ್‌ ಎಂಬುದು 100 ದಿನಗಳ ಕಾಲ ನಿರಂತರ ವೈವಿಧ್ಯಮಯ ಪ್ರದರ್ಶನ, ಸಂಗೀತ, ನಾಟಕ, ಇತ್ಯಾದಿ ಈ ದೆಸೆಯಲ್ಲಿ ಕಳೆದ ತಿಂಗಳಲ್ಲಿ ಆರಂಭವಾಗಿ ಜುಲೈ 31ರವರೆಗೆ ವಿಕ್ಟೋರಿಯಾ ಸ್ಕ್ವೆಯರ್‌ನಲ್ಲಿ ಆಯೋಜಿಸಿರುವ ಬಯಲು ಪ್ರದೇಶದಲ್ಲಿ ದೊಡ್ಡದಾದ ಕ್ಯಾಬಿನ್‌ಗಳಲ್ಲಿ ಕೃತಿಗಳನ್ನು ನೋಡಬಹುದು. ಸುಮಾರು 20 ಕ್ಯಾಬಿನ್‌ಗಳಲ್ಲಿ ಓರ್ವ ಮಹಾನ್ ಕವಿ, ನಾಟಕಕಾರ, ಸಂಘಟನಾಕಾರ ಹಾಗೆ ಉಗ್ರವಾದಿಯೂ ಆಗಿದ್ದು, ಆತನ ಕವಿತೆಗಳಿಗೆ, ಲೇಖನಗಳಿಗೆ ಮಾತ್ರವಲ್ಲದೆ ಜನ ಸೇವಾ ಸಂಸ್ಥೆಗಳ ಮೂಲಕ ಹೆಚ್ಚು ಪ್ರಸಿದ್ಧ ವ್ಯಕ್ತಿಯಾಗಿದ್ದ ಬೆಂಜಮಿನ್ ಝಫಾನಿಯಾ ತನ್ನ 62ನೇ ವಯಸ್ಸಿನಲ್ಲೇ ಮೆದುಳು ಜ್ವರದಿಂದ ಅಸುನೀಗಿದರು. ಆತನ ಸ್ಮರಣಾರ್ಥವಾಗಿ ಆಪ್ತ ವಲಯದವರು ಏನಾದರೊಂದು ಹೊಸ ಯೋಜನೆಯನ್ನು ರೂಪಿಸುವ ಮೂಲಕ ಬರ್ಮಿಂಗ್‌ಹ್ಯಾಮ್‌ನಲ್ಲಿ ಅಪರೂಪದ ಬಯಲು ಕಲಾ ಪ್ರದರ್ಶನ - Janathavaniಆಲೋಚಿಸಿದರು. ಇದಕ್ಕೆ ಸಾಥ್‌ ನೀಡಿದವರು ಕಲಾವಿದ ಪೆಂಗನ್‌ ಮತ್ತು ಆರ್ಟ್‌ ಹಿಸ್ಟೋರಿಯನ್‌ ಆದ ರುತ್ತಿ ಮಿಲಿಂಗಟನ್ ಆತನ ಕುಟುಂಬದ ಸಹಕಾರದೊಂದಿಗೆ ಕವಿ ಬೆಂಜಿಮನ್‌ರ ಸಾಹಿತ್ಯದ ಸಾಲುಗಳು, ಕವನಗಳು ಮತ್ತು ಕವನಕ್ಕೆ ಚಿತ್ರಗಳು. ಅಲ್ಲದೆ ಸಾಂದರ್ಭಿಕವಾಗಿ ಸಂಗ್ರಹದ ಕಪ್ಪು ಬಿಳುಪು ಛಾಯಾಚಿತ್ರಗಳನ್ನು ಒಟ್ಟುಗೂಡಿಸಿ 20 ಕ್ಯಾಬಿನ್‌ಗಳು ವಿಕ್ಟೋರಿಯಾ ಚೌಕದ ರಸ್ತೆಯಲ್ಲಿ ಉದ್ದಕ್ಕೂ ಜೋಡಿಸಿದ್ದರು.

 ಮೊದಲಿಗೆ ನಮಗೆ ಕಲಾಪ್ರದರ್ಶನ ಅನಿಸಲಿಲ್ಲ. ಯಾವುದೋ ಪುಟ್ಟ ಅಂಗಡಿಗಳೆಂದು ದೂರದಿಂದ ನೋಡಿದಾಗ ಅನಿಸುತ್ತದೆ. ಆದರೆ ವಿಕ್ಟೋರಿಯಾ ಚೌಕದ ರಸ್ತೆ ಪ್ರವೇಶಿಸಿದಾಗ ಬಯಲಿನಲ್ಲಿ ಕಲಾಪ್ರದರ್ಶನ ಕಾಣುತ್ತದೆ. ಹಿಂದೆ 1982ರಲ್ಲಿಯೇ ಈ ಯೋಜನೆಯನ್ನು ಜಾರಿಗೆ ತರಲಾಯಿತು ಎಂದು ಕೇಳಿದೆವು. ಈ ರೀತಿಯ ಪ್ರದರ್ಶನ ಅನೇಕ ಸ್ಥಳಗಳಲ್ಲಿ ನಡೆಯುತ್ತದೆ. ಈ ಪ್ರದರ್ಶನವನ್ನು ನೋಡಿದವರು ಬರ್ಮಿಂಗ್‌ಹ್ಯಾಮ್‌ ಮಗನಾದ ಓರ್ವ ಶ್ರೇಷ್ಠ ಕವಿ, ಕಲಾವಿದ, ನಟ, ಇತಿಹಾಸಕಾರ, ಜನಸೇವಕ ಇತ್ಯಾದಿ ಬಹುಮುಖ ಪ್ರತಿಭೆಯ ಬೆಂಜಮಿನ್‌ ಝಫಾನಿಯಾ ಮಹಾತ್ಮನಿಗೆ ಸಲ್ಲಿಸುವ ಗೌರವ ಎಂದು ವಿಶೇಷವಾಗಿ ಇಲ್ಲಿ ಜನ ಹೇಳುತ್ತಾರೆ.


ಬರ್ಮಿಂಗ್‌ಹ್ಯಾಮ್‌ನಲ್ಲಿ ಅಪರೂಪದ ಬಯಲು ಕಲಾ ಪ್ರದರ್ಶನ - Janathavaniಮಹಲಿಂಗಪ್ಪ ಎ. ಕಲಾವಿದ
[email protected]
(ಲೇಖಕರು ಪ್ರಸ್ತುತ ಯುರೋಪ್ ಪ್ರವಾಸದಲ್ಲಿದ್ದಾರೆ.)

error: Content is protected !!