Category: ದಾವಣಗೆರೆ

Home ದಾವಣಗೆರೆ

ನಗರದಲ್ಲಿ ರಂಗೋಲಿ ಚಿತ್ತಾರ, ಮತದಾರರ ಜಾಗೃತಿಗೆ ಘೋಷವಾಕ್ಯಗಳ ಅನಾವರಣ

ಜಿಲ್ಲಾಡಳಿತ,  ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ ಇವರುಗಳ ಸಹಾ ಯದೊಂದಿಗೆ ಸೋಮವಾರ ನಗರದ ಗುರುಭ ವನದ ರಸ್ತೆಯಲ್ಲಿ ರಂಗೋಲಿ ಬಿಡಿಸುವ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.

ಅಭಿವೃದ್ಧಿ ಬದ್ಧತೆ ನಮಗೆ ಇದೆ : ಶಾಸಕ ಎಸ್ಸೆಸ್

ಅಭಿವೃದ್ಧಿ ಬಗ್ಗೆ ನಮಗೆ ಬದ್ದತೆ ಇದೆ. ನಾವು ಯಾವುದೇ ಸರ್ಕಾರ ಇದ್ದರೂ ಸಹ ದಾವಣಗೆರೆ ಅಭಿವೃದ್ಧಿಗೆ ಬದ್ದರಿದ್ದೇವೆ. ನೀವೂ ಸಹ ನಮ್ಮನ್ನು ಬೆಂಬಲಿಸುವ ಮೂಲಕ ದಾವಣಗೆರೆ ಅಭಿವೃದ್ಧಿಗೆ ಸಹಕರಿಸಬೇಕೆಂದು ಶಾಸಕ ಶಾಮನೂರು ಶಿವಶಂಕರಪ್ಪ ಕರೆ ನೀಡಿದರು.

ಕ್ಷೇತ್ರದಲ್ಲಿ 17,09,244 ಮತದಾರರು

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಅಂತಿಮವಾಗಿ 17,09,244 ಮತದಾರರಿದ್ದಾರೆ. ಇದರಲ್ಲಿ ಪುರುಷರು 8,51,990, ಮಹಿಳೆಯರು 8,57,117 ಹಾಗೂ ತೃತೀಯ ಲಿಂಗ 137 ಮತದಾರರಿದ್ದಾರೆ. ದಾವಣಗೆರೆ ಕ್ಷೇತ್ರದಲ್ಲಿ ಪುರುಷರಿಗಿಂತ 5127 ಮಹಿಳಾ ಮತದಾರಿದ್ದಾರೆ.

ಕೆರೆ ತುಂಬಿಸುವ ಯೋಜನೆಗೆ ಕೈ ಹಾಕಿದ್ದು ಕಾಂಗ್ರೆಸ್

ಹರಪನಹಳ್ಳಿ : ಹರಪನಹಳ್ಳಿ ಹಾಗೂ ಜಗಳೂರು ವಿಧಾನಸಭಾ ಕ್ಷೇತ್ರಗಳು ಕಾಂಗ್ರೆಸ್ ಪಕ್ಷದ ಭದ್ರ ಕೋಟೆಗಳು, ಈ ಭಾಗದ 57 ಹಾಗೂ 22 ಕೆರೆಗಳಿಗೆ ನೀರು ತುಂಬಿರುವ ಯೋಜನೆಗೆ ಕೈ ಹಾಕಿದ್ದು ಕಾಂಗ್ರೆಸ್ ಪಕ್ಷ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ ಅವರು ತಿಳಿಸಿದರು. 

ಹೆಬ್ಬಾಳು ಶ್ರೀಗಳ ಆಶೀರ್ವಾದ ಪಡೆದ ಎಸ್ಸೆಸ್ಸೆಂ

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಇಂದು ಹೆಬ್ಬಾಳಿನ ಶ್ರೀ ರುದ್ರೇಶ್ವರ ವಿರಕ್ತಮಠಕ್ಕೆ ಭೇಟಿ ನೀಡಿ, ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿಯವರ ಆಶೀರ್ವಾದ ಪಡೆದರು.

ನೇಹಾ ಹತ್ಯೆ ಖಂಡಿಸಿ ಜಂಗಮ ಸಮಾಜದ ಪ್ರತಿಭಟನೆ

ಹುಬ್ಬಳ್ಳಿಯ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ನೇಹಾ ಹಿರೇಮಠ್ ಹತ್ಯೆ ಪ್ರಕರಣ ಖಂಡಿಸಿ ಜಿಲ್ಲಾ ಜಂಗಮ ಸಮಾಜದಿಂದ  ನಗರದ ಜಯದೇವ ಸರ್ಕಲ್‌ನಲ್ಲಿ ಮೊನ್ನೆ ಮೇಣದ ಬತ್ತಿ ಹೊತ್ತಿಸಿ ಪ್ರತಿಭಟನೆ ನಡೆಸಲಾಯಿತು.

ದುಡ್ಡು ಕೊಟ್ಟು ಓಟು ಪಡೆಯುವ ಪದ್ಧತಿ ನಿರ್ಮೂಲನೆ ಆಗಬೇಕು

ನಾನು ಗೆದ್ದರೆ, ಪ್ರಜಾಪ್ರಭುತ್ವ ಉಳಿಸಲು ಹೋರಾಟ ಮಾಡಿದವರಿಗೆ  ನ್ಯಾಯ ಒದಗಿಸಿದಂತಾಗುತ್ತದೆ. ಸ್ವಾಭಿಮಾನದ ಚುನಾವಣೆ ಮಾಡೋಣ.  ರಾಜಕಾರಣದಲ್ಲಿ ದುಡ್ಡು ಕೊಟ್ಟು ಓಟು ಪಡೆಯುವ ಪದ್ಧತಿ ನಿರ್ಮೂಲನೆ ಆಗಬೇಕು

ಗಾಳಿಪಟದಂತೆ ಸ್ವತಂತ್ರವಾಗಿ ಮತದಾನ ಮಾಡಲು ಕರೆ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಇವರ ಸಹಾಯದೊಂದಿಗೆ ಸೋಮವಾರ ಹೈಸ್ಕೂಲ್ ಮೈದಾನದಲ್ಲಿ ಗಾಳಿಪಟ ಹಾರಿಸುವ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು .

ಎಲ್ಲೆಡೆ ಸಂಭ್ರಮದ ಹನುಮ ಜಯಂತಿ

ಶ್ರೀರಾಮನ ಪರಮ ಭಕ್ತ ಹನುಮ ಜಯಂತಿ ಅಂಗವಾಗಿ ಜಿಲ್ಲಾದ್ಯಂತ ಮಾರುತಿ ಮಂದಿರಗಳಲ್ಲಿ ಶನಿವಾರ ಶ್ರದ್ಧಾ-ಭಕ್ತಿಯಿಂದ ಪೂಜೆ, ಪುನಸ್ಕಾರ ನೆರವೇರಿಸಲಾಯಿತು.

ಕೃಷಿ ಪದವಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ

ಪ್ರಸ್ತುತ ವೃತ್ತಿಪರ ಪದವಿಗಳಲ್ಲಿ ಕೃಷಿಗೆ ಸಂಬಂಧಿಸಿದ ಪದವಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿದೆ ಎಂದು ಕೆನರಾ ಬ್ಯಾಂಕ್‌ನ ವ್ಯವಸ್ಥಾಪಕ ಪ್ರದೀಪ್ ಪಾಟೀಲ್ ಹೇಳಿದರು.

ಬಸ್‌ಗಳಿಗೆ ಮತದಾರರ ಜಾಗೃತಿ ಸ್ಟಿಕ್ಕರ್ ಅಳವಡಿಕೆಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕರ್ನಾಟಕ ರಾಜ್ಯ ಸಾರಿಗೆ ಸಂಪರ್ಕ ನಿಗಮ ಇವರ ಸಹಯೋಗದಲ್ಲಿ  ನಗರದ ಹೈಸ್ಕೂಲ್ ಮೈದಾನದಲ್ಲಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಬಸ್‍ಗಳಿಗೆ ಮತದಾನ ಜಾಗೃತಿ ಸ್ಟಿಕ್ಕರ್ ಅಳವಡಿಸುವ ಮೂಲಕ ಮತದಾನ ಜಾಗೃತಿಗೆ ಚಾಲನೆ ನೀಡಲಾಯಿತು.

ಕಣದಲ್ಲಿ ಉಳಿದ ವಿನಯ್

ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಚುನಾವಣಾ ಕಣದಲ್ಲಿ ಉಳಿದಿದ್ದಾರೆ. ನಾಮಪತ್ರ ವಾಪಸ್ ಪಡೆಯಲಿದ್ದಾರೆ ಎಂದು ಕೆಲವರು ವದಂತಿ ಹಬ್ಬಿಸಿದ್ದರು. ಈ ವದಂತಿಗೆ ಈಗ ತೆರೆ ಬಿದ್ದಿದೆ. ಚುನಾವಣಾ ಕಣದಲ್ಲಿ ಗೆಲುವಿಗೆ ಸೆಣಸಾಡಲಿದ್ದಾರೆ. 

error: Content is protected !!