ರಾಣೇಬೆನ್ನೂರು : ಗುರು ಪರಂಪರೆ ಭಾರತದಲ್ಲಿ ಮಾತ್ರ ಸಾಧ್ಯ

ಪ್ರಧಾನ ಅರ್ಚಕ ಸಂತೋಷ ಪೂಜಾರ

ರಾಣೇಬೆನ್ನೂರು, ಸೆ.7- ಭಾರತದ ನೆಲದಲ್ಲಿ ಗುರು ಪರಂಪರೆ ಅನಾದಿ ಕಾಲದಿಂದಲೂ ನಡೆದು ಕೊಂಡು ಬಂದಿದ್ದು, ಈ ಪರಂಪರೆ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಮಾಡಲು ಸಹಕಾರಿಯಾಗಲಿದೆ ಎಂದು ದೇವರಗುಡ್ಡ ಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್ ಪೂಜಾರ್ ಹೇಳಿದರು.

ಅವರು ದೇವಸ್ಥಾನದ ಆವರಣದಲ್ಲಿ ಶಿಕ್ಷಕರ ದಿನಾಚರಣೆಯ ನಿಮಿತ್ತ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು. ಎಲ್ಲರ ಜೀವನದ ಪ್ರತಿಯೊಂದು ಹಂತದಲ್ಲಿ ಗುರುಗಳು ತಂದೆ, ತಾಯಿ, ಅಣ್ಣ, ತಮ್ಮ ಮತ್ತು ಸ್ನೇಹಿತ ಹೀಗೆ ಹಲವಾರು ರೂಪದಲ್ಲಿದ್ದು ಮಕ್ಕಳಲ್ಲಿ ಸಾಮಾಜಿಕ ಜ್ಞಾನವನ್ನು ತುಂಬುತ್ತಾರೆ. ಇದು ಭಾರತದಲ್ಲಿ ಮಾತ್ರ ಸಾಧ್ಯ ಎಂದರು.

ಅಗಡಿ ಆನಂದ ವನದ ಗುರುದತ್ತಮೂರ್ತಿ ಚಕ್ರವರ್ತಿಸ್ವಾಮಿ ಮಾತನಾಡಿ, ಯಾವುದೇ ಕೆಲಸ ಮಾಡುವ ಮೊದಲು ಗುರು ಕೃಪೆ ಪಡೆದರೆ ಆ ಕೆಲಸ ಯಶಸ್ಸು ಪಡೆಯಲಿದೆ ಎಂದು ಹೇಳಿದರು.

ತಾಲ್ಲೂಕಿನ ವಿವಿಧ ಗ್ರಾಮಗಳ ಹದಿನೈದು ಶಿಕ್ಷಕರನ್ನು ಸನ್ಮಾನಿಸಲಾದ ಈ ಕಾರ್ಯಕ್ರಮದಲ್ಲಿ ಭಂಡಾರದ ಗುರು ಮಲ್ಲಪ್ಪಯ್ಯ ಒಡೆಯರ್,  ಗ್ರಾಮದ ಗಣ್ಯರಾದ ನಿಂಗಪ್ಪ ಮುದ್ದಿ, ಹನುಮಂತಪ್ಪ ನಾಯ್ಕರ್, ಪಕ್ಕೀರಪ್ಪ ಐಗಳ, ನಾಗರಾಜ ಸಂಶಿ, ಪ್ರಕಾಶ ಬಳ್ಳಾರಿ, ಸಿದ್ದಪ್ಪ ಬಾತಿ, ಗಿರೀಶ್ ಬಾತಿ, ದಿಳ್ಳೆಪ್ಪ ಐಗಳ್ ಮತ್ತಿತರರಿದ್ದರು.

error: Content is protected !!