20 ರಂದು ನಗರದಲ್ಲಿ ಯುವ ಉತ್ಸವ

ದಾವಣಗೆರೆ, ಮಾ.15-  ಭಾರತ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಅಡಿಯಲ್ಲಿ ದಾವಣಗೆರೆ ನೆಹರು ಯುವ ಕೇಂದ್ರದಿಂದ  ಜಿಲ್ಲಾ ಮಟ್ಟದ ಯುವ ಉತ್ಸವ – 2022-23 ಕಾರ್ಯಕ್ರಮವನ್ನು ಇದೇ ದಿನಾಾಂಕ 20 ರಂದು ಹಮ್ಮಿಕೊಳ್ಳಲಾಗಿದೆ. 

ಪೇಂಟಿಂಗ್ ಸ್ಪರ್ಧೆ, ಕವನ ಬರವಣಿಗೆ ಸ್ಪರ್ಧೆ, ಮೊಬೈಲ್ ಪೋಟೋಗ್ರಫಿ  ಸ್ಪರ್ಧೆ, ಸಾಂಸ್ಕೃತಿಕ ಜಾನಪದ ಮತ್ತು ಸಾಂಪ್ರದಾಯಿಕ ನೃತ್ಯ ಸ್ಪರ್ಧೆ, ಭಾಷಣ ಸ್ಪರ್ಧೆ ಈ ಎಲ್ಲಾ ಸ್ಪರ್ಧೆಗಳಲ್ಲಿ ಯಾವುದಾದರೂ ಒಂದರಲ್ಲಿ ಮಾತ್ರ 15 ರಿಂದ 29 ರ ವಯೋಮಾನದವರು ಭಾಗವಹಿಸಬಹುದು.

ಹೆಚ್ಚಿನ ಮಾಹಿತಿಗಾಗಿ ನೋಂದಣಿ ಮಾಡಲು ನೆಹರು ಯುವ ಕೇಂದ್ರ ಕಾರ್ಯಾಲಯ, ಜಿಲ್ಲಾಧಿಕಾರಿಗಳ ಕಾರ್ಯಾಲಯ ರೂಂ ನಂ.42 ದಾವಣಗೆರೆ ಹಾಗೂ ಮೊ.ಸಂ:9901863789 ಸಂಪರ್ಕಿಸಬಹುದು.