ದಾವಣಗೆರೆ, ಮಾ. 17- ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ವಿಧಾನಸಭಾ ಚುನಾವಣೆಯ ಮಾಯಕೊಂಡ ಕ್ಷೇತ್ರಕ್ಕೆ ಬಿ.ಸೋಮಶೇಖರ್, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಕೆ.ಮಲ್ಲಪ್ಪ, ಚನ್ನಗಿರಿ ಕ್ಷೇತ್ರದಿಂದ ಮಂಜುನಾಥ ಗೌಡ್ರು ಅವರನ್ನು ಅಭ್ಯರ್ಥಿಗಳನ್ನಾಗಿ ಘೋಷಿಸಲಾಗಿದೆ ಎಂದು ಜಿಲ್ಲಾ ಕಾರ್ಯದರ್ಶಿ ಕೆ.ಮಲ್ಲಪ್ಪ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪಕ್ಷವು ಸ್ವಚ್ಛ, ಸದೃಢ, ಸಮೃದ್ಧ, ಸಾಂಸ್ಕೃತಿಕ, ಹಸಿರು ಕರ್ನಾಟಕಕ್ಕಾಗಿ ನವಸೂತ್ರಗಳ ಪ್ರಣಾಳಿಕೆ ಬಿಡುಗಡೆ ಮಾಡಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಎನ್.ಎಸ್. ಅಭಿಷೇಕ್, ಗುಡ್ಡಪ್ಪ, ಕೆ.ಎಸ್. ವೀರಭದ್ರಪ್ಪ, ಅಜ್ಜೇಶ್ ಟಿ., ಬಿ.ಸೋಮಶೇಖರ್ ಮುಂತಾದವರು ಇದ್ದರು.
March 26, 2023