ಸಂಸದರಿಗೆ ಟಿಕೆಟ್‌ : ಸಂಸದೀಯ ಮಂಡಳಿ ನಿರ್ಧಾರ

ದಾವಣಗೆರೆ, ಮಾ.16- ಮುಂಬರುವ ವಿಧಾನಸಭಾ ಚುನಾವಣೆ ಯಲ್ಲಿ ಹಾಲಿ ಸಂಸದರಿಗೆ ಟಿಕೆಟ್ ನೀಡುವ ಬಗ್ಗೆ ಬಿಜೆಪಿ ಸಂಸದೀಯ ಮಂಡಳಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಬಿಜೆಪಿ ರಾಜ್ಯಾ ಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹಾಲಿ ಶಾಸಕರಿಗೆ ಟಿಕೆಟ್ ನೀಡುವ ಕುರಿತು ಸಂಸದೀಯ ಮಂಡಳಿಯೇ ನಿರ್ಧರಿ ಸಲಿದೆ. ಟಿಕೆಟ್ ನೀಡುವ ಬಗ್ಗೆ ಕಾಂಗ್ರೆಸ್‌ ರೀತಿಯ ಅವಸರ ನಮಗಿಲ್ಲ ಎಂದರು. ಬಿಜೆಪಿ ಅಲೆ ಕಡಿಮೆಯಾಗಿರುವ ಕಾರಣ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪದೇ ಪದೇ ರಾಜ್ಯಕ್ಕೆ ಬರುತ್ತಿದ್ದಾರೆ ಎಂಬ ವಾದ ತಳ್ಳಿ ಹಾಕಿದ ಅವರು, ಮೋದಿ ಪ್ರಧಾನಿಯಾದ ನಂತರ ಸಾಧ್ಯವಾ ದಷ್ಟು ಎಲ್ಲ ರಾಜ್ಯ ಹಾಗೂ ಕ್ಷೇತ್ರಗಳನ್ನು ಭೇಟಿ ಮಾಡಿ ದೇಶವನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದರು.

ಪ್ರಧಾನಿ ಮೋದಿ ನೆರೆ ಬಂದಾಗ ರಾಜ್ಯಕ್ಕೆ ಬರಲಿಲ್ಲ ಎಂಬ ಕಾಂಗ್ರೆಸ್ ಟೀಕೆಗೆ ಅರ್ಥವಿಲ್ಲ. 

ನಮ್ಮ ಸರ್ಕಾರ ಎಲ್ಲ ಪರಿಹಾರ ಕೊಟ್ಟಿದೆ, ಕೆಲಸ ಮಾಡಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕರಾವಳಿಗೆ ನೆರೆ ಬಂದರೂ ಬಂದಿರಲಿಲ್ಲ, ಪರಿಹಾರ ಕೊಟ್ಟಿರಲಿಲ್ಲ. ಈ ಬಗ್ಗೆ ಉತ್ತರಿಸಬೇಕು ಎಂದು ತಿರುಗೇಟು ನೀಡಿದರು.