ವಿಕಲಚೇತನರಿಗೆ ಯುಡಿಐಡಿ ಕಡ್ಡಾಯ

ದಾವಣಗೆರೆ, ಫೆ.21- ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಸ್ಥಾನಗಳಿಗೆ ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ಬರುವ ಮಾರ್ಚ್ 4ರಂದು ಚುನಾವಣೆ ನಡೆಯಲಿದೆ.

ಮೇಯರ್ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಹಾಗೂ ಉಪ ಮೇಯರ್ ಸ್ಥಾನ  ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.  ಬೆಂಗಳೂರು ಪ್ರಾದೇಶಿಕ ಅಮ್ಲಾನ್ ಆದಿತ್ಯ ಬಿಸ್ವಾಸ್  ಚುನಾವಣಾಧಿಕಾರಿಯಾಗಿದ್ದಾರೆ.

56 ಮತದಾರರು : ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ 45 ವಾರ್ಡ್ ಗಳ ಸದಸ್ಯರು,  ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರುಗಳಾದ ಶಾಮನೂರು ಶಿವಶಂಕರಪ್ಪ, ಎಸ್.ಎ. ರವೀಂದ್ರನಾಥ್, ವಿಧಾನ ಪರಿಷತ್ ಸದಸ್ಯರುಗಳಾದ  ಮೋಹನ್ ಕುಮಾರ ಕೊಂಡಜ್ಜಿ, ನಂಜುಂಡಿ ವಿಶ್ವಕರ್ಮ ಕೆ.ಪಿ., ನವೀನ್ ಕೊಟ್ಟಿಗೆ, ರವಿಕುಮಾರ್ ಎನ್., ಡಾ.ತೇಜಸ್ವಿನಿ ಗೌಡ, ಅಬ್ದುಲ್ ಜಬ್ಬಾರ್ ಕೆ., ಕೆ.ಹರೀಶ್ ಕುಮಾರ್, ನಾರಾಯಣ ಸ್ವಾಮಿ ವೈ.ಎ. ಸೇರಿದಂತೆ 56 ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಲಿದ್ದಾರೆ.