ನಗರದಲ್ಲಿ ಇಂದು `ಅಪ್ಪು ಮ್ಯೂಸಿಕಲ್ ನೈಟ್’

ದಾವಣಗೆರೆ, ಮಾ. 17- ಶ್ರೀ ಹರ ಮ್ಯೂಸಿಕಲ್ ವರ್ಲ್ಡ್ ಹಾಗೂ ಶ್ರೀನಿವಾಸ ದಾಸಕರಿಯಪ್ಪ ಇವರ ಸಹಯೋಗದೊಂದಿಗೆ ಅಪ್ಪು ವೈಭವ ಅಪ್ಪು ಮ್ಯೂಸಿಕಲ್ ನೈಟ್ ಕಾರ್ಯಕ್ರಮವನ್ನು ನಾಳೆ ದಿನಾಂಕ 18ರ ಶನಿವಾರ ಸಂಜೆ 5 ಗಂಟೆಗೆ ಆಯೋಜಿಸಲಾಗಿದೆ ಎಂದು ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷ ಆರನೇಕಲ್ಲು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಯದೇವ ವೃತ್ತದಲ್ಲಿ  ನಡೆಯಲಿರುವ ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಉದ್ಘಾಟಿಸಲಿದ್ದಾರೆ. ಪಾಲಿಕೆ ಮೇಯರ್ ವಿನಾಯಕ ಪೈಲ್ವಾನ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಗೀತ ನಿರ್ದೇಶಕ ಸುನೀಲ್ ಮೈರಾ, ಮಂಜುನಾಥ್, ಅರ್ಪಿತ್, ಮಂಜುನಾಥ ಬಂಡೆ, ಮಂಜುಥ ಸ್ವಾಮಿ, ರವಿಕುಮಾರ್ ಇತರರು ಉಪಸ್ಥಿತರಿದ್ದರು.