ವೈಜ್ಞಾನಿಕ ಮನೋಭಾವ ಬೆಳೆಸಲು ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ವೈಜ್ಞಾನಿಕ ಮನೋಭಾವ ಬೆಳೆಸಲು ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ದಾವಣಗೆರೆ, ಮಾ. 15- ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಅತ್ಯುತ್ತಮ ಪ್ರಯತ್ನಗಳನ್ನು ಪ್ರೋತ್ಸಾಹಿಸಲು, ಗುರುತಿಸಲು ಮತ್ತು ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ ಎಂದು ಶ್ರೀ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಎಂ.ಇ. ಶಿವಕುಮಾರ್ ಹೊನ್ನಾಳಿ ತಿಳಿಸಿದರು.

ನಗರದ ಜೈನ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಅನಾವಶ್ಯಕವಾಗಿ ಸಮಯ ವ್ಯರ್ಥ ಮಾಡದೆ, ಸೃಜನಾತ್ಮಕ ಹಾಗೂ ಕ್ರಿಯಾತ್ಮಕ  ಕಾರ್ಯಗಳಲ್ಲಿ ತೊಡಗಿಸಿಕೊಂಡು ಹೆತ್ತವರಿಗೂ ಮತ್ತು ಓದಿದ ಸಂಸ್ಥೆಗೆ ಕೀರ್ತಿ ತನ್ನಿ , ಕಷ್ಟ ಪಟ್ಟು ಓದದೇ ಇಷ್ಟ ಪಟ್ಟು ಓದಿ ಎಂದು ನುಡಿದರು.

ಸಿಕ್ಕ  ಅವಕಾಶಗಳನ್ನು ಉಪಯೋಗ ಮಾಡಿ ಕೊಂಡು, ಎತ್ತರಕ್ಕೆ ಬೆಳೆಯಿರಿ. ನಿಮ್ಮ ಮೊದಲ ಸಂಬಳದಲ್ಲಿ ಓಳ್ಳೆ ಒಂದು ಪುಸ್ತಕ ತೆಗೆದುಕೊಳ್ಳಿ ಹಾಗೆ ನಿಮ್ಮ ತಾಯಿಯವರಿಗೆ ಒಂದು ಓಳ್ಳೆಯ ಗಿಫ್ಟ್ ಕೊಡಿ ಹಾಗೆ ನಿಮ್ಮೊಟ್ಟಿಗೆ ನಿಮ್ಮ ಆತ್ಮಬಲ ಹೆಚ್ಚಿಸಿಕೊಳ್ಳಿ. ಯಶಸ್ಸು ನಿಮ್ಮೊಟ್ಟಿಗೆ ಬರುತ್ತದೆ ಎಂದು ಶಿವಕುಮಾರ್ ಹೇಳಿದರು.

ಜೈನ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಡಿ.ಬಿ. ಗಣೇಶ್ ಮಾತನಾಡಿ,  ಸತತ ಪ್ರಯತ್ನ, ಶಿಸ್ತು ಮತ್ತು ಏಕಾಗ್ರತೆಯಿಂದ ಅಭ್ಯಾಸ ಮಾಡುವುದು ವಿದ್ಯಾರ್ಥಿಗಳ ಲಕ್ಷಣ. ತನ್ನ ಸಾಮರ್ಥ್ಯವನ್ನು ತಾನು ಅರಿತು ಛಲದಿಂದ ಅಭ್ಯಾಸ ಮಾಡಿದರೆ ಮುಂದೊಂದು ದಿನ ಗುರಿ ಮುಟ್ಟಲು ಸಾಧ್ಯ ಎಂದು ಹೇಳಿದರು. 

ಗಣಿತ ವಿಭಾಗದ ಮುಖ್ಯಸ್ಥರಾದ ಡಾ. ಸದಾನಂದ ಪಾಟೀಲ್   ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಗಣೇಶ್,  ಎನ್. ಎಲ್ಲಪ್ಪ,  ಪ್ರೊ. ಅಪೂರ್ವ  ರಾವ್, ಪ್ರೊ. ಎಸ್. ರಘು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆಫ್ರಿನ್ ಸ್ವಾಗತಿಸಿದರು.  ಶ್ರಿಗೌರಿ ವಂದಿಸಿದರು.  ಎಸ್. ಸ್ಪೂರ್ತಿ, ಕೆ.ಸಿ. ವಿನು ಕಾರ್ಯಕ್ರಮ ನಿರೂಪಿಸಿದರು.