ವಿಶ್ವಕ್ಕೆ ಮಾರ್ಗದರ್ಶಕ ಮೋದಿ

ವಿಶ್ವಕ್ಕೆ ಮಾರ್ಗದರ್ಶಕ ಮೋದಿ

ರಾಣೇಬೆನ್ನೂರು, ಮಾ. 15- ಬಡವರು ಬಡವರಾಗಿ, ಅನಕ್ಷರಸ್ಥರು ಅನಕ್ಷರಸ್ಥರಾಗಿಯೇ ಇರಬೇಕೇಂಬುದು ಕಾಂಗ್ರೆಸ್ ಸಿದ್ಧಾಂತ. ದೇಶದ ಅಭಿವೃದ್ಧಿ, ಬಡವರ, ರೈತರ, ಯುವಕರ ಪರ ಚಿಂತನೆ ಮಾಡುವುದು ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಬರಲಿಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.  

ರಾಣೇಬೆನ್ನೂರಿನಲ್ಲಿ ನಡೆದ ಹಾವೇರಿ ಜಿಲ್ಲಾ ಯುವ ಮೋರ್ಚಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ವಿಶ್ವಕ್ಕೆ ಮಾರ್ಗದರ್ಶಕ ಬೇಕಿದ್ದಾರೆ. ಅಂತಹ ವ್ಯಕ್ತಿತ್ವ ಹೊಂದಿರುವ ಪ್ರದಾನಿ ನರೇಂದ್ರ ಮೋದಿ ಅವರತ್ತ ವಿಶ್ವದ ಗಮನ ಹರಿದಿದೆ. ರಷ್ಯಾ-ಉಕ್ರೇನ್ ಯುದ್ದವನ್ನು ನಿಲ್ಲಿಸುವಂತೆ ಸೂಚಿಸಿದ ಮೋದಿ, ಕಾಶ್ಮೀರ ಹಾಗೂ ಇತರೆಡೆ ಇರುವ ಉಗ್ರವಾದಕ್ಕೆ ಕಡಿವಾಣ ಹಾಕಿದ ಧೀಮಂತ ನಾಯಕ  ಅವರು ಎಂದು ವಿಜಯೇಂದ್ರ ಹೇಳಿದರು.

ಬಡವರಿಗೆ ಮನೆ, ಹೆದ್ದಾರಿ ನಿರ್ಮಾಣ, ರೈಲು ಮಾರ್ಗ ನಿರ್ಮಾಣಕ್ಕೆ ಹಣ ಹೀಗೆ ಕರ್ನಾಟಕದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಪ್ರಧಾನಿ ಸಹಾಯ ಹಸ್ತ ಚಾಚಿದ್ದಾರೆ. ಅಭಿವೃದ್ಧಿಯೇ ಬಿಜೆಪಿಯ ಚಿಂತನೆಯಾಗಿದೆ. ಮತ್ತೊಮ್ಮೆ ಬಿಜೆಪಿಗೆ ಅವಕಾಶ ಕೊಡಿ ಎಂದು ವಿಜಯೇಂದ್ರ ತಿಳಿಸಿದರು.

ಶಾಸಕ ಅರುಣಕುಮಾರ ಪೂಜಾರ, ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ವೀಕ್ಷಕ ಡಾ. ಎ.ಎಚ್. ಶಿವಯೋಗಿಸ್ವಾಮಿ, ಮಂಡಳಿಗಳ ನಿರ್ದೇಶಕಿಯರಾದ ಭಾರತಿ ಜಂಬಗಿ, ಭಾರತಿ ಅಳವಂಡಿ, ಸಾರಿಗೆ ಸಂಸ್ಥೆ ಅಧ್ಯಕ್ಷ ಡಾ. ಬಸವರಾಜ ಕೇಲಗಾರ, ಚೋಳಪ್ಪ ಕಸವಾಳ, ಎಸ್.ಎಸ್.ರಾಮಲಿಂಗಣ್ಣನವರ, ಎ.ಬಿ.ಪಾಟೀಲ, ಗ್ರಾಮೀಣ ಅಧ್ಯಕ್ಷ ಬಸವರಾಜ ಕೇಲಗಾರ, ಬಸವರಾಜ ಹುಲ್ಲತ್ತಿ, ದೀಪಕ್ ಹರಪನಹಳ್ಳಿ ಮತ್ತಿತರರು ಮಾತನಾಡಿದರು.