ಜನಸಂಕಲ್ಪ ಯಾತ್ರೆಗೆ ಅದ್ಧೂರಿ ಸ್ವಾಗತ

ಜನಸಂಕಲ್ಪ ಯಾತ್ರೆಗೆ ಅದ್ಧೂರಿ ಸ್ವಾಗತ

ಜಗಳೂರು,  ಮಾ.17- ಪಟ್ಟಣದ ಈಶ್ಬರ ದೇವಸ್ಥಾನದಿಂದ  ಮಹಾತ್ಮ ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತದವರೆಗೆ ಬಿಜೆಪಿ ಜನ ಸಂಕಲ್ಪ  ರಥ ಯಾತ್ರೆ ಅದ್ಧೂರಿಯಾಗಿ ಮೆರವಣಿಗೆ ಜರುಗಿತು.

ಸ್ವಾಗತ ಕೋರಿ ಮಾತನಾಡಿದ ಶಾಸಕ ಎಸ್.ವಿ.ರಾಮಚಂದ್ರ, ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಪಕ್ಷದ ಗೆಲುವಿನ ಸಂಕಲ್ಪ ಅಗತ್ಯ. ಕೇಂದ್ರ ಮತ್ತು ರಾಜ್ಯದ ಬಿಜೆಪಿ ಆಡಳಿತಾವಧಿಯ ಫಲವಾಗಿ ವಿಧಾನಸಭಾ ಕ್ಷೇತ್ರಕ್ಕೆ  ರೂ. 3500 ಕೋಟಿ ಅನುದಾನ ತಂದಿರುವೆ. ಮಹತ್ವದ ನೀರಾವರಿ ಯೋಜನೆಗಳು ಸಾಕಾರಗೊಂಡಿವೆ. ಮುಂದಿನ ಬಾರಿಯೂ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲುವು ಖಚಿತ. ಜಗಳೂರು ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಎಸ್.ವಿ.ರಾಮಚಂದ್ರ ಅವಿರತ ಶ್ರಮ ವಹಿಸಿದ್ದಾರೆ  ಎಂದರು.

ಈ ಸಂದರ್ಭದಲ್ಲಿ  ಬಿಜೆಪಿ ರಾಜ್ಯ ಕಾರ್ಯದರ್ಶಿ ಶಿವರುದ್ರಪ್ಪ, ವಿಧಾನ‌ಸಭಾ ಕ್ಷೇತ್ರ ಉಸ್ತುವಾರಿ ಆರುಂಡಿ ನಾಗರಾಜ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಿ.ವಿ.ನಾಗಪ್ಪ, ಮಂಡಲ ಅಧ್ಯಕ್ಷ ಎಚ್.ಸಿ.ಮಹೇಶ್, ಸೊಕ್ಕೆ ನಾಗರಾಜ್, ಎಸ್.ಕೆ.ಮಂಜುನಾಥ್, ಗಡಿಮಾಕುಂಟೆ ಸಿದ್ದೇಶ್, ಪ.ಪಂ ಸದಸ್ಯರಾದ ಆರ್.ತಿಪ್ಪೇಸ್ವಾಮಿ, ದೇವರಾಜ್, ನವೀನ್ ಕುಮಾರ್, ಮುಖಂಡರಾದ ಹನುಮಂತಪ್ಪ, ಸಿದ್ದಪ್ಪ ಪೂಜಾರ್, ಶಿವಣ್ಣ, ತಿಪ್ಪೇಸ್ವಾಮಿ ಭಾಗವಹಿಸಿದ್ದರು.