ಹಾಲಿವಾಣದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ

ಹಾಲಿವಾಣದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ

ಮಲೇಬೆನ್ನೂರು, ಮಾ.17- ಹಾಲಿವಾಣ ಗ್ರಾಮದಲ್ಲಿ ಇತ್ತೀಚೆಗೆ ಶಾಸಕ ಎಸ್‌. ರಾಮಪ್ಪ ಅವರು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ, ಗ್ರಾ.ಪಂ ನಿಂದ ಸನ್ಮಾನ ಸ್ವೀಕರಿಸಿದರು.

ಗ್ರಾಮದಲ್ಲಿರುವ ಪ್ರಜಾಪಿತ ಬ್ರಹ್ಮಾ ಕುಮಾರೀಸ್‌ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಶಿವರಾತ್ರಿ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಈಶ್ವರೀಯ ವಿ.ವಿ. ಕೇಂದ್ರದ ಕಟ್ಟಡಕ್ಕೆ 5 ಲಕ್ಷ ರೂ. ಅನುದಾನ ನೀಡುವುದಾಗಿ ಹೇಳಿದರು.

ನಂತರ ಹಾಲಿವಾಣದಿಂದ ಕೊಪ್ಪ ಗ್ರಾಮ ಸಂಪರ್ಕಿಸುವ ರಸ್ತೆಯ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಆಯು ರ್ವೇದಿಕ್‌ ಆಸ್ಪತ್ರೆಯ ಮೇಲ್ಭಾಗದಲ್ಲಿ ನಿರ್ಮಿಸಿ ರುವ ಯೋಗ ಮಂದಿರ ಕಟ್ಟಡವನ್ನು ಉದ್ಘಾಟಿಸಿದರು.

ಅಲ್ಲದೆ, ಗ್ರಾಮದ ಎ.ಕೆ. ಕಾಲೋನಿಯ ಸ.ಹಿ.ಪ್ರಾ.ಶಾಲೆಯಲ್ಲಿ ಹೆಚ್ಚುವರಿ ಕೊಠಡಿ ನಿರ್ಮಾಣ ಮತ್ತು ಈಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ 8 ಲಕ್ಷ ರೂ. ವೆಚ್ಚದಲ್ಲಿ ಕೊಠಡಿಗಳ ನಿರ್ಮಾಣಕ್ಕೆ ಇದೇ ವೇಳೆ ಶಾಸಕರು ಚಾಲನೆ ನೀಡಿದರು.

ಗ್ರಾ.ಪಂ. ಅಧ್ಯಕ್ಷ ಡಿ.ಡಿ. ಚಿಕ್ಕಪ್ಪ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಮಾಜಿ ಅಧ್ಯಕ್ಷ ಎಸ್‌.ಜಿ. ಪರಮೇಶ್ವರಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಂಜುನಾಥ್‌ ಪಟೇಲ್‌, ಯುವಮುಖಂಡ ಕೆ.ಪಿ. ಗಂಗಾಧರ್, ಗ್ರಾ.ಪಂ. ಸದಸ್ಯರಾದ ಶ್ರೀಮತಿ ಲಕ್ಷ್ಮಿದೇವಿ ಮಂಜುನಾಥ್‌, ಶ್ರೀಮತಿ ಲಲಿತಮ್ಮ ವಿಜಯಕುಮಾರ್‌, ಎಸ್‌.ಇ. ಹಾಲೇಶ್‌, ಕಬ್ಬಾರ್‌ ಚಂದ್ರಪ್ಪ, ಪಿಡಿಓ ಶ್ರೀನಿವಾಸ್‌, ಗ್ರಾಮದ ಮುಖಂಡರಾದ ಕೆ.ಪಿ. ಕುಮಾರಸ್ವಾಮಿ, ಕೆ.ಎಂ. ಸಿದ್ದಯ್ಯ, ಎಸ್‌.ಜಿ. ಸಿದ್ದಪ್ಪ, ಟಿ. ಯೋಗೇಶ್‌, ಕೋರಿ ನಾಗರಾಜ್‌, ಎ.ಕೆ. ಹನುಮಂತಪ್ಪ  ಭಾಗವಹಿಸಿದ್ದರು.