ಶ್ರೀಶೈಲ ತಲುಪಿದ ಹೊನ್ನಾಳಿ ಪಾದಯಾತ್ರೆ ತಂಡ

ಶ್ರೀಶೈಲ ತಲುಪಿದ ಹೊನ್ನಾಳಿ ಪಾದಯಾತ್ರೆ ತಂಡ

ಹೊನ್ನಾಳಿ, ಮಾ. 17- ಹೊನ್ನಾಳಿಯಿಂದ ಹೊರಟಿರುವ ಪಾದಯಾತ್ರೆ ತಂಡದವರು ಇಂದು ಶ್ರೀಶೈಲ ಪೀಠ ತಲುಪಿದ್ದಾರೆ ಎಂದು `ವಿಕ’ ಸೂಪರ್ ಸ್ಟಾರ್ ರೈತ ಪ್ರಶಸ್ತಿ ಪುರಸ್ಕೃತ ಯುವಕ ಅರಕೆರೆ ಎಸ್.ಜಿ. ಮಧುಗೌಡ ಹೇಳಿದರು. ಶ್ರೀಶೈಲ ಪೀಠದಿಂದ ಸುಮಾರು 70 ಕಿಮೀ ಅಂತರದಲ್ಲಿರುವ ಮಾರ್ಕಾಪುರಂ ಭಾಗದಿಂದ ಗುರುವಾರ ಅವರು ಪತ್ರಿಕೆಯೊಂದಿಗೆ ಮಾತನಾಡಿದರು.

ಮಾರ್ಕಾಪುರಂ ಭಾಗದಿಂದ ದುರ್ಗಮ ಅರಣ್ಯ ಪ್ರದೇಶದಲ್ಲಿ ಪಾದಯಾತ್ರೆ ಸಾಗಲಿದೆ. ಶ್ರೀಶೈಲ ಜಗದ್ಗುರುಗಳ ದರ್ಶನದ ಬಳಿಕ ಶ್ರೀ ಮಲ್ಲಿಕಾರ್ಜುನ ಸ್ವಾಮಿ, ಶ್ರೀ ಭ್ರಮರಾಂಬಿಕಾ ದೇವಿ ದರ್ಶನ ಪಡೆಯಲಾಗುವುದು. ಬಳಿಕ ಹೊನ್ನಾಳಿ ಕಡೆಗೆ ನಾವು ಪಯಣ ಬೆಳೆಸುತ್ತೇವೆ ಎಂದು ತಿಳಿಸಿದರು.

ಹಿರೇಕಲ್ಮಠದ ಒಡೆಯರ್ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಆಶಯದಂತೆ ಮುಂದಿನ ವರ್ಷ ಒಂದು ಸಾವಿರ ಪಾದಯಾತ್ರಿಗಳು ಹೊನ್ನಾಳಿಯಿಂದ ಪಾದಯಾತ್ರೆ ಆರಂಭಿಸಲಿದ್ದಾರೆ. ಮಲ್ಲಯ್ಯ ಆ ಶಕ್ತಿಯನ್ನು ದಯಪಾಲಿಸಲಿದ್ದಾನೆ ಎಂದು ಹೇಳಿದರು.