ಉಕ್ಕಡಗಾತ್ರಿಯಲ್ಲಿ ನಾಳೆ ತಾಲ್ಲೂಕು ಸಾಹಿತ್ಯ ಸಮ್ಮೇಳನ

ಉಕ್ಕಡಗಾತ್ರಿಯಲ್ಲಿ ನಾಳೆ ತಾಲ್ಲೂಕು ಸಾಹಿತ್ಯ ಸಮ್ಮೇಳನ

ಹರಿಹರ, ಮಾ. 15 – ಶುಕ್ರವಾರ ಉಕ್ಕಡಗಾತ್ರಿಯಲ್ಲಿ 3ನೇ ತಾಲ್ಲೂಕು ಸಾಹಿತ್ಯ ಸಮ್ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಡಿ.ಎಂ.ಮಂಜುನಾಥಯ್ಯ ಅವರು ಪತ್ರಿಕಾ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮ್ಮೇಳನದ ಸರ್ವ ಅಧ್ಯಕ್ಷರನ್ನಾಗಿ ಹಿರಿಯ ಸಾಹಿತಿಗಳಾದ ಷಣ್ಮುಖಪ್ಪ ಕಮಲಾಪುರ ಇವರನ್ನು ಸರ್ವಾನುಮತ ದಿಂದ ಆಯ್ಕೆ ಮಾಡಲಾಗಿದೆ.  

ಸುದ್ದಿಗೋಷ್ಠಿಯಲ್ಲಿ ಕಸಾಪ ಜಿಲ್ಲಾ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ, ಜಿಗಳಿ ಪ್ರಕಾಶ್, ತಾಲ್ಲೂಕು ಕಾರ್ಯದರ್ಶಿಗಳಾದ ರೇವಣನಾಯ್ಕ, ಚಿದಾನಂದ ಕಂಚಿಕೆರೆ, ನೌಕರರ ಸಂಘದ ಅಧ್ಯಕ್ಷ ಎ.ಕೆ.ಭೂಮೇಶ್, ವಿಜಯ ಮಹಾಂತೇಶ್, ಶ್ರೀಧರಮಯ್ಯ, ಎಂ.ಉಮ್ಮಣ್ಣ, ಸದಾನಂದ, ನಾಗರಾಜ ಗೌಡ, ಎನ್.ಇ. ಸುರೇಶ್ ಸ್ವಾಮಿ, ದಂಡಿ ತಿಪ್ಪೇಸ್ವಾಮಿ, ಸಲಾಂ ಸಾಬ್ ಮತ್ತಿತರರು ಉಪಸ್ಥಿತರಿದ್ದರು.