ಗಮನ ಸೆಳೆದ `ಬಿಜ್ಜಳ ನ್ಯಾಯ’ ನಾಟಕ

ಗಮನ ಸೆಳೆದ `ಬಿಜ್ಜಳ ನ್ಯಾಯ’ ನಾಟಕ

ಮಲೇಬೆನ್ನೂರು, ಮಾ. 15- ಇಲ್ಲಿನ ನೀರಾವರಿ ಇಲಾಖೆ ಆವರಣದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಶಿವಸಂಚಾರ ನಾಟಕ ಪ್ರದರ್ಶನದಲ್ಲಿ ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾ ಸಂಘದ ಕಲಾವಿದರು ಅಭಿನಯಿಸಿದ `ಬಿಜ್ಜಳ ನ್ಯಾಯ’ ನಾಟಕ ಎಲ್ಲರ ಗಮನ ಸೆಳೆಯಿತು.

ಎಸ್.ಜಿ. ಸಿದ್ಧರಾಮಯ್ಯ ರಚನೆಯ ಈ ನಾಟಕದ ವಿನ್ಯಾಸ ಹಾಗೂ ನಿರ್ದೇಶನವನ್ನು ನವೀನ್ ಮಂಡ್ಯ ಮಾಡಿದ್ದಾರೆ.

ಮೂರು ದಿನಗಳ ಕಾಲ ಪ್ರದರ್ಶನಗೊಳ್ಳುವ ಶಿವಸಂಚಾರ ನಾಟಕ ಪ್ರದರ್ಶನವನ್ನು ಮಾಜಿ ಶಾಸಕ ಬಿ.ಪಿ. ಹರೀಶ್ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಹರೀಶ್ ಅವರು, ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು, ಶಿವಸಂಚಾರ ನಾಟಕಗಳ ಮೂಲಕ ಸಮಾಜದಲ್ಲಿ ಪರಿವರ್ತನೆಗೆ ಶ್ರಮಿಸುತ್ತಿದ್ದಾರೆ. ನಾಟಕಗಳನ್ನು ನೋಡಿ ನಾವು ನಮ್ಮ ಬದುಕಿನಲ್ಲಿ ಬದಲಾವಣೆ ತಂದು ಕೊಳ್ಳಬೇಕೆಂದು ಕರೆ ನೀಡಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ಹಿರಿಯ ಮುಖಂಡ ಹಾಗೂ ರಂಗ ಕಲಾವಿದ ಕೆ.ಜಿ. ವೀರನಗೌಡ, ಪುರಸಭೆ ಸದಸ್ಯರಾದ ಶ್ರೀಮತಿ ರೋಸಮ್ಮ ರುಸ್ತುಂ, ಶ್ರೀಮತಿ ಸುಲೋಚನಮ್ಮ, ಓ.ಜಿ. ಕುಮಾರ್, ಶ್ರೀಮತಿ ಮೀನಾಕ್ಷಮ್ಮ, ಜಿಗಳೇರ ಹಾಲೇಶಪ್ಪ, ಶ್ರೀಮತಿ ಸುಧಾ ಪಿ.ಆರ್. ರಾಜು, ಬೆಣ್ಣೆಹಳ್ಳಿ ಸಿದ್ದೇಶ್ ಮತ್ತಿತರರು ಭಾಗವಹಿಸಿದ್ದರು.

ಮಲೇಬೆನ್ನೂರು ಸಾಧು ವೀರಶೈವ ಸಮಾಜದ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಕೆ.ಜಿ. ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ಮುದೇಗೌಡ್ರು ತಿಪ್ಪೇಶ್ ಸ್ವಾಗತಿಸಿದರು. ಚಿಟ್ಟಕ್ಕಿ ನಾಗರಾಜ್ ನಿರೂಪಿಸಿದರು. ಓ.ಜಿ. ಅರುಣ್ ವಂದಿಸಿದರು.

ಗುರುವಾರ ಸಂಜೆ 7 ಗಂಟೆಗೆ `ನೆಮ್ಮದಿ ಅಪಾರ್ಟ್ ಮೆಂಟ್’ ನಾಟಕ ಪ್ರದರ್ಶನಗೊಳ್ಳಲಿದೆ.