ಹರಿಹರೇಶ್ವರ ಬ್ಯಾಂಕ್ ಅಧ್ಯಕ್ಷರಾಗಿ ರವೀಂದ್ರ, ಉಪಾಧ್ಯಕ್ಷರಾಗಿ ಹಾಲೇಶ್

ಹರಿಹರೇಶ್ವರ ಬ್ಯಾಂಕ್ ಅಧ್ಯಕ್ಷರಾಗಿ ರವೀಂದ್ರ, ಉಪಾಧ್ಯಕ್ಷರಾಗಿ ಹಾಲೇಶ್

ಹರಿಹರ, ಮಾ. 15 – ನಗರದ ಶ್ರೀ ಹರಿಹರೇಶ್ವರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ರವೀಂದ್ರ ಕೆ. ಮತ್ತು ಉಪಾಧ್ಯಕ್ಷರಾಗಿ ಹಾಲೇಶ್ ಬಾವಿಕಟ್ಟಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಹೆಚ್.ಸುನೀತಾ ತಿಳಿಸಿದ್ದಾರೆ.

ನಗರದ ಮುಖ್ಯರಸ್ತೆಯ ಶ್ರೀ ಹರಿಹರೇಶ್ವರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಚುನಾವಣೆಯ ಪ್ರಕ್ರಿಯೆ ಬೆಳಗ್ಗೆ ಹನ್ನೊಂದು ಗಂಟೆಗೆ ಪ್ರಾರಂಭವಾಯಿತು. ಅಧ್ಯಕ್ಷ ಸ್ಥಾನಕ್ಕೆ ರವೀಂದ್ರ ಕೆ., ಉಪಾಧ್ಯಕ್ಷ ಸ್ಥಾನಕ್ಕೆ ಹಾಲೇಶ್ ಬಾವಿಕಟ್ಟಿ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾಯಿತು.

ಈ ಸಂದರ್ಭದಲ್ಲಿ ಶ್ರೀ ಹರಿಹರೇಶ್ವರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ ಬಿ.ಕೆ. ಅನ್ವರ್ ಪಾಷಾ, ಕೆ ಅಣ್ಣಪ್ಪ, ಜಿ.ಕೆ. ಮಲ್ಲಿಕಾರ್ಜುನ, ಪರಶುರಾಮ್ ಅಂಬೇಕರ್, ಹೆಚ್.ಆರ್. ವೀಣಾ ಸಿದ್ದೇಶ್ ಒಳಗಡ್ಡಿ, ವಿದ್ಯಾ ಆರ್. ಮೆಹರ್ವಾಡೆ, ಹೆಚ್.ಎಂ. ವೀರಭದ್ರಯ್ಯ, ಜಿ. ವಿ. ಪ್ರವೀಣ್ ಕುಮಾರ್, ಬಿ. ಆರ್. ಈಶ್ವರ್, ನಾಗೇಂದ್ರ ಸಾ ಕಾಟ್ವೆ, ಮಾಜಿ ಅಧ್ಯಕ್ಷ ಜಿ. ವೀರಯ್ಯ, ಪ್ರಧಾನ ವ್ಯವಸ್ಥಾಪಕಿ ರೇಖಾ ಮೆಹರ್ವಾಡೆ ಮತ್ತಿತರರು ಉಪಸ್ಥಿತರಿದ್ದರು.